ಕೋವಿಡ್-19 ಹಿನ್ನೆಲೆಯಲ್ಲಿ “ಶಬ್-ಎ-ಬರಾತ್ ಹಬ್ಬದಂದು ಯಾರೂ ಒಟ್ಟುಗೂಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಾರದು” : ಡಿಸಿ ವೈ.ಎಸ್ ಪಾಟೀಲ

BI ಬಿಜಾಪುರ : ಕೋವಿಡ್-19 ವೈರಾಣುಗಳಿಂದ ಹರಡುವ ಅಪಾಯಕಾರಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಜಿಲ್ಲೆಯ ಎಲ್ಲ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಭಜನೆ ಮುಂತಾದ ಸಾಮೂಹಿಕ ಒಗ್ಗೂಡುವಿಕೆಯನ್ನು ನಿಷೇಧಿಸಿ ಆದೇಶಿಸಲಾಗಿದ್ದು, ಅದರಂತೆ ಏಪ್ರೀಲ್ 09 ರಂದು ಮುಸ್ಲಿಂರಿಗೆ ಅತ್ಯಂತ ಪವಿತ್ರ ದಿನವಾದ ಶಬ್-ಎ-ಬರಾತ್ ಹಬ್ಬದ ದಿನದಂದು ಯಾರೂ ಒಟ್ಟುಗೂಡಿ ಸಾಮೂಹಿಕ ಧಾರ್ಮಿಕ ಪ್ರಾರ್ಥನೆ ಸಲ್ಲಿಸಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ. ಈ ಹಬ್ಬದ ಅಂಗವಾಗಿ ಮಸೀದಿ, ಮುಸ್ಲಿಂ […]

Continue Reading

ಲಾಕ್‌ಡೌನ್ ಜಾರಿ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗಾವಹಿಸಿ : ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ

BI ಬಿಜಾಪುರ : ಸರ್ಕಾರದ ನಿರ್ದೇಶನದಂತೆ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಕೃಷಿ ಚಟುವಟಿಕೆಗಳು ಮತ್ತು ಅಗತ್ಯ ವಸ್ತುಗಳಿಗೆ ಮುಕ್ತ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ರೈತರು ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ ಪಾಟೀಲ ಅವರು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ […]

Continue Reading

ಕೋವಿಡ್-19 ಮುನ್ನೆಚ್ಚರಿಕೆ- ಆರೋಗ್ಯದ ಹಿತದೃಷ್ಟಿಯಿಂದ ಶಬ್ -ಎ- ಬರಾತ್‌ದಂದು ಪ್ರಾರ್ಥನಾ, ಸ್ಥಳಗಳ ಭೇಟಿಗೆ ನಿರ್ಬಂಧ

BI ಬಿಜಾಪುರ : ಸರ್ಕಾರದ ನಿರ್ದೇಶನದನ್ವಯ ಕೋವಿಡ್-19 ಮುನ್ನೆಚ್ಚರಿಕೆಯಾಗಿ ಇದೇ ಎಪ್ರೀಲ್ 9ರಂದು ಮುಸ್ಲಿಂರಿಗೆ ಅತ್ಯಂತ ಮಹತ್ವದ ದಿನವಾಗಿರುವ ಶಬ್-ಎ-ಬರಾತ್‌ದಂದು ಯಾರೂ ಒಟ್ಟುಗೂಡಿ ಧಾರ್ಮಿಕ ಪ್ರಾರ್ಥನೆ ಅಂಗವಾಗಿ ಮಸೀದಿ, ಮುಸ್ಲಿಂ ಖಬ್ರಸ್ಥಾನ ಹಾಗೂ ದರ್ಗಾಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಆಕ್ವಾಫ್ (AUQAF) ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಇಸ್ಲಾಹುದ್ದೀನ್ ಗದ್ಯಾಳ ಅವರು ಆದೇಶ ಹೊರಡಿಸಿದ್ದಾರೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಕೋವಿಡ್-19 ಅಪಾಯದ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಮುಸ್ಲಿಂ ಖಬ್ರಸ್ಥಾನಗಳಲ್ಲಿ ಮತ್ತು […]

Continue Reading

ರಜಾ ಅವಧಿಯಲ್ಲೂ ಕಾರ್ಯ ನಿರ್ವಹಣೆ, 400 ಪಡಿತರ ಅಂಗಡಿಗಳಿಗೆ ಅಕ್ಕಿ ಮತ್ತು ಗೋಧಿ ಸಾಗಾಣಿಕೆ ಮಾಡಲಾಗಿದೆ : ಡಿಸಿ ವೈ.ಎಸ್ ಪಾಟೀಲ

BI ಬಿಜಾಪುರ : ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ದಿನಾಂಕ 14-4-2020 ರ ವರೆಗೆ ಲಾಕಡೌನ್ ಮಾಡಲಾಗಿದ್ದು, ಈ ಹಿನ್ನೆಯಲ್ಲಿ ಸಾರ್ವಜನಿಕ ವಿತರಣಾ ಪದ್ದತಿಯಡಿ ಪಡಿತರ ಚೀಟಿದಾರರಿಗೆ ಎಪ್ರೀಲ್ 2020 ನೇ ತಿಂಗಳಿನಲ್ಲಿ ಮೇ 2020 ನೇ ತಿಂಗಳ ಮುಂಗಡ ಪ್ರಮಾಣ ಸೇರಿದಂತೆ ವಿತರಣೆ ಮಾಡಲು 18038 ಎಂಟಿ ಅಕ್ಕಿ, ಹಾಗೂ 1870 ಎಂಟಿ ಗೋಧಿಯು ಸರ್ಕಾರದಿಂದ ಜಿಲ್ಲೆಗೆ ಹಂಚಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ 835 ನ್ಯಾಯ ಬೆಲೆ ಅಂಗಡಿಗಳು […]

Continue Reading

ಅನುಮತಿಯಿಲ್ಲದೆ ನಿರ್ಗತಿಕರಿಗೆ ಆಹಾರ ಹಂಚಿದಲ್ಲಿ ಕ್ರಿಮಿನಲ್ ಮೊಕದ್ದಮೆ

BI ಬಿಜಾಪುರ : ನೋವೆಲ್ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಎಪ್ರೀಲ್ 14 ರ ವರೆಗೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಹಿನ್ನಲೆಯಲ್ಲಿ ಬೇರೆ ರಾಜ್ಯಗಳ ವಲಸೆ ನಿರಾಶ್ರಿತರಿಗೆ, ನಿರ್ಗತಿಕರಿಗೆ, ಭಿಕ್ಷುಕರಿಗೆ ಆಹಾರ ಒದಗಿಸುವ ಕಾರ್ಯವನ್ನು ಜಿಲ್ಲಾಡಳಿತವು ಮಹಾನಗರ ಪಾಲಿಕೆ ವಿಜಯಪುರ ಇವರಿಗೆ ವಹಿಸಿದೆ. ಸಾರ್ವಜನಿಕರು ಯಾವುದೇ ಪರವಾನಿಗೆ ಪಡೆಯದೆ ಆಹಾರ ಹಂಚಿ ಜನದಟ್ಟಣೆ ಮಾಡುತ್ತಿರುವುದು ಕಂಡು ಬಂದಿದ್ದು, ಈ ರೀತಿ ಹಂಚಿಕೆಯಿಂದ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ತೊಂದರೆಯಾಗಲಿದೆ. ಆದ್ದರಿಂದ ಸಾರ್ವಜನಿಕರು […]

Continue Reading

ಲಾಕ್ ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪೋಸ್ಟ ಆಫಿಸ್‌ಗಳು ಪ್ರಾರಂಭ

BI ಬಿಜಾಪುರ : ನೋವೆಲ್ ಕೊರೋನಾನ ವೈರಸ್‌ದಿಂದಾಗಿ ಸಾರ್ವಜನಿಕರಿಗೆ ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳಲ್ಲಿ ಆಗುತ್ತಿರುವ ಅನಾನುಕೂಲತೆಯನ್ನು ಮನಗಂಡು ಅಗತ್ಯ ವಸ್ತುಗಳನ್ನು ಸಾರ್ವಜನಿಕರಿಗೆ ತಲುಪಿಸಲು ವಿಜಯಪುರ ಜಿಲ್ಲಾ ಹೆಡ್ ಪೋಸ್ಟ ಆಫಿಸ್ ವತಿಯಿಂದ ಪ್ರಾರಂಭಿಸಲಾಗಿದೆ. ಪಾರ್ಸಲ್‌ಗಳನ್ನು ಜಿಲ್ಲಾ ಕೇಂದ್ರ ಅಂಚೆ ಕಚೇರಿಗಳು ಹಾಗೂ ಉಪಅಂಚೆ ಕಚೇರಿಗಳ ಮೂಲಕ ಸಾರ್ವಜನಿಕರಿಗೆ ತಲುಪಿಸಲು ವಿಶೇಷ ಸಿದ್ದತೆ ಮಾಡಿಕೊಂಡಿದ್ದು. ಬುಕ್ಕಿಂಗ್ ಮತ್ತು ವೈದ್ಯಕೀಯ ಸಲಕರಣೆಗಳ ಪಾರ್ಸಲ್‌ಗಳನ್ನು ರವಾನಿಸಲಾಗುತ್ತಿದೆ. ಅಗತ್ಯ ವಸ್ತುಗಳಾದ ಸಾಮಾಜಿಕ ಭದ್ರತಾ ಯೋಜನೆಯಡಿಯ ವೇತನ, ಮನಿ ಆರ್ಡರ್‌ಗಳು, ಕಚೇರಿಯಲ್ಲಿ ಬಟವಡೆ […]

Continue Reading

ಬಾಗಲಕೋಟೆಯಲ್ಲಿ ಕೊರೋನಾ ಪಾಸಿಟಿವ್

BI ಬಾಗಲಕೋಟೆ : ಬಾಗಲಕೋಟೆಯ ಓರ್ವ ವ್ಯಕ್ತಿಗೆ ಕೋವಿಡ್-19 ಸೋಂಕು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ. ಬುಧವಾರ ಮೂರು ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿತ್ತು, ಮೂರು ಸ್ಯಾಂಪಲ್ ವರದಿಗಳ ಪೈಕಿ ಒಂದು ಪಾಜಿಟಿವ್ ದೃಡಪಟ್ಟಿದೆ. ಉಳಿದ ಎರಡು ಸ್ಯಾಂಪಲ್ ನೆಗೆಟಿವ್ ಎಂದು ವರದಿಯಾಗಿದೆ. ಸದ್ಯ ಕೋವಿಡ್-19 ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಷನ್‌ವಾರ್ಡನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Continue Reading

ಕೊರೊನಾ : ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ ಎಂ.ಬಿ.ಪಾಟೀಲ್‍ರವರ ಸಭೆ

BI ಬಬಲೇಶ್ವರ : ಕೊವಿಡ್-19 ಕೊರೊನಾ ಕಾಯಿಲೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಇಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಮುನ್ನಚ್ಚರಿಕೆ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಸ್ತೃತ ಸಭೆ ಜರುಗಿಸಿದರು. ಬಿ.ಎಲ್.ಡಿ.ಇ ಸಂಸ್ಥೆ ಆಡಳಿತ ಕಛೇರಿಯಲ್ಲಿ ನಡೆದ ಇಂದಿನ ಸಭೆಯಲ್ಲಿ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ ಎಲ್ಲಾ ಹಳ್ಳಿಗಳ ಮಾಹಿತಿ ಪಡೆದ ಎಂ.ಬಿ.ಪಾಟೀಲ್‍ರವರು ಹೊರದೇಶಗಳಲ್ಲದೇ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ದುಡಿಯಲು ಹೋಗಿರುವ […]

Continue Reading

ಕೃಷಿ ಸಚಿವ ಬಿ.ಸಿ.ಪಾಟೀಲ್ ವಾಸ್ತವ ಸ್ಥಿತಿ ಅರಿತು ಮಾತನಾಡಲಿ : ಮಾಜಿ ಸಚಿವ ಎಂ.ಬಿ.ಪಾಟೀಲ್

BI ಬಿಜಾಪುರ : ವಿಜಯಪುರ – ಬಾಗಲಕೋಟ ಜಿಲ್ಲೆಗಳಲ್ಲಿ ಸಾಕಷ್ಟು ಕೋಲ್ಡ್ ಸ್ಟೋರೆಜ್‍ಗಳು ಇದ್ದು, ರೈತರು ತಾವು ಬೆಳೆದ ಟೊಮ್ಯಾಟೊ, ಕಲ್ಲಂಗಡಿ ಇತರೆ ಹಣ್ಣು-ಹಂಪಲಗಳನ್ನು ಅಲ್ಲಿ ಇರಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲರ ಹೇಳಿಕೆ ವಾಸ್ತವ ಸಂಗತಿಗಳಿಗೆ ದೂರವಾಗಿದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ವಿಜಯಪುರ-ಬಾಗಲಕೋಟ ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಹೇರಳವಾಗಿ ಬೆಳೆಯುತ್ತಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ರೈತರಿಗೆ ಅತೀವ ತೊಂದರೆ ಉಂಟಾಗಿದೆ. ಕೇವಲ ವಿಜಯಪುರ ಜಿಲ್ಲೆಯನ್ನು ಉದಾಹರಿಸುವದಾದರೆ ಸರಕಾರಿ, ಸಹಕಾರಿ ಹಾಗೂ ಖಾಸಗಿ […]

Continue Reading

ಜಾತ್ರೆಯ ಬದಲು ವಿಪತ್ತು ನಿಧಿಗೆ ಹಣ

BI ಬಿಜಾಪುರ : ವಿಜಯಪುರ ತಾಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿರುವ ಶ್ರೀ ಗುರುಚಕ್ರವರ್ತಿ ಸದಾಶಿವ ಶಿವಯೋಗೇಶ್ವರ ಸ್ವ-ಸಹಾಯ ಸಂಘದ ಸದಸ್ಯರು ಪ್ರತಿವರ್ಷ ಉಳಿತಾಯ ಮಾಡಿದ ಹಣವನ್ನು ಕತಕನಹಳ್ಳಿಯ ಶ್ರೀ ಗುರುಚಕ್ರವರ್ತಿ ಸದಾಶಿವಮಠದ ಜಾತ್ರಾ ಮಹೋತ್ಸವಕ್ಕೆ ಅರ್ಪಿಸುತ್ತಿದ್ದರು. ಆದರೆ ಈ ಬಾರಿ ಕತಕನಹಳ್ಳಿ ಶ್ರೀಮಠದ ಶ್ರೀ ಶಿವಯ್ಯ ಮಹಾಸ್ವಾಮಿಗಳು ಜಾತ್ರೆಗೆ ನೀಡುವ ಉಳಿತಾಯ ಹಣವನ್ನು ಈ ಬಾರಿ ಪ್ರಧಾನಮಂತ್ರಿಗಳ ವಿಪತ್ತು ನಿಧಿಗೆ ಅರ್ಪಿಸಿ, ಕೊರೊನಾ ನಿಯಂತ್ರಣ ಕಾರ್ಯಚಟುವಟಿಕೆಗಳಿಗೆ ಕೈಜೋಡಿಸಿ ಎಂದು ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ […]

Continue Reading