2020-21 ರಾಜ್ಯ ಬಜೆಟ್ : ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ

ಬೆಂಗಳೂರು 5. ಕೃಷ್ಣಾಮೇಲ್ದಂಡೆ ಮೂರನೇ ಹಂತದ ಯೋಜನೆಗೆ 20ಸಾವಿರ ಕೋಟಿ ಹಣ ಇರಿಸಲಾಗುವದು ಎಂದು ಬಿಜೆಪಿಯವರು ಹೇಳಿದ್ದರು. ಇದೀಗ ಆ ಹಣ ಬಜೆಟ್‌ನಲ್ಲಿ ಮಾಯಾವಾಗುವ ಮೂಲಕ ಉತ್ತರ ಕರ್ನಾಟಕ ಜೀವನಾಡಿ ಕೃಷ್ಣಾ ಯೋಜನೆಯನ್ನು ಕೃಷ್ಣಾರ್ಪಣೆ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ.

ಕೃಷ್ಣಾತೀರದಿಂದ ಇಬ್ಬರು ಉಪಮುಖ್ಯಮಂತ್ರಿಗಳು ಈ ಸರ್ಕಾರದಲ್ಲಿದ್ದು, ಅವರಾದರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬಹುದಿತ್ತು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕೃಷ್ಣಾ ಮೇಲ್ದಂಡೆ ಯೋಜನೆಗೆ 20ಸಾವಿರ ಕೋಟಿ ಹಣವನ್ನು ಈ ಬಜೆಟ್‌ನಲ್ಲಿ ಒದಗಿಸಲಾಗುವದು ಎಂದು ಪದೇ-ಪದೇ ಹೇಳಿದ್ದರು. ಹಾಗಿದ್ದರೆ ಆ ಹಣ ಎಲ್ಲ ಹೋಯಿತು? ಎಂದಿದ್ದಾರೆ.

ಇದರಿಂದಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷವೂ ಬಜೆಟ್‌ನಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಹಾಗೂ ವಿಶೇಷವಾಗಿ ಕೃಷ್ಣಾ ಯೋಜನೆಗೆ ಹೆಚ್ಚು ಒತ್ತು ನೀಡಿತ್ತು. ಆ ಯೋಜನೆಗಳನ್ನು ಮುಂದುವರೆಸುವ ಬದಲು ಸ್ಥಗಿತಗೊಳಿಸಿದ ಕೀರ್ತಿ ಈ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಕೇಂದ್ರ ಸರ್ಕಾರದಿಂದಲೂ ರಾಜ್ಯದ ಪಾಲಿಗೆ ಬರಬೇಕಾದ ನ್ಯಾಯಯುತ ಅನುದಾನ ಬಂದಿಲ್ಲ. ರಾಜ್ಯದಿಂದ ಆಯ್ಕೆಯಾದ ಸಂಸದರು ಈ ಬಗ್ಗೆ ಧ್ವನಿ ಎತ್ತದೆ ಮೌನವಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರವೂ ನೆರವು ನೀಡುತ್ತಿಲ್ಲ, ರಾಜ್ಯದ ಬಜೆಟ್‌ನಲ್ಲಿ ಇಟ್ಟಿಲ್ಲ ಹಿಗಾದರೆ ಕರ್ನಾಟಕದ ಸ್ಥಿತಿ ದುಸ್ಥಿತವಾಗಿ ಎಲ್ಲ ಅಭಿವೃದ್ಧಿಯು ಕುಂಠಿತವಾಗಲಿವೆ ಎಂದು ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

error: Content is protected !!