ಹೈದರಾಬಾದ ನಾರಾಯಣ ಶಿಕ್ಷಣ ಸಂಸ್ಥೆಯೊಂದಿಗೆ ಬಿ.ಎಲ್.ಡಿ.ಇ ಶೈಕ್ಷಣಿಕ ಒಪ್ಪಂದ

BI ಬಿಜಾಪುರ : ಬಿ.ಎಲ್.ಡಿ.ಇ ನಿರ್ದೇಶಕರಾದ ಸುನೀಲಗೌಡ ಪಾಟೀಲ್‌ರವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “1910 ರಲ್ಲಿ ಸ್ಥಾಪನೆಯಾದ ನಮ್ಮ ಸಂಸ್ಥೆಯು ಉತ್ತರ ಕರ್ನಾಟಕದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರದೇಶಕ್ಕೆ ತನ್ನ ಪ್ರಾಯೋಜಿತ್ವದಲ್ಲಿ ನಡೆಯುವ 80ಕ್ಕೂ ಹೆಚ್ಚು ಶಾಲೆ ಮತ್ತು ಕಾಲೇಜುಗಳು ಮೂಲ ಶಿಕ್ಷಣವನ್ನು ಒದಗಿಸುತ್ತಿದೆ. ಶತಮಾನದ ಸಂಸ್ಥೆಯಲ್ಲಿ 4500 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲ ಸೌಕರ್ಯಗಳ ವಿಷಯದಲ್ಲಿ ಪ್ರತಿವರ್ಷ ಸುಸ್ಥಿರ ಬೆಳವಣಿಗೆಯನ್ನು ಸಾಧಿಸುತ್ತಿದೆ. ಆದ್ದರಿಂದ ನಮ್ಮ ಕಾಲೇಜಿನಲ್ಲಿ ಶಿಕ್ಷಣ ಪ್ರಯೋಜನ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 36 ಸಾವಿರ ಕ್ಕೆ ತಲುಪಿದೆ ಎಂದರು.

ಬಿ.ಎಲ್.ಡಿ.ಇ ಸಂಸ್ಥೆ 2014ರಲ್ಲಿ ನೂತನವಾಗಿ ಬಿ.ಎಂ.ಪಾಟೀಲ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಲಾಯಿತು. ಈ ಕಾಲೇಜು ಎಲ್ಲಾ ಮೂಲಭೂತ ಸೌಕರ್ಯಗಳ್ಳನ್ನು ಹೊಂದಿದೆ. ಇಂದು ಕರ್ನಾಟಕದ ಉತ್ತರ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಪದವಿ ಪೂರ್ವ ವಿಜ್ಞಾನ ಶಿಕ್ಷಣವನ್ನು ನೀಡುವುದು ಸಂಸ್ಥೆಯ ಧ್ಯೇಯವಾಗಿದೆ” ಎಂದರು.

ವಿಜಯಪುರ ನಗರ ಹಾಗೂ ಗ್ರಾಮಗಳಿಂದ ಅನೇಕ ವಿದ್ಯಾರ್ಥಿಗಳು ಬೆಂಗಳೂರು ಮತ್ತು ಮಂಗಳೂರಿಗೆ ಹೋಗುತ್ತಿದ್ದಾರೆ. ಪೋಷಕರು ತಮ್ಮ ಊರಿನಿಂದ ದೂರದ ಸ್ಥಳಗಳಿಗೆ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಕಳಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಅಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು, ಸಾಬೀತಾದ ದಾಖಲೆಗಳೊಂದಿಗೆ ಪದವಿ ಪೂರ್ವ ವಿಜ್ಞಾನ ಶಿಕ್ಷಣದಲ್ಲಿ ಮಹೋನ್ನತ ಅನುಭವ ಹೊಂದಿರುವ ಹೈದರಾಬಾದಿನ ನಾರಾಯಣ ಶಿಕ್ಷಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಿ.ಎಲ್.ಡಿ.ಇ ಸಂಸ್ಥೆ ನಿರ್ಧರಿಸಿದೆ ಎಂದರು.

ನಾರಾಯಣ ಸಂಸ್ಥೆಯು 1979 ರಲ್ಲಿ ಸ್ಥಾಪನೆಯಾಗಿದೆ. ಇದು ಏಷ್ಯಾದ ಅತಿ ದೊಡ್ಡ ಸಂಸ್ಥೆಯಾಗಿದೆ. ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಸುಮಾರು 40ಸಾವಿರ ಸಿಬ್ಬಂದಿಯನ್ನು ಒಳಗೊಂಡು 4ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುತ್ತಿದ್ದಾರೆ. ಭಾರತದ 13 ರಾಜ್ಯಗಳಲ್ಲಿ ವ್ಯಾಪಿಸಿ, 300 ಶಾಲೆಗಳು, 300 ಪದವಿ ಪೂರ್ವ ಕಾಲೇಜುಗಳು ಮತ್ತು 8 ವೃತ್ತಿಪರ ಕಾಲೇಜುಗಳನ್ನು ನಾರಾಯಣ ಕುಟುಂಬವು ಹೊಂದಿದೆ.

ಸಂಯೋಜನೆ ಮಾಡುವ ಉದ್ದೇಶ:

ಬಿ.ಎಂ.ಪಾಟೀಲ ಪದವಿ ಪೂರ್ವ ಕಾಲೇಜನ್ನು ನಾರಾಯಣ ಪರಿಣಿತ ಕಾರ್ಯಕ್ರಮದ ಮೂಲಕ ಮಂಡಳಿಯ ಅತ್ಯುತ್ತಮ ಪದವಿ ಪೂರ್ವ ವಿಜ್ಞಾನ ಶಿಕ್ಷಣ (ಪಿ.ಯು-1 ಮತ್ತು ಪಿ.ಯು–2) ಸಿ.ಇ.ಟಿ, ಜೆಇಇ (ಮೇನ್ಸ್ ಮತ್ತು ಅಡ್ವಾನ್ಸಡ್), ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನೀಡುವ ಉದೇಶ, 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಫೌಂಡೇಷನ್ ಕೋರ್ಸ ನೀಡಲು, ಸಿ.ಇ.ಟಿ, ಜೆಇಇ ನಂತಹ ಸ್ಪರ್ಧಾತ್ಮಕ ಪರೀಕ್ಷೆಯ ಇತ್ಯಾದಿ ಸಲುವಾಗಿ ನಾರಾಯಣ ಸಮೂಹದಿಂದ ಮೌಲ್ಯಮಾಪನ ಮತ್ತು ತರಬೇತಿ ಪಡೆದ ಅಧ್ಯಾಪಕರು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಕಲಿಸುತ್ತಾರೆ. ಪಠ್ಯಕ್ರಮ, ಮಾರ್ಗಸೂಚಿಗಳು ಇತ್ಯಾದಿ

ಈ ಕಾರ್ಯಕ್ರಮದ ಯೋಜನಗಳು :

ಎಲ್ಲಾ ವಿಷಯಗಳಲ್ಲಿ ಪರಿಕಲ್ಪನಾ ಆಧಾರಿತ ಅಧ್ಯಯನ ಸಾಮಗ್ರಿಗಳು, ಹಿರಿಯ ಅತ್ಯಂತ ಅನುಭವಿ ಅಧ್ಯಾಪಕರು, ಪ್ರತಿ ವಿದ್ಯಾರ್ಥಿಗೆ ಮೈಕ್ರೋ ವೇಳಾಪಟ್ಟಿ, ಆತ್ಮ ವಿಶ್ವಾಸವ್ವು ಹೆಚ್ಚಿಸಲು ಸಲಹೆಗಾರರ ಮೂಲಕ ತಜ್ಞರ ಸಮಾಲೋಚನೆ, ಜೆಇಇ, ನೀಟ್, ಸಿ,ಇ,ಟಿ, ಜಿಪ್ಮರ್ ಇತ್ಯಾದಿಗಳಿಗೆ ಬಲವಾದ ಅಡಿಪಾಯವನ್ನು ನಿರ್ಮಿಸುತ್ತದೆ, ದುಬಾರಿ ಬೋಧನೆಗಳು ಮತ್ತು ತರಬೇತಿಯನ್ನು ಬದಲಿಸುವ ಪರಿಣಾಮಕಾರಿ ಮಾರ್ಗವೆಂದರೆ ಅವರ ಮಗುವಿನ ಕಾರ್ಯಕ್ಷಮತೆಯ ಮೇಲ್ವಿಚಾರಣೆ, ತಮ್ಮ ಮಕ್ಕಳಿಗೆ ಸ್ಪರ್ಧಾತ್ಮಕ ಮತ್ತು ಕೇಂದ್ರೀಕೃತ ವಾತಾವರಣ, ಒಟ್ಟಾರೆಯಾಗಿ ಶೈಕ್ಷಣಿಕ ಫಲಿತಾಂಶಗಳಲ್ಲಿ ಸುಧಾರಣೆ.

ವಿಶೇಷ ಲಕ್ಷಣಗಳು :

ಸೂಕ್ಷ್ಮ ವೇಳಾಪಟ್ಟಿ, ಐಚ್ಛಿಕ ವಿಷಯಗಳ ಬಗ್ಗೆ ವಾರಕ್ಕೊಮ್ಮೆ ಪರೀಕ್ಷೆಗಳು, ಸಾಪ್ತಾಹಿಕ ವಿಶ್ಲೇಷಣೆ, ನಾಲ್ಕು ಭವ್ಯ ಅಖಿಲ ಭಾರತ ಮಟ್ಟದ ಪರೀಕ್ಷೆಗಳು ಮತ್ತು ಶ್ರೇಣಿಗಳು, ಪ್ರಾಯೋಗಿಕ ಪಾಠ ಅಧ್ಯಯನಗಳು, ಅಧ್ಯಯನದ ಸಮಯ, ವೈಯಕಿಕ ಗಮನ.

ನಾರಾಯಣ ಶಿಕ್ಷಣ ಸಂಸ್ಥೆಗಳು ಹೈದರಾಬಾದ್ ಪಾಲುದಾರಿಕೆಯ ಕಾರ್ಯಕ್ರಮದ ಒಪ್ಪಂದ ಮಾಡಿಕೊಂಡ ವಿಜಯಪುರದ ಮೊದಲ ಪಿಯು ಕಾಲೇಜು ಆಗಿರುತ್ತದೆ. ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಸುನೀಲಗೌಡ ಪಾಟೀಲ, ಆಡಳಿತಾಧಿಕಾರಿ ಡಾ.ಆರ್.ವಿ,ಕುಲಕರ್ಣಿ, ಮುಖ್ಯ ಹಣಕಾಸು ಅಧಿಕಾರಿ ದೇವೇಂದ್ರ ಅಗರವಾಲ, ಸಿ.ಬಿ.ಎಸ್.ಇ ಶಾಲೆಯ ಆಡಳಿತಾಧಿಕಾರಿ ಕೌಶಿಕ್ ಬ್ಯಾನರ್ಜಿ, ಪ್ರಾಂಶುಪಾಲ ನವೀನ್.ಎಸ್ ಹಾಗೂ ಪ್ರತಾಪ್.ಜೆ.ರಾಜ್ಯ ವ್ಯಾಪಾರೋಧ್ಯಮ ಮುಖ್ಯಸ್ಥ, ನಾರಾಯಣ ಶಿಕ್ಷಣ ಸಂಸ್ಥೆ ಉಪಸ್ಥಿತಿಯಲ್ಲಿ ಪಾಲುದಾರಿಕೆ ಜ್ಞಾಪಕ ಪತ್ರಕ್ಕೆ ಸಹಿ ಹಾಕಲಾಯಿತು.

error: Content is protected !!