ಹೊಸ ಸೆಟ್‌ಲೈಟ್ ಬಸ್ ನಿಲ್ದಾಣದ ಕಾರ್ಯಾಚರಣೆ : ಪ್ರಯಾಣಿಕರ ಗಮನಕ್ಕೆ

BI ಬಿಜಾಪುರ : ಈಗಾಗಲೇ ವಿಭಾಗೀಯ ಕಛೇರಿ ಹತ್ತಿರದ ಹೊಸ ಸೆಟ್‌ಲೈಟ್ ಬಸ್ ನಿಲ್ದಾಣದ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಈ ಹೊಸ ಸೆಟ್‌ಲೈಟ್ ಬಸ್ ನಿಲ್ದಾಣದಿಂದ ತಿಕೋಟಾ, ಜತ್ತ, ಅಥಣಿ, ಬೆಳಗಾವಿ, ಮಿರಜ, ಸಾಂಗಲಿ, ಝಳಕಿ, ಸೋಲಾಪುರ, ಪಂಢರಪುರ, ಚಡಚಣ ವಲಯದ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಆರಂಭಗೊಂಡಿದೆ. ಅದರಂತೆ ಮಹಿಳೆಯರು, ವೃದ್ಧರು ಹಾಗೂ ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ರಾತ್ರಿ 10.00 ಗಂಟೆಯಿಂದ ಬೆಳಿಗ್ಗೆ 7.30 ಗಂಟೆಯವರೆಗೆ ಅಥಣಿ, ತಿಕೋಟಾ, ಝಳಕಿ, ಸೋಲಾಪುರ, ಪಂಢರಪುರ ಮಾರ್ಗವಾಗಿ ಸಂಚರಿಸುವ ಬಸ್‌ಗಳನ್ನು ಸೆಟ್‌ಲೈಟ್ ಬಸ್ ನಿಲ್ದಾಣ ಹಾಗೂ ಕೇಂದ್ರ ಬಸ್ ನಿಲ್ದಾಣ ಎರಡು ಬಸ್ ನಿಲ್ದಾಣದಿಂದ ಸಂಚರಿಸುತ್ತಿದ್ದು, ಮೇಲಿನ ಅವಧಿಯನ್ನು ಹೊರತುಪಡಿಸಿ ಉಳಿದ ಅವಧಿಯಲ್ಲಿ ತಿಕೋಟಾ, ಜತ್ತ, ಅಥಣಿ, ಬೆಳಗಾವಿ, ಮಿರಜ, ಸಾಂಗಲಿ, ಝಳಕಿ, ಸೋಲಾಪುರ, ಪಂಢರಪುರ, ಚಡಚಣ ಮಾರ್ಗವಾಗಿ ಸಂಚರಿಸುವ ಬಸ್‌ಗಳು ಕಡ್ಡಾಯವಾಗಿ ಸೆಟ್‌ಲೈಟ್ ಬಸ್ ನಿಲ್ದಾಣದಿಂದ ಸಂಚರಿಸಲಿದ್ದು, ಸಾರ್ವಜನಿಕರು, ಪ್ರಯಾಣಿಕರು ಈ ಸಾರಿಗೆ ಬಸ್‌ಗಳ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಈಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!