100% ಮತದಾನಕ್ಕಾಗಿ ಅಭಿಯಾನ: ದ್ವಿಚಕ್ರ ವಾಹನಕ್ಕೆ ಚಾಲನೆ

BI NEWS, ಬಿಜಾಪುರ : ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿರುವ ದ್ವಿಚಕ್ರ ವಾಹನದ ಮೂಲಕ ರಾಜ್ಯದಾದ್ಯಂತ ಸಂಚರಿಸಿ ಶೇಕಡಾ ನೂರರಷ್ಟು ಮತದಾನಕ್ಕಾಗಿ ಜಾಗೃತಿ ಮೂಡಿಸುತ್ತಿರುವ ಬಸವರಾಜ ಎಸ್.ಕಲ್ಲಸಕ್ಕರಿ ಅವರ ಜಾಗೃತಿ ವಾಹನಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಅವರು ಇಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ದಿನಾಂಕ : 24-02-2019 ರಿಂದ ಬೆಂಗಳೂರಿನಿಂದ ಆರಂಭಗೊಂಡಿರುವ ಈ ಅಭಿಯಾನವು 13ನೇ ಜಿಲ್ಲೆಯಾದ ವಿಜಯಪುರಕ್ಕೆ ಇಂದು ಆಗಮಿಸಿದ ಸಂದರ್ಭದಲ್ಲಿ ಈ ವಾಹನಕ್ಕೆ ಚಾಲನೆ ನೀಡಲಾಗಿದ್ದು, ಮತದಾನದ ಜಾಗೃತಿ ಅಭಿಯಾನ ಹಾಗೂ ಅಖಂಡ ಕರ್ನಾಟಕಕ್ಕಾಗಿ ಅರಿವು ಮೂಡಿಸಲು ಸಂಚರಿಸುತ್ತಿರುವ ವಾಹನಕ್ಕೆ ಇಂದು ಶುಭ ಕೋರಲಾಯಿತು.

ಈ ಅಭಿಯಾನ ರಾಜ್ಯದ ಬಾಕಿ ಉಳಿದಿರುವ ಇನ್ನೂ 17 ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ತಿಂಗಳ ಅಂತ್ಯದವರೆಗೆ ಶೇಕಡಾ ನೂರರಷ್ಟು ಮತದಾನಕ್ಕಾಗಿ ಜಾಗೃತಿ ಮೂಡಿಸಲು ಬಸವರಾಜ ಕಲ್ಲಸಕ್ಕರಿ ದೃಢ ಸಂಕಲ್ಪ ಮಾಡಿದ್ದು, ತಮ್ಮ ಸ್ವಂತ ಖರ್ಚಿನಿಂದ ಖರೀದಿಸಿದ ವಾಹನದೊಂದಿಗೆ ಜಾಗೃತಿ ಮೂಡಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!