2020-21ನೇ ಸಾಲಿನ ರಾಜ್ಯ ಬಜೆಟ್ : ವಿಜಯಪುರ ಬಿಜೆಪಿ ಮುಖಂಡರ ಪ್ರತಿಕ್ರಿಯೆ

ವಿಜಯಪುರ :

ಅಭಿವೃದ್ಧಿಗೆ ಪೂರಕ : ರಮೇಶ ಜಿಗಜಿಣಗಿ

2020-21ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಮಂತ್ರಿಗಳಾದ ಮಂಡಿಸಿದ ಬಜೆಟ್ ಐತಿಹಾಸಿಕ ಬಜೆಟ್ ಆಗಿದೆ. ರಾಜ್ಯದ ಸರ್ವತೋಮುಖ ಸಾಮೂಹಿಕ ಕೃಷಿ, ಉತ್ಪನ್ನಗಳ ಸಂಸ್ಕೃಣೆ, ಮಾರುಕಟ್ಟೆಗೆ ಉತ್ತೇಜನ ನೀಡಲು ಮತ್ತು ಕೃಷಿ ಹಾಗೂ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಅನುಷ್ಠಾನ. ಅಭಿವೃದ್ಧಿಗಾಗಿಗೆ ಪೂರಕವಾಗಿದೆ ಎಂದು ಸಂಸದರಾದ ರಮೇಶ ಜಿಗಜಣಗಿ ಅವರು ತಿಳಿಸಿದ್ದಾರೆ.

ಐತಿಹಾಸಿಕ ಬಜೆಟ್ : ಆರ್.ಎಸ್. ಪಾಟೀಲ ಕೂಚಬಾಳ

ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಮಹತ್ವದ ಮೈಲಿಗಲ್ಲು. ಕೃಷಿ, ನೀರಾವರಿಗೆ ಆದ್ಯತೆ ನೀಡಿ ಸರ್ವವರ್ಗಗಳ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಬಜೆಟ್ ಯಡಿಯೂರಪ್ಪನವರ ಬದ್ಧತೆಯ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ವರ್ಗವಾರು, ಪ್ರದೇಶವಾರು ಸಮತೋಲನ ಕಾಯ್ದುಕೊಂಡು ಎಲ್ಲರ ಏಳ್ಗಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಾಡಿನ ಉಸಿರಾಗಿರುವ ಕೃಷಿಗೆ ಆದ್ಯತೆ ನೀಡಿ, ಇತರ ಕ್ಷೇತ್ರಗಳಿಗೂ ಉತ್ತೇಜನ ನೀಡಲಾಗಿದೆ. ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕುಚಬಾಳ ಹೇಳಿದ್ದಾರೆ.

ಪೂರಕ ಬಜೆಟ್: ಅರುಣ ಶಹಾಪುರ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುವ ವಸತಿ ಶಾಲೆಗಳಲ್ಲಿ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 25 ರಷ್ಟು ಸೀಟು ಹಂಚಿಕೆಗೆ ಕ್ರಮ. ಈ ವಸತಿ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ. ಪ್ರತಿ ಜಿಲ್ಲೆಯಲ್ಲಿ ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ. ನಗದು ಪ್ರಶಸ್ತಿ ನೀಡಲು ಕ್ರಮ ವಹಿಸಲಾಗಿದೆ. ಒಂದೇ ಸೂರಿನಡಿ ಪೂರ್ವ ಪ್ರಾಥಮಿಕ ತರಗತಿಗಳಿಂದ ಪದವಿ ಪೂರ್ವ ತರಗತಿವೆಗೆ ಶಿಕ್ಷಣ ನೀಡುವ 276 ಕರ್ನಾಟಕ ಪಬ್ಲಿಕ್ ಶಾಳೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ನೀಡಿವುದು ಪೂರಕ ಬಜೆಟ್ ಇದಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ ಹೇಳಿದ್ದಾರೆ.

ಜನರ ಅನುಕೂಲಕರ ಬಜೆಟ್: ಅಪ್ಪಾಸಾಹೇಬ ಪಟ್ಟಣಶೆಟ್ಟಿ

ರಾಜ್ಯದಲ್ಲ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಕ್ಕಳ ಅಯವ್ಯಯ ಮಂಡನೆ. ರಾಜ್ಯದಲ್ಲಿರುವ 18 ವರ್ಷದ ಕೆಳಗಿರುವ ಎಲ್ಲಾ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಅಡಕ. 2020-21ನೇ ಸಾಲಿನ ಅಯವ್ಯಯದಲ್ಲಿ 36,340 ಕೋಟಿ ರೂ.ಗಳ 279 ಕಾರ್ಯಕ್ರಮಗಳ ಪ್ರಸ್ತಾಪ. ಇದು ಒಟ್ಟಾರೆ ಅಯವ್ಯಯ ಗಾತ್ರದ 15.28 ರಷ್ಟು ನೀಡಿದ್ದು ಜನರ ಅನುಕೂಲಕರ ಬಜೆಟ್ ಇದಾಗಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಮ. ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಇದೊಂದು ಜನಪರ ಬಜೆಟ್ : ವಿಜಯಕುಮಾರ ಪಾಟೀಲ

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಡಿಸಿಸಿ), ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ, 466 ಕೋಟಿ ರೂ. ನೆರವು 92 ಸಾವಿರ ರೈತರಿಗೆ ಪ್ರಯೋಜನ ವಾಗಲಿದೆ ಇದೊಂದು ಐತಿಹಾಸಿಕ ಬಜೆಟ್ ಆಗಿದೆ ಬಿಜೆಪಿ ಮುಖಂಡರಾ ವಿಜಯಕುಮಾರ ಪಾಟೀಲ ಹೇಳಿದ್ದಾರೆ.

ಇದು ರೈತ ಪರ ಬಜೆಟ್ : ಸೋಮನಗೌಡ ಪಾಟೀಲ ಸಾಸನೂರ

ಮುಖ್ಯಮಂತ್ರಿಗಳ ಆರೋಗ್ಯ ಸುರಕ್ಷಾ ಯೋಜನೆಯಡಿಯಲ್ಲಿ ಒಂದು ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಉಚಿತ ಪ್ರಿಪೇಯ್ಡ್ ಹೆಲ್ತ್ ಕಾರ್ಡ್ ವಿತರಣೆ. ಸಾವಯವ ಕೃಷಿಗೆ 200 ಕೋಟಿ ರೂ. ಅನುದಾನ, ರೈತರಿಗೆ ಪ್ರದೇಶವಾರು ಸೂಕ್ತ ಬೆಳೆಯನ್ನು ಬೆಳೆಯಲು, ಅಗತ್ಯ ಬೀಜಗಳು, ರಸಬಗೊಬ್ಬರಗಳು, ಸಣ್ಣ ಪೌಷ್ಟಿಕಾಂಶಗಳ ಬಳಕೆಗೆ ಮಾರ್ಗದರ್ಶನ ಹೊಸ ನೀತಿ ರಚನೆ ನೀಡಲಾಗಿದೆ. ಇದು ರೈತ ಪರ ಬಜೆಟ್ ಆಗಿದೆ ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದ್ದಾರೆ.

ಉತ್ತಮ ಬಜೆಟ್ : ಗೋಪಾಲ ಕಾರಜೋಳ

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗದವರ ಕಲ್ಯಾಣಕ್ಕೆ ಎಸ್ಸಿ ಎಸ್ಟಿ/ ಟಿಎಸ್ಪಿ ಅಡಿ 26,930 ಕೋಟಿ ರೂ. ಅನುದಾನ ನಿಗದಿ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ ಯುವತಿಯರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೂಲಕ ವಾಹನ ಚಾಲನಾ ತರೇತಿ, ವಿವಿಧ ಪ್ಯಾರಾಮೆಡಿಕಲ್ ಸರ್ಟಿಫಿಕೇಟ್ ಕೋರ್ಸುಗಳೊಂದಿಗೆ ಕೌಶಲ್ಯಾಭಿವೃದ್ದಿ ತರಬೇತಿ ಹಾಗೂ ಸಣ್ಣ ಸರಕು ಸಾಗಾಣಿಕೆ ವಾಹನ ಖರೀದಿಗೆ ಸಾಲದ ಸೌಲಭ್ಯ ನೀಡಲು ಕ್ರಮ ವಹಿಸಿದ್ದು ಉತ್ತಮ ಬಜೆಟ್ ಇದಾಗಿದೆ ಎಂದು ಬಿಜೆಪಿ ಮುಖಂಡರಾದ ಡಾ. ಗೋಪಾಲ ಕಾರಜೋಳ, ಚಂದ್ರಶೇಖರ ಕವಟಗಿ ಹೇಳಿದ್ದಾರೆ.

ಸರ್ವಜನಾಂಗದ ಹಿತ ಕಾಯುವ ಉತ್ತಮ ಬಜೆಟ್ : ವಿಜಯ ಜೋಶಿ

ಮಕ್ಕಳಿಗಾಗಿ ಬಜೆಟ್ ಮಂಡಿಸಿದ್ದು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಬಜೆಟ್ ಆಗಿದೆ. ಅವರೆಲ್ಲರ ಬೆಳವಣಿಗೆಗೆ ಸಹಕಾರಿಯಾಗಲಿದೆ ಅದರಲ್ಲಿಯೂ ವಿಶೇಷವಾಗಿ ರೈತರಿಗೆ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ, ಹಾಗೂ ರೋಗಿಗಳಿಗೆ ಅನುಕೂಲವಾಗಲಿದೆ. ಇದೊಂದು ಸರ್ವಜನಾಂಗದ ಹಿತ ಕಾಯುವ ಉತ್ತಮ ಬಜೆಟ್ ಇದಾಗಿದೆ ಎಂದು ಬಿಜೆಪಿ ಯುವ ಮುಖಂಡರಾದ ವಿಜಯ ಜೋಶಿ ಹೇಳಿದ್ದಾರೆ.

ಇದು ಉತ್ತಮ ಬಜೆಟ್ : ಶಿವರುದ್ರ ಬಾಗಲಕೋಟ

ಯುವ ಜನೆತೆಯಲ್ಲಿ ನಾಯಕತ್ವ ಮೌಲ್ಯಗಳನ್ನು ಬೆಳೆಸಲು ಅನಂತಕುಮಾರ ಪ್ರತಿಷ್ಠಾನ ಸರ್ಕಾರದಿಂದ 20 ಕೋಟಿ ರೂ. ಅನುದಾನ ಉಚಿತ ಪ್ರಿಪೇಡ್ ಕಾರ್ಡ್ಗಳ ವಿತರಣೆ, ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವವರಿಗೆ ಉಚಿತ ಪೆರಿಟೋನಿಯಲ್ ಡಯಾಲಿಸ್ ಇದು ಉತ್ತಮ ಬಜೆಟ್ ಆಗಿದೆ ಎಂದು ಬಿಜೆಪಿ ಮುಖಂಡರಾದ ಶಿವರುದ್ರ ಬಾಗಲಕೋಟ ತಿಳಿಸಿದ್ದಾರೆ.

error: Content is protected !!