BIJAPUR INFO

ಶಸ್ತ್ರಾಸ್ತ್ರಗಳನ್ನು ಜಮೆ ಮಾಡಲು DC ಆದೇಶ

BI NEWS, ಬಿಜಾಪುರ : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಹಾಗೂ ಶಾಂತ ರೀತಿಯಿಂದ ಚುನಾವಣೆ ನಡೆಸಲು ಅನುಕೂಲವಾಗುವಂತೆ ಲೋಕಸಭಾ ಚುನಾವಾಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಯುಧ ಲೈಸನ್ಸ್‍ದಾರರು ತಮ್ಮ ಶಸ್ತ್ರಾಸ್ತ್ರಗಳನ್ನು ಹಾಗೂ ಮದ್ದು ಗುಂಡುಗಳನ್ನು ಸಂಬಂಧಿಸಿದ ಪೋಲಿಸ್ ಠಾಣೆಯಲ್ಲಿ ಜಮೆ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವೈ.ಎಸ್.ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

ಲೋಕಸಭಾ ಚುನಾವಣಾ ವ್ಯಾಪ್ತಿಯಲ್ಲಿಯ ಆತ್ಮ ರಕ್ಷಣೆಗಾಗಿ ನೀಡಿರುವ ಆಯುಧಗಳನ್ನು ಹೊಂದಿರುವ ಲೈಸನ್ಸ್‍ದಾರರು ಹೊಂದಿರುವ ಶಸ್ತ್ರಾಸ್ತ್ರಗಳಾದ ಎಂ.ಎಲ್, ಎಸ್.ಬಿ.ಬಿ.ಎಲ್, ಡಿ.ಬಿ.ಬಿ.ಎಲ್ ಪಿಸ್ತೂಲ, ರೈಪಲ್, ರಿವಾಲ್ವಾರಗಳನ್ನು ಜಮಾ ಮಾಡಬೇಕು. ಜಮಾ ಮಾಡಿದ ಬಗ್ಗೆ ಲೈಸನ್ಸ್‍ದಾರರು ಸಂಬಂಧಿಸಿದ ಪೋಲಿಸ್ ಠಾಣೆಯಿಂದ ಸೂಕ್ತ ರಶೀದಿಯನ್ನು ಪಡೆಯತಕ್ಕದ್ದು. ಈ ಆದೇಶವು ಮಾರ್ಚ 10 ರಿಂದ ನೀತಿ ಸಂಹಿತೆ ಮುಕ್ತಾಯವಾಗುವವರೆಗೆ ಜಾರಿಯಲ್ಲಿರುತ್ತದೆ.

ನಿಗದಿತ ಅವಧಿಯೊಳಗೆ ಜಮಾ ಮಾಡದೇ ಇದ್ದಲ್ಲಿ ಅಂಥವರು ಮೂರು ತಿಂಗಳ ಜೈಲುವಾಸ ಅಥವಾ ದಂಡ ಇಲ್ಲವೇ ಎರಡೂ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ. ಸದರಿ ಅಧಿಸೂಚನೆಯು ಬ್ಯಾಂಕ್ ಭದ್ರತೆಯ ಸಲುವಾಗಿ ಮತ್ತು ಕಾರ್ಖಾನೆಗಳ ಭದ್ರತೆ ಸಲುವಾಗಿ ನೀಡಿರುವ ಆಯುಧ ಲೈಸನ್ಸ್‍ಗಳಿಗೆ ಅನ್ವಯಿಸುವದಿಲ್ಲವೆಂದು ಆದೇಶದಲ್ಲಿ
ತಿಳಿಸಿದ್ದಾರೆ.

error: Content is protected !!