BIJAPUR INFO

ಶಾಲಾ ಮಕ್ಕಳಿಗೆ ಉಚಿತ ನೋಟ ಬುಕ್,ಪೆನ್ನು ವಿತರಣೆ

BI NEWS, ಬಿಜಾಪುರ : ಮುದ್ದೇಬಿಹಾಳದ ಜ್ಞಾನ ಗಂಗೋತ್ರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಎ ಐ ಸಿ ಸಿ ಅಧ್ಯಕ್ಷ ರಾಹುಲ್ ಗಾಂಧಿ ರವರ 49ನೇ ಹುಟ್ಟು ಹಬ್ಬದ ಪ್ರಯುಕ್ತ ಮುದ್ದೇಬಿಹಾಳ ಯುವ ಕಾಂಗ್ರೆಸ್ ಹಾಗೂ ಎನ್ ಎಸ್ ಯು ಐ ಸಮಿತಿ ವತಿಯಿಂದ ಉಚಿತ ನೋಟ ಬುಕ್,ಪೆನ್ನು ವಿತರಣೆ ಮಾಡಲಾಯಿತು, ಈ ಸಂದಭ೯ದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರು ಮಹ್ಮದರಫೀಕ ಶಿರೋಳ ಹಾಗೂ ವಿಜಯಪೂರ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷರು ಸದ್ದಾಂ ಕುಟೋಜಿ ಮಾತನಾಡಿ ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ ಮನೆತನವೂ ಈ ದೇಶದ ಬಡವರ,ದೀನದಲಿತರ ಅಲ್ಪಸಂಖ್ಯಾತರ ಅಹಿಂದ ವಗ೯ದವರ,ಉನ್ನತ ವಗ೯ದವರ,ಮಹಿಳೆಯರ,ಯುವಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಮುಂದಿನ ದಿನಮಾನಗಳಲ್ಲಿ ಭಾರತ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿ ರಾಹುಲ ಗಾಂಧಿ ರವರು ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುದ್ದೇಬಿಹಾಳ ಯುವ ಕಾಂಗ್ರೆಸ್ ಉಪಾಧ್ಯಕ್ಷ ಯುಸೂಫ ನಾಯ್ಕೋಡಿ, ವಿಜಯಪೂರ ಯುವ ಕಾಂಗ್ರೆಸ್ ಕಾಯ೯ಧಶಿ೯ ಶರಣು ಚಲವಾದಿ, ಉಮರ ಮಮದಾಪೂರ, ಬಾಪು ಢವಳಗಿ, ಶಿವುಕುಮಾರ ಹಿರೇಮಠ, ಕಾಶಿಂ ಬಾಗಲಕೋಟ, ರಹೀಮಾನ ಬನ್ನೇಟ್ಟಿ, ಸುಹೇಬ ಪಟೇಲ, ಬಸವರಾಜ ಗೂಳಿ, ರಾಮಣ್ಣಾ ನಾಯಕಮಕ್ಕಳ, ಯೂಸುಫ ವಾಲಿಕಾರ, ಟಿಪ್ಪು ಮ್ಯಾಗೇರಿ,ಮುಂತಾದ ಯುವ ಕಾಂಗ್ರೆಸ್ ಹಾಗೂ ಎನ್ ಎಸ್ ಯು ಐ ಪದಾಧಿಕಾರಿಗಳು ಹಾಗೂ ಕಾಯ೯ಕತ೯ರು ಭಾಗವಹಿಸಿದ್ದರು.

error: Content is protected !!