ಹಾವೇರಿ ಮಾದರಿಯಲ್ಲಿ ಚೌಡಯ್ಯನ ಗೋಪುರ ನಿರ್ಮಿಸಿ ಮೂರ್ತಿ ಸ್ಥಾಪನೆಗೆ ನಿರ್ಧಾರಿಸಿದ ಕೋಲಿ ಸಮಾಜದ ಭಾಂದರದ ಕಾರ್ಯ ಶ್ಲಾಘನೆ : ಉಮೇಶ ಮುದ್ನಾಳ

ಫೆಬ್ರವರಿ 22 ಕ್ಕೆ ಚೌಡಯ್ಯ ಪುತ್ಥಳಿ ಲೋಕರ್ಪಾಣೆ ಯಾದಗಿರಿ ಕೋಲಿ ಸಮಾಜ ಬಾಂಧವರು ಇತರ ಸಮಾಜಗಳ ಜೊತೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಮಾದರಿ ಜೀವನ ಸಾಧಿಸುವಂತೆ ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುಂದಾಗಬೇಕೆಂದು ಹೇಳಿದರು. ಫೇಬ್ರವರಿ 22ರಂದು ಯಾದಗಿರಿ ತಾಲ್ಲೂಕಿನ ನಗಲಪೂರ ಗ್ರಾಮದಲ್ಲಿ ಮಧ್ಯಹ್ನ 12:30ಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಲೋಕರ್ಪಾಣೆ ನಿಮಿತ್ಯ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸಮಾಜದ ಜನತೆ ಸೌಹಾರ್ದಯುತವಾಗಿ ಜೀವನ ಸಾಧಿಸಬೇಕು ಗ್ರಾಮೀಣ ಭಾಗದಲ್ಲಿನ ಪಟ್ಟಭದ್ರ ಹಿತಶಕ್ತಿಗಳ ಮಾತು ಕೇಳದೆ ಮಹತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮಾಡಬೇಕೆಂದು ಸಲಹೆ ನೀಡಿದರು. ಅಂಬಿಗರ ಚೌಡಯ್ಯನ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ಸಮಾಜದ ಎಲ್ಲ ಮುಖಂಡರು ಶಿಸ್ತುಬದ್ಧ ಕೆಲಸ ಮಾಡಬೇಕು ಕರಪತ್ರ ಸೇರಿದಂತೆ ಪ್ರಚಾರ ಕಾರ್ಯ ಆರಂಭವಾಗಿದ್ದು ಅಚ್ಚುಕಟ್ಟಾಗಿ ಕಾರ್ಯಕ್ರಮವನನ್ನು ನಡೆಸಬೇಕು ಹಾವೇರಿ ಮಾದರಿಯಲ್ಲಿ ನಿರ್ಮಿಸಿದ ಗೋಪುರ ,ಮತ್ತು ಮೂರ್ತಿಲೋಕರ್ಪಣೆಯ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಬಾಬುರಾವ ಚಿಂಚನಸೂರ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯನ ನಿಗಮದ ಅಧ್ಯಕ್ಷರು ಹಾಗೂ ಇತರ ಗಣ್ಯರು ಕಾರ್ಯಕ್ರಮದ ಮುಂಚೆಯೇ ಅಂಬಿಗರ ಚೌಡಯ್ಯನ ರ ಮೂರ್ತಿ ಅಗಸ್ತ್ಯ, ವೇದವ್ಯಾಸ ,ಭೀಷ್ಮ, ಮಾತಮಾಣಿಕೇಶ್ವರಿ,
ಮಾತ ಅಂಮೃತನಂದಮಾಯಿ, ವಿಠಲ್ ಹೇರೂರವರ ಭಾವ ಚಿತ್ರಗಳನ್ನು ಸಾರೋಟ,ಪ್ರತೇಕ ಟ್ಯಕ್ಟ್ರಗಳಲ್ಲಿ ಯಾದಗಿರಿ, ರಾಯಚೂರು ಹೆದ್ದಾರಿ ಕೋಡ್ ರಸ್ತೆಯಿಂದ ಬೈಕ್ ರ್ಯಲಿ ಮುಖಾಂತರ ಬೃಹತ್ ಮೇರವಣಿಗೆ ಇದ್ದು ಅದ್ದಕ್ಕಾರಣ ಸಮಾಜ ಭಾಂದವರು ಹೇಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕೆಂದು ಉಮೇಶ್ ಮುದ್ನಾಳ ರವರು ಸಮಾಜ ಭಾಂದವರಲ್ಲಿ ಮನವಿ ಮಾಡಿದರು. ಸಂಘದ ಪದಾಧಿಕಾರಿಗಳು ಹಾಗೂ ವಿಠಲ್ ಹೇರೂರವರ ಅಭಿಮಾನಿಗಳ ಬಳಗ ಹಾಗೂ ಸಮಾಜದ ಮುಖಂಡರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

error: Content is protected !!