BIJAPUR INFO

ವಿಜಯಪುರ ಮೀಸಲು ಮತಕ್ಷೇತ್ರ 17 ಅಭ್ಯರ್ಥಿಗಳ ಪೈಕಿ 2 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ : 15 ಅಭ್ಯರ್ಥಿಗಳ ನಾಮಪತ್ರ ಸಿಂಧುತ್ವ

BI NEWS, ಬಿಜಾಪುರ : ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸ್ವೀಕರಿಸಲಾದ 17 ಅಭ್ಯರ್ಥಿಗಳ ಪೈಕಿ ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ- ಎ.ಪಿ.ಐ ಪಕ್ಷದ ರಮೇಶ ಹಳ್ಳಿ ಹಾಗೂ ಪಕ್ಷೇತರ ಅಭ್ಯರ್ಥಿಯಾದ ಎಂ.ಇ.ಸುಜಾತಾ ಅವರ ನಾಮಪತ್ರಗಳು ತಿರಸ್ಕøತಗೊಂಡಿವೆ. 15 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುತ್ವಗೊಂಡಿದ್ದು, ಸಿಂಧುತ್ವಗೊಂಡ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ.

ರಮೇಶ ಜಿಗಜಿಣಗಿ (ಭಾರತೀಯ ಜನತಾ ಪಾರ್ಟಿ), ಶ್ರೀನಾಥ ಪೂಜಾರಿ (ಬಹುಜನ ಸಮಾಜ ಪಾರ್ಟಿ), ಡಾ.ಸುನೀತಾ ಚವ್ಹಾಣ (ಜನತಾದಳ ಜಾತ್ಯಾತೀತ), ಗುರುಬಸವ ರಬಕವಿ (ಉತ್ತಮ ಪ್ರಜಾಕೀಯ ಪಾರ್ಟಿ), ದೀಪಕ ಗಂಗಾರಾಮ ಕಟಕದೊಂಡ ಉರ್ಫ ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ (ಹಿಂದೂಸ್ತಾನ ಜನತಾ ಪಾರ್ಟಿ), ಮಹಾದೇವ ರಾಠೋಡ (ಶಿವಸೇನಾ), ಯಮನಪ್ಪ ವಿಠ್ಠಲ ಗುಣದಾಳ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ರುದ್ರಪ್ಪ ದಯಪ್ಪ ಚಲವಾದಿ (ಭಾರಿಪಾ ಬಹುಜನ ಮಹಾಸಂಘ) ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ದಾದಾಸಾಬ ಸಿದ್ದಪ್ಪ ಬಾಗಾಯತ, ದೊಂಡಿಬಾ ರಾಠೋಡ, ಧರೆಪ್ಪ ಮಹದೇವ ಅರ್ಧವರ, ಬಾಲಾಜಿ ದ್ಯಾಮಣ್ಣ ವಡ್ಡರ, ಮರಗಣ್ಣ ಮಾಳಪ್ಪ ಹೊನ್ನೂರ, ರಾಮಪ್ಪ ಹರಿಜನ ಉರ್ಫ ಹೋಲೇರ ಹಾಗೂ ರಾಹುಲ ಭಾಸ್ಕರ್ ಅವರ ನಾಮಪತ್ರಗಳು ಸಿಂಧುತ್ವಗೊಂಡಿವೆ ಎಂದು ಚುನಾವಣಾಧಿಕಾರಿಗಳು-04 ವಿಜಯಪುರ (ಪರಿಶಿಷ್ಟ ಜಾತಿ) ಲೋಕಸಭಾ ಮತಕ್ಷೇತ್ರ
ಅವರು ತಿಳಿಸಿದ್ದಾರೆ.

error: Content is protected !!