BIJAPUR INFO

ಮಕ್ಕಳ ಬೇಸಿಗೆ ಆರೋಗ್ಯ ಶಿಬಿರ

BI NEWS, ಬಿಜಾಪುರ : ಬಿ. ಎಲ್. ಡಿ. ಇ. ಸಂಸ್ಥೆಯ ಎ. ವ್ಹಿ. ಎಸ್. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕೌಮಾರ್ಯಭೃತ್ಯ ಹಾಗೂ ಸ್ವಸ್ಥವೃತ್ತ ವಿಭಾಗದ ಸಹಯೋಗದಲ್ಲಿ ಮಕ್ಕಳ ಬೇಸಿಗೆ ಆರೋಗ್ಯ ಶಿಬಿರವನ್ನು ಇದೆ ದಿ.22 ರಿಂದ ದಿ. 30 ರವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಶಿಬಿರಕ್ಕೆ 6 ವರ್ಷದಿಂದ 14 ವರ್ಷದೊಳಗಿನ ಮಕ್ಕಳು ಆರ್ಹರಾಗಿದ್ದು, ಶಿಬಿರದಲ್ಲಿ ಪಾಲ್ಗೊಗೊಳ್ಳುವ ಮಕ್ಕಳಿಗೆ ಪ್ರತಿದಿನ ಯೋಗ, ವ್ಯಾಯಾಮ, ಆಭ್ಯಂಗ, ಆಯುರ್ವೇದೀಯ ಬಲವರ್ಧಕ ಪಾನೀಯ ಸೇವನೆ ಹಾಗೂ ಆಯುರ್ವೇದಾನುಸಾರ ಮಕ್ಕಳ ಆರೋಗ್ಯ ಕುರಿತು ಲಘು ಉಪನ್ಯಾಸ ಮಾಲಿಕೆಯನ್ನು ಒಳಗೊಂಡಿರುವದು.

ಆಸಕ್ತ ಪಾಲಕರು ಮಕ್ಕಳ ಹೆಸರನ್ನು ಮಹಾವಿದ್ಯಾಲಯದ ಆಸ್ಪತ್ರೆಯ ನೊಂದಣಿ ವಿಭಾಗದಲ್ಲಿ ಅಥವಾ ಕೆಳಕಂಡ ದೂರವಾಣಿಗೆ ಸಂಪರ್ಕಿಸಲು ಕೋರಿದೆ. ದೂರವಾಣಿ ಸಂಖ್ಯೆ : 8762977008, 8904446624, 9743322489.

error: Content is protected !!