BIJAPUR INFO

ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ : ಸದ್ದಾಂ ಕುಂಟೋಜಿ

ಮುದ್ದೇಬಿಹಾಳ: Feb, 9- ಬಜೆಟ್‍ನ ವಿಶೇಷ ಅಧಿವೇಶನಕ್ಕೆ ವಿನಾಕಾರಣ ಅಡ್ಡಿ ಉಂಟು ಮಾಡಿ ಜನತಂತ್ರ ವ್ಯವಸ್ಥೆಯಲಲಿ ವಿರೋಧ ಪಕ್ಷದ ಜವಾಬ್ಧಾರಿಯುತ ಕೆಲಸವನ್ನೇ ಗಾಳಿಗೆ ತೂರಿರುವ ಮತ್ತು ಜೆಡಿಎಸ್ ಶಾಸಕರೊಬ್ಬರಿಗೆ ಆಪರೇಷನ್ ಕಮಲ ಹೆಸರಲ್ಲಿ ಆಮೀಸ ಒಡ್ಡಿ ನೈತಿಕತೆಯನ್ನೇ ಗಾಳಿ ತೂರಿರುವ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಎನ್‍ಎಸ್‍ಯುಐ ಜಿಲ್ಲಾ ಅಧ್ಯಕ್ಷ ಸದ್ದಾಂ ಕುಂಟೋಜಿ ಹೇಳಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಎನ್‍ಎಸ್‍ಯುಐ, ಯುವ ಕಾಂಗ್ರೆಸ್ ಏರ್ಪಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಭಾಗವಾಗಿರುವ ಶಾಸಕರಿಗೆ ಆಮೀಷ ಒಡ್ಡಿ ಸೆಳೆಯಲು ಪ್ರಯತ್ನ ನಡೆಸಿದ್ದು ದಾಖಲೆ ಸಮೇತ ಬಹಿರಂಗಗೊಂಡಿದೆ. ಸ್ವತಹ ಸಿಎಂ ಕುಮಾರಸ್ವಾಮಿ ಅವರೇ ಈ ವಿಷಯ ಮಾಧ್ಯಮದ ಎದುರು ಬಹಿರಂಗಪಡಿಸಿದ್ದಾರೆ. ಇದು ಬಿಜೆಪಿಗರೆಲ್ಲರೂ ತಲೆತಗ್ಗಿಸುವಂಥದ್ದು ಎಂದು ಹರಿಹಾಯ್ದರು.
ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದೇವದುರ್ಗಕ್ಕೆ ದೇವರ ದರ್ಶನಕ್ಕೆಂದು ಬಂದು ಜೆಡಿಎಸ್ ಶಾಸಕರಿಗೆ ಆಮೀಷ ಒಡ್ಡಿ ಸಮ್ಮಿಶ್ರ ಸರ್ಕಾರ ಉರುಳಿಸುವ ಕುತಂತ್ರ ಬಹಿರಂಗಗೊಂಡ ನಂತರವೂ ನಾವು ಅವರಲ್ಲ ಎಂದು ಹೇಳಿ ಸತ್ಯದ ಕಣ್ಣಿಗೆ ಮಣ್ಣೆರೆಚಿ ರಾಜ್ಯದ ಜನತೆಯಲ್ಲಿ ಗೊಂದಲ ಮೂಡಿಸುವ ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಇವರ ನಾಟಕವನ್ನು ಈ ರಾಜ್ಯದ ಜನತೆಗೆ ನೋಡುತ್ತಿದ್ದು ಚುನಾವಣೆಯಲ್ಲಿ ಬುದ್ದಿ ಕಳಿಸಲಿದ್ದಾರೆ ಎಂದರು.

ಸಂಸತ್ತಿನ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಕಾಂಗ್ರೆಸ್ ವಿರುದ್ಧ, ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಅವರ ಗುರಿ ಜನಪರ ಆಡಳಿತ ನಡೆಸುವ ಈ ಸರ್ಕಾರ ಕೆಡವಲೇಬೇಕು ಎನ್ನುವುದಾಗಿದೆ. ಬಿಜೆಪಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಸ್ಥಾನ ಏನು ಎನ್ನುವುದನ್ನು ನಿಭಾಯಿಸಲು ವಿಫಲರಾಗಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಉತ್ತಮವಾಗಿದ್ದು ಜನಸಾಮಾನ್ಯರ ಬಜೆಟ್ ಎನ್ನಿಸಿಕೊಂಡಿದೆ. ಜನರ ಹಿತದೃಷ್ಟಿಯಿಂದ ಬಜೆಟ್ ಬಗ್ಗೆ ವಿಪಕ್ಷದವರು ಚರ್ಚಿಸುವುದನ್ನು ಬಿಟ್ಟು ತಮ್ಮ ಹುಳುಕು ಮುಚ್ಚಿಕೊಳ್ಳಲು ವಿರೋಧ ಮಾಡುತ್ತಿರುವುದು, ಅಧಿವೇಶನಕ್ಕೆ ಅಡ್ಡಿ ಪಡಿಸುತ್ತಿರುವುದು, ರಾಷ್ಟ್ರಪತಿ ಆಳ್ವಿಕೆ ಹೇರುತ್ತೇವೆ ಎನ್ನುತ್ತಿರುವುದು ಸರಿ ಅಲ್ಲ ಎಂದು ಪುರಸಭೆ ಮಾಜಿ ಸದಸ್ಯ ಪಿಂಟು ಸಾಲಿಮನಿ ಖಂಡಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ್ ಶಿರೋಳ, ಉಪಾಧ್ಯಕ್ಷ ಯುಸೂಫ್ ನಾಯ್ಕೋಡಿ, ಬ್ಲಾಕ್ ಕಾಂಗ್ರೆಸ್ ಎಸ್ಸಿ ಮೋರ್ಚಾ ಅಧ್ಯಕ್ಷ ಅಶೋಕ ಅಜಮನಿ, ಪ್ರಮುಖರಾದ ಶರಣು ಚಲವಾದಿ, ಬಸವರಾಜ ಗೂಳೀ, ಅಮೀನ್ ಮುಲ್ಲಾ, ಲಕ್ಷ್ಮಣ ಚವ್ಹಾಣ, ರಾಮಣ್ಣ ನಾಯಕಮಕ್ಕಳ, ಬಾಪು ಢವಳಗಿ, ಯುಸೂಫ್ ವಾಲಿಕಾರ, ಬಸವರಾಜ ಬಾರಕೇರ, ಮಾನಪ್ಪ ನಾಯಕ, ಲಾಲಸಾಬ ಕೋಳೂರ, ಅಸ್ಲಾಂ ಆದೋನಿ ಮತ್ತಿತರರು ಇದ್ದರು.

error: Content is protected !!