BIJAPUR INFO

ಮುಳವಾಡ ಏತ ನೀರಾವರಿ ಬಳೂತಿ ಜಾಕ್ವೆಲ್ ಸುಟ್ಟ ಪ್ರಕರಣ ಶೀಘ್ರ ಜಾಕ್ವೆಲ ಪುನರ್ ಆರಂಭಿಸಲು ಗೃಹ ಸಚಿವ ಎಂ.ಬಿ.ಪಾಟೀಲ್ ಸಭೆ

ಬೆಂಗಳೂರು 11. ಬಿಜಾಪುರ ಜಿಲ್ಲೆಯ ಮಹಾತ್ವಾಕಾಂಕ್ಷಿ, ಏಷ್ಯಾದ ಅತೀದೊಡ್ಡ ಏತನೀರಾವರಿ ಮುಳವಾಡ ಏತ ಯೋಜನೆಯ ಬಳೂತಿ ಜಾಕ್ವೆಲ್‍ನಲ್ಲಿ ಮೊದಲನೇಯ ನೀರು ಎತ್ತುವ ಘಟಕ ಬಳೂತಿ ಜಾಕ್ವೆಲ್‍ನಲ್ಲಿ ವಿದ್ಯುತ್ ಶಾರ್ಟ್‍ಸರ್ಕ್ಯೂಟ್‍ನಿಂದ ಜಾಕ್ವೆಲ್ ಮಶೀನರಿಗಳು ಸಂಪೂರ್ಣ ಭಸ್ಮಗೊಂಡು 2ತಿಂಗಳೂ ಗತಿಸಿದ್ದರೂ, ಇದುವರೆಗೂ ಸೂಕ್ತ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್‍ರವರು ಬೆಂಗಳೂರು ವಿಧಾನಸೌಧದ ತಮ್ಮ ಕಛೇರಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಅನೌಪಚಾರಿಕ ಸಭೆ ನಡೆಸಿ, ಜಾಕ್ವೆಲ್ ದುರಸ್ಥಿಯ ಕುರಿತು ವಿವರವಾಗಿ ಚರ್ಚಿಸಿದರು.

ಜಲಸಂಪನ್ಮೂಲ ಇಲಾಖೆಯ ಪ್ರಧಾನಕಾರ್ಯದರ್ಶಿ ರಾಕೇಶ ಸಿಂಗ್, ಕೃಷ್ಣಾ ಭಗ್ಯ ಜಲನಿಗಮ ವ್ಯವಸ್ಥಾಪಕ ನಿರ್ದೇಶಕ ವಿ.ಶಂಕರರವನ್ನು ಇಂದು ಮಧ್ಯಾಹ್ನ ತಮ್ಮ ಕಚೇರಿಗೆ ಕರೆಯಿಸಿಕೊಂಡ ಸಚಿವರು ಆಲಮಟ್ಟಿ ಜಲಾಶಯದಲ್ಲಿ 30ಟಿ.ಎಂ.ಸಿಗೂ ಅಧಿಕ ನೀರು ಸಂಗ್ರಹವಿದೆ. ಬರಗಾಲದ ಈ ಸಂದರ್ಭದಲ್ಲಿ ಜನ-ಜಾನುವಾರುಗಳಿಗೆ, ಕುಡಿಯುವ ನೀರಿಗೆ ತೀವ್ರ ಹಾಹಾಕಾರವಿದ್ದು, ಈಗಾಗಲೇ ನಿರ್ಮಾಣಗೊಂಡಿರುವ ಎಲ್ಲಾ ಕಾಲುವೆಜಾಲದ ಮುಖಾಂತರ ತುರ್ತು ನೀರು ಹರಿಸುವ ಅಗತ್ಯವಿದೆ. ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಜಿಲ್ಲೆಯ ವಾಸ್ತವ ಚಿತ್ರಣವನ್ನು ಅಧಿಕಾರಗಳ ಮುಂದೆ ಬಿಚ್ಚಿಟ್ಟರು.

ನೀರಾವರಿ ಇಲಾಖೆ ಅಥವಾ ಸಂಭಂದಿಸಿದ ಗುತ್ತಿಗೆದಾರರಿಂದಾಗಲಿ ಆದಷ್ಟು ಬೇಗನೆ ದುರಸ್ಥಿ ಕಾರ್ಯವನ್ನು ಪೂರ್ಣಗೊಳಿಸಿ, ಕಾಲುವೆಗೆ ನೀರು ಹರಿಸಬೇಕು ಎಂದು ಸೂಚಿಸಿದರು. ಇದಕ್ಕೆ ಸಕಾರಾತ್ಮಾವಾಗಿ ಸ್ಪಂದಿಸಿದ ಇಲಾಖೆಯ ಉನ್ನತ ಅಧಿಕಾರಿಗಳು, ದುರಸ್ಥಿ ಕಾರ್ಯ ಪೂರ್ಣಗೊಳಿಸಲು ಕನಿಷ್ಠ ಒಂದು ತಿಂಗಳ ಸಮಯಾವಕಾಶಬೇಕು. ತಕ್ಷಣದಿಂದಲೇ ಈ ಕುರಿತು ಕ್ರಮ ಜರುಗಿಸುವುದಾಗಿ ತಿಳಿಸಿದರು. ಎರಡು ದಿನಗಳ ವಿಜಯಪುರ ಜಿಲ್ಲಾ ಪ್ರವಾಸದಲಿದ್ದ ಸಚಿವರಿಗೆ ಮುಳವಾಡ ಏತನೀರಾವರಿ ಯೋಜನೆ ವ್ಯಾಪ್ತಿಯ ಮಸೂತಿ, ಮಲಘಾಣ, ಕಲಗುರ್ಕಿ, ಹೊನ್ನುಟಗಿ, ಕವಲಗಿ, ದೇವರಹಿಪ್ಪರಗಿ, ಜಾಲವಾದ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ರೈತರು ಸಚಿವರನ್ನು ಕಂಡು ಸುಟ್ಟಿರುವ ಜಾಕ್ವೆಲ್ ದುರಸ್ಥಿಗೊಳಿಸಿ ಕಾಲುವೆಗೆ ನೀರು ಹರಿಸಲು ವಿನಂತಿಸಿದ್ದರು. ಈ ಹಿಂದೆಯೂ ಕೂಡಾ ಗೃಹ ಸಚಿವ ಎಂ.ಬಿ.ಪಾಟೀಲ್ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಮೇಘಾ ಇನಫ್ರಾಸ್ಟ್ರಕ್ಟರ್ ಕಂ. ಪ್ರತಿನಿಧಿಗಳಿಗೆ ಮಾತನಾಡಿರುವದನ್ನು ಸ್ಮರಿಸಬಹುದು.

error: Content is protected !!