BLDE ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನ

BI ಬಿಜಾಪುರ : ಬಿ.ಎಲ್.ಡಿ.ಇ. ಸಂಸ್ಥೆಯ ವಚನ ಪಿತಾಮಹ ಡಾ|| ಫ.ಗು. ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ಹಾಗೂ ದ್ವಿತೀಯ ಪದವಿಪೂರ್ವ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿ, ಸೃಜನ ಶೀಲತೆ ಉತ್ತೇಜಿಸಲು ‘ಆವಿಷ್ಕಾರ-2019’ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಬೆಳಗಾವಿ, ಬಾಗಲಕೋಟ, ಯಾದಗೀರ್, ಕಲಬುರ್ಗಿ ಹಾಗೂ ವಿಜಯಪುರ ಜಿಲ್ಲೆಯ 150 ಕಾಲೇಜುಗಳಿಂದ 350ಕ್ಕೂ ಅಧಿಕ ಪ್ರಾತ್ಯಕ್ಷತೆಯ ಮಾದರಿಗಳನ್ನು ವಿದ್ಯಾರ್ಥಿಗಳು ತುಂಬಾ ಉತ್ಸುಕತೆಯಿಂದ ಪ್ರದರ್ಶಿಸಿದರು. ವಿದ್ಯಾರ್ಥಿಗಳಲ್ಲಿ ನಾನಾ ರೀತಿಯ ಕೌಶಲ್ಯತೆ, ತಾಂತ್ರಿಕ ನಿಪುಣತೆ ಪ್ರದರ್ಶಿಸಲು ಬಿ.ಎಲ್.ಡಿ.ಇ. ಸಂಸ್ಥೆಯು ಉತ್ತಮ ವೇದಿಕೆಯನ್ನು ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ತಾವೇ ತಯಾರು ಮಾಡಿದ ಮಾದರಿಗಳಾದ ಮಾರ್ಡನ್‌ಸಿಟಿ, ಸೋಲಾರ್‌ಡ್ರಿಪ್ ಇರಿಗೇಶನ್ ಮತ್ತು ಸೋಲಾರ ಬಸ್, ಸ್ಮಾರ್ಟ್ ಬ್ಲಾಯಿಂಡ್ ಸ್ಟಿಕ್, ಎನ್‌ವರ‍್ನಾಮೆಂಟಲ್ ಸೆಲ್ಯೂಷನ್, ಮಳೆಕೊಯ್ಲು, ಸರಳವಾಗಿ ಕಸವನ್ನು ತೆಗೆಯುವುದು, ಅಟೋಮೆಟಿಕ್ ರೇಲ್ವೇ ಗೇಟ್, ಅಟೋಮೆಟಿಕ್ ಸ್ಟ್ರೀಟ್ ಲೈಟ್ ಇನ್ನು ಮುಂತಾದ ಮಾದರಿಗಳನ್ನು ಪ್ರದರ್ಶಿಸಿ, ಅದರ ವಿವರ ಹಾಗೂ ಉಪಯುಕ್ತತೆಯ ಕುರಿತು ಮಾಹಿತಿಯನ್ನು ವೀಕ್ಷಕರಿಗೆ ತಿಳಿಸಿದರು. ವಸ್ತುಪ್ರದರ್ಶನ ವೀಕ್ಷಿಸಲು ಸುಮಾರು 5000 ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಿ ಲಾಭ ಪಡೆದರು. ಇದಲ್ಲದೇ ಕಾಲೇಜಿನಲ್ಲಿ ಓಪನ್ ಡೇ ಆಚರಿಸಲಾಯಿತು. ಇಂಜಿನಿಯರಿಂಗ ವಿದ್ಯಾರ್ಥಿಗಳು ತಯಾರಿಸಿದ ಪ್ರಾತ್ಯಕ್ಷತೆ ಮಾದರಿಗಳು ಗಮನ ಸೆಳೆದವು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ವ್ಹಿ.ಪಿ. ಹುಗ್ಗಿರವರು ತಿಳಿಸಿದರು.
ಬೆಳಿಗ್ಗೆ 10.00 ಗಂಟೆಗೆ ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಆರ್.ವ್ಹಿ. ಕುಲಕರ್ಣಿ, ಡಾ. ಕೆ.ಜಿ. ಪೂಜಾರಿ, ಬಿ.ಆರ್. ಪಾಟೀಲ ಮತ್ತು ಐ.ಎಸ್. ಕಾಳಪ್ಪನವರು ಆವಿಷ್ಕಾರ-2019ನ್ನು ರಿಬ್ಬನ್ ಕತ್ತಿರಿಸುವ ಮೂಲಕ ಉದ್ಘಾಟಿಸಿದರು.
ಅತ್ಯುತ್ತಮ ಪ್ರದರ್ಶನಕ್ಕೆ ಆಯ್ಕೆ ಆದ 3 ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಪ್ರಥಮ ಬಹುಮಾನ ರೂ. 25,000/- ನಗದು ಪುರಸ್ಕಾರ, Chaitanya PU College, Sirsi (Agri Hucks) ತಂಡಕ್ಕೆ ಬಂದಿರುತ್ತದೆ. ದ್ವಿತೀಯ ಬಹುಮಾನ ರೂ. 15,000/- ನಗದು ಪುರಸ್ಕಾರ New PU College, Raibag (Walker cum Smart Wheel Chair) ತಂಡಕ್ಕೆ ಹಾಗೂ ತೃತೀಯ ಬಹುಮಾನ ರೂ. 10,000/- ನಗದು ಪುರಸ್ಕಾರ St.Joseph PU College, Vijayapur (Blood pressure with respect to salt) ತಂಡಕ್ಕೆ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಇದಲ್ಲದೆ ಉತ್ತಮ ಪ್ರದರ್ಶನ ಮಾಡಿದ ಐದು ತಂಡಗಳಿಗೆ ರೂ. 5,000/-ರಂತೆ ಸಮಾದಾನಕರ ಬಹುಮಾನ ಕೊಡಲಾಯಿತು.

ಬಹುಮಾನ ವಿತರಣೆಯ ಕಾರ್ಯಕ್ರಮ ಸಂಜೆ 3.30 ಗಂಟೆಗೆ ಜರುಗಿತು. ಮುಖ್ಯ ಅತಿಥಿಗಳಾಗಿ ಪ್ರೊ. ಜಯತೀರ್ಥ ಮುದಕವಿ, ಗೌರವ ಅತಿಥಿಗಳಾಗಿ ಡಾ. ಶಿವಪ್ರಸಾದ ಸಿ.ಜಿ., ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಬಿ.ಎಲ್.ಡಿ.ಇ. ಸಂಸ್ಥೆಯ ನಿರ್ದೇಶಕರಾದ ಬಸನಗೌಡ ಎಂ. ಪಾಟೀಲ (ರಾಹುಲ್), ಆಡಳಿತಾಧಿಕಾರಿಗಳು, ಡಾ. ಆರ್.ವ್ಹಿ. ಕುಲಕರ್ಣಿ ಭಾಗವಹಿಸಿ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ವ್ಹಿ.ಪಿ. ಹುಗ್ಗಿರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಆವಿಷ್ಕಾರ-2019 ವಸ್ತು ಪ್ರದರ್ಶನದ ಸಂಯೋಜಕ ಪ್ರೊ. ಸಂತೋಷ ಚಪ್ಪರ ಉಪಸ್ಥಿತರಿದ್ದರು.

error: Content is protected !!