BIJAPUR INFO

ಗೃಹ ಸಚಿವ ಎಂ.ಬಿ.ಪಾಟೀಲ್ ಜಿಲ್ಲಾ ಪ್ರವಾಸ

ಬಿಜಾಪುರ : Feb, 8. ಗೃಹ ಸಚಿವ ಎಂ.ಬಿ.ಪಾಟೀಲ್ ದಿ.9 ಮತ್ತು 10ರಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ದಿ.9 ಶನಿವಾರ ಸಂ. 4ಗಂ.ಗೆ ಸಾರವಾಡ ಗ್ರಾಮದ ಹತ್ತಿರ ಡೋಣಿ ನದಿ ಸೇತುವೆಗೆ 3.5ಕೋಟಿ ವೆಚ್ಚದಲ್ಲಿ ಕೂಡು ರಸ್ತೆಯನ್ನು ಸುಧಾರಣೆಗೆ ಭೂಮಿ ಪೂಜೆ ನೆರವೇರಿಸಿ, ನಂತರ ಗ್ರಾಮದಲ್ಲಿ ನಿರ್ಮಿಸಿರುವ ಲಿಂಗಾಯತ ಆದಿಬಣಜಿಗ ಸಮುದಾಯ ಭವನ ಉದ್ಘಾಟಿಸುವರು.

ದಿ.10 ರವಿವಾರ ರಂದು ಬೆ.10ಗಂ. ಕೆ.ಆರ್.ಡಿ.ಸಿ.ಎಲ್ ವತಿಯಿಂದ ಧನ್ಯಾಳ ಗ್ರಾಮದ ಹತ್ತಿರ ಧನ್ಯಾಳ-ನಿಡೋಣಿ ರಸ್ತೆಗೆ ನಿರ್ಮಿಸುತ್ತಿರುವ 5ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವರು.

ಬೆ.11ಗಂಟೆಗೆ ಹೊನವಾಡ-ಕನಮಡಿ ಮಧ್ಯದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಹತ್ತಿರದ ಸಮಾರಂಭದಲ್ಲಿ ಕನಮಡಿ-ಹೊನವಾಡ ರಸ್ತೆಗೆ 2ಕೋಟಿ ವೆಚ್ಚದ ಸೇತುವೆ ನಿರ್ಮಾಣ.

ಕಾಮನಹಳ್ಳಕ್ಕೆ 2ಕೋಟಿ ವೆಚ್ಚದ ಸೇತುವೆ ನಿರ್ಮಾಣ ಹಾಗೂ ಬಿಜ್ಜರಗಿ-ಹೊನವಾಡ ರಸ್ತೆಯಲ್ಲಿ ಡೋಣಿ ನದಿಗೆ 2ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಗೃಹ ಸಚಿವ ಎಂ.ಬಿ.ಪಾಟೀಲ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

error: Content is protected !!