ಸ್ವಾಮಿ ವಿವೇಕಾಂದರ ಜಯಂತಿ ಅಂಗವಾಗಿ ವಿದ್ಯಾರ್ಥಿಗಳ ಬೃಹತ್ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

BI ಬಿಜಾಪುರ : ಭಾರತ ದೇಶದ ಯುವ ಶಕ್ತಿಯ ಸಂಕೇತ ಹಾಗೂ ಸ್ಪೂರ್ತಿಯ ಸೆಲೆಯಾಗಿರುವ ಸ್ವಾಮಿ ವಿವೇಕಾನಂದವರ ವಿಚಾರ ಧಾರೆಗಳನ್ನು ಸಾರ್ವಜನಿಕರಲ್ಲಿ ತಿಳಿಹೇಳುವ ನಿಟ್ಟಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿಜಯಪುರ ನಗರದಲ್ಲಿ ಜಾಥಾ ಮೂಲಕ ಜಾಗೃತಿ ಮೂಡಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿವ ವಿದ್ಯಾರ್ಥಿ-ವಿದ್ಯಾರ್ಥಿನಿಯರು,ಬಿಎಲ್‌ಡಿ ಸಂಸ್ಥೆಯ ವಿವಿಧ ಕಾಲೇಜ್‌ಗಳ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸ್ವಾಮಿ ವಿವೇಕಾನಂದರ ಘೋಷವಾಕ್ಯಗಳ ಮೂಲಕ ಅರಿವು ಮೂಡಿಸಿದರು.
ಸ್ವಾಮಿ ವಿವೇಕಾನಂದರು ನೀಡಿರುವಂತಹ ಅನೇಕ ಘೋಷವಾಕ್ಯಗಳಾದ ವಿಕಾಸವೇ ಜೀವನ,ಸಂಕೋಚವೇ ಮರಣ,ಮಾನವನ ಅಧ್ಯಯನ ಮಾಡು ಮಾನವನೇ ಜೀವಂತ ಕಾವ್ಯ, ಆತ್ಮ ವಿಶ್ವಾಸಕ್ಕಿಂತ ದೊಡ್ಡ ಗೆಳೆಯರು ಯಾರೂ ಇಲ್ಲ, ವಯಕ್ತಿತ್ವ ನೋಡಿ ಗೌರವಿಸಿ ವ್ಯಕ್ತಿಯನ್ನಲ್ಲ, ಮೊದಲು ಆಳುವುದನ್ನು ಕಲಿಯಿರಿ ಆಗ ನಾಯಕತ್ವ ಅರ್ಹತೆ ನಿಮಗೆ ಬರುತ್ತದೆ,ಪರರ ಸೇವೆಗಾಗಿ ಸರ್ವಸ್ವವನ್ನು ತೊರೆಯುವವನು ಮುಕ್ತಿ ಪಡೆಯುವನು ಹೀಗೆ ಹಲವು ಮೌಲ್ಯಯುತವಾದ ಘೋಷ ವಾಖ್ಯಗಳೊಂದಿಗೆ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟಿಲ ಅವರು ಸ್ವಾಮಿ ವಿವೇಕಾನಂದ ಅವರ ಜಯಂತಿ ಅಂಗವಾಗಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಬೃಹತ್ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಶ್ರೀ ವಿವೇಕಾನಂದರ ಭಾವ ಚಿತ್ರ ಮತ್ತು ಸ್ಥಬ್ಧ ಚಿತ್ರಗಳ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾ ಅಂಗವಾಗಿ ವಿವೇಕಾನಂದರ ಸ್ಥಬ್ದಚಿತ್ರವಾಗಿ ಬಾಲಕ ಸಾಯಿಕುಮಾರ ಅವರು ಎಲ್ಲರ ಗಮನ ಸೆಳೆದರು. ಜಾಥಾದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪಸಿರ್ದೇಶಕ ಮಹೇಶ ಪೋತದಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೂಜಾರ, ಪಂಚಾಯತ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಪದವಿ ಕಾಲೇಜ್ ಪ್ರಾಂಶುಪಾಲ ಎಸ್.ಎಸ್.ರಾಜಮಾನ್ಯ ಸೇರಿದಂತೆ ಇತರ ಅಧಿಕಾರಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
ನಂತರ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವರು, ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಅವರು ಪೋಲಿಸ್ ಇಲಾಖೆಯ ಓಬವ್ವ ಮಹಿಳಾ ಪೋಲಿಸ್ ಪಡೆ ವಾಹನಗಳಿಗೆ ಹಸಿರು ನಿಶಾನೆ ತೋರಿಸುವುದರೊಂದಿಗೆ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಚಾಲನೆ ನೀಡಿದರು.

error: Content is protected !!