ಸಾರ್ವಜನಿಕರಿಗೆ ತುರ್ತು ಕಾರ್ಯಗಳಿಗೆ ಮಾತ್ರ ಅವಕಾಶ

BI ಬಿಜಾಪುರ : ಕೋವಿಡ್-19 ವೈರಾಣು ಹರಡುವಿಕೆ ತಡೆಗಟ್ಟಲು ಜಿಲ್ಲಾಧಿಕಾರಿಗಳ ಆದೇಶದಂತೆ ವಿಜಯಪುರ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ತುರ್ತು ಅಲ್ಲದ ಕೆಲಸಗಳಿಗೆ ಆಗಮಿಸುವ ಸಾರ್ವಜನಿಕರ ಪ್ರವೇಶವನ್ನು ತಕ್ಷಣದಿಂದ ಮುಂದಿನ ಆದೇಶದವರೆಗೆ ನಿರ್ಭಂಣಧಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ತುರ್ತು ಕೆಲಸಗಳಾದ ಹೊಸ ವಾಹನಗಳ ನೋಂದಣಿ ಹಾಗೂ ನೋಂದಣಿ ನವಿಕರಣ, ಸಾರಿಗೆ ವಾಹನಗಳ ಅರ್ಹತಾ ಪತ್ರ ನವಿಕರಣ, ಪರ್ಮಿಟ್ ನೀಡಿಕೆ ಹಾಗೂ ನವೀಕರಣ, ಚಾಲನಾ ಅನುಜ್ಞಾ ಪತ್ರ ಮತ್ತು ನಿರ್ವಾಹಕ ಲೈಸನ್ಸ್ ನವೀಕರಣ, ವಾಹನಗಳ ತೆರಿಗೆ ಕಟ್ಟುವುದು, ದಿನಾಂಕ 15-04-2020 ಕ್ಕೆ ಪೂರ್ಣಗೊಳ್ಳುವ ಕಲಿಕಾ ಲೈಸನ್ಸ್ದಾರರ ಚಾಲನಾ ಅನುಜ್ಞಾಪತ್ರದ ಪರೀಕ್ಷೆ ಕೆಲಸಗಳು ಇದ್ದಲ್ಲಿ ಮಾತ್ರ ಸಾರ್ವಜನಿಕರು ಕಚೇರಿಗೆ ಆಗಮಿಸಬೇಕು ಎಂದು ವಿಜಯಪುರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!