BIJAPUR INFO

ಭೀಮ ಆರ್ಮಿ ಸಂಘಟನೆಯ ಪದಾಧಿಕಾರಿಗಳ ನೇಮಕ

ಇಂಡಿ : Feb, 11- ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಭೀಮ ಆರ್ಮಿ ಸಂಘಟನೆಯ ತಾಲೂಕಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಇಂಡಿ ತಾಲೂಕಾ ಅಧ್ಯಕ್ಷರನ್ನಾಗಿ ಭೀಮಾಶಂಕರ ರಾಮಚಂದ್ರಪ್ಪ.ಉಕ್ಕಮನಾಳ ಇವರನ್ನು ಆಯ್ಕೆ ಮಾಡಲಾಯಿತೆಂದು ಜಿಲ್ಲಾಧ್ಯಕ್ಷರಾದ ರವಿ ಮೇಲಿನಕೇರಿ ಆದೇಶ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ಈ ಸಂಧರಭದಲ್ಲಿ ಜಿಲ್ಲಾಧಕ್ಷರಾದ ಮೇಲಿನಕೇರಿ ಅವರು ಮಾತನಾಡಿ ನೋಂದು,ಬೆಂದ ಜನರು ದೇಶವನ್ನಾಳುವುದನ್ನು ನಾನು ನೋಡಬೇಕು ಎಂಬುವ ಬಾಬಾಸಾಹೇಬರ ಕನಸನ್ನು ನನಸಾಗಲು ಶ್ರಮವಹಿಸಬೇಕಾಗಿದೆ,ಅಷ್ಟೇ ಅಲ್ಲದೆ ಯಾರೇ ಆಗಲಿ ಕಾನೂನನ್ನು ತಕ್ಷಣ ಕೈಗೆತ್ತಿಕೊಳ್ಳಬಾರದು ಕಾನೂನೀನ ನಿಯಮದಡಿ ಕಾರ್ಯನಿರ್ವಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ದೀಪಕ, ಬಾಬು ಕಾಂಬಳೆ, ರವಿ ಹೊನಕೋರೆ, ಶಿವಾನಂದ ಮಾವಿನಳ್ಳಿ,ವಿನೋದ ಸಿಂಗೆ ,ಸಜ್ಜನ ಚವ್ಹಾನ, ನರಸಿಂಗ ವಕ್ಕಳಮಟ್ಟಿ,ಉಮೇಶ ಬಾಮಿಣಿ ಹಾಗು ಇನ್ನಿತರರು ಉಪಸ್ಥಿತರಿದ್ದರು.

error: Content is protected !!