BIJAPUR INFO

“ಐಓಟಿ & ಉಪಯೋಗಗಳ” ವಿಶೇಷ ಕಾರ್ಯಾಗಾರ

BI NEWS, ಬಿಜಾಪುರ : ಬಿ.ಎಲ್.ಡಿ.ಇ ಸಂಸ್ಥೆ ವಚನಪಿತಾಹಮ ಡಾ.ಫ.ಗು.ಹಳಕಟ್ಟಿ ಅಭಿಯಂತ್ರಿಕ ಮತು ತಾಂತ್ರಿಕ ವಿದ್ಯಾಲಯದಲ್ಲಿ ಎಂ.ಸಿ.ಎ ವಿಭಾಗದಿಂದ 5ದಿನಗಳ ಕಾಲ ಐಓಟಿ ಮತ್ತು ಅದರ ಉಪಯೋಗಗಳ ಕುರಿತು ವಿಶೇಷ ಕಾರ್ಯಗಾರ ಇಂದು ಸಮಾರೋಪ ಸಮಾರಂಭ ಜರುಗಿತು.

ಈ ಸಂದರ್ಭದಲ್ಲಿ ಪ್ರೊ.ಆರ್.ಜಿ.ತಳಸದಾರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬದಲಾಗುತ್ತಿರುವ ಕಾರಣ ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಬೇಕು ಮತ್ತು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾರಣ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯತೆಗಳು ಹೆಚ್ಚಾಗಲಿವೆ ಮತ್ತು ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ವಿಜಯಪುರ ನಗರ ಮತ್ತು ಸುತ್ತಲಿನ ಗ್ರಾಮಗಳಿಂದ 100ಕ್ಕೂ ಹೆಚ್ಚು ಶಿಭಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಪ್ರಾಚಾರ್ಯ ವಿ.ಪಿ.ಹುಗ್ಗಿ, ಉಪಪ್ರಾಚಾರ್ಯರಾದ ಪ್ರಕಾಶ ಗೊಣ್ಣಗಾರ, ಪ್ರದೀಪ ಮಳಗಿ ಭಾಗವಹಿಸಿದ ಶಿಭಿರಾರ್ಥಿಗಳಿಗೆ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಆರ್.ಎಂ.ಮಠ, ಅಚ್ಯುತ, ಸಜ್ಜನರ, ಎಂ.ಸಿ.ಎ ವಿಭಾಗ ಮುಖ್ಯಸ್ಥ ಜಿ.ಕೆ.ಕುಲಕರ್ಣಿ, ಸಂಯೋಜಕ ಆನಂದ ಘಾಳಿ, ಎಸ್.ಬಿ.ಪಾಟೀಲ, ಲೋಕೆಶ, ಅಧ್ಯಾಪಕ ಪಾಂಡುರಂಗ ಬಿರಾದಾರ, ಎಸ್.ಹರಳಾಪುರ, ಶೈಲಜಾ ಕುಲಗಡ್ಡೆ, ಚಡಚಣ ಕಾಲೇಜಿನ ಬಿಸಿಎ ವಿಭಾಗ ಮುಖ್ಯಸ್ಥ ಕುಂಬಾರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!