ಸರ್ಕಾರದ ವಿವಿಧ ಯೋಜನೆಗಳ ಲಾಭ ದೊರಕಿಸಲು ನಿಸ್ವಾರ್ಥ ಸೇವೆಗೆ ಮುಂದಾಗಿ : ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ

BI ಬಿಜಾಪುರ : ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ
ರಚನೆಯಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಪೂರ್ವ ವಿವಿಧ ಯೋಜನೆಗಳು ನೇರವಾಗಿ
ಬಡಜನರನ್ನು ತಲುಪಿ ಅವರ ಜೀವನ ಸಾಕಾರಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿಸ್ವಾರ್ಥ ಸೇವೆಗೆ ಮುಂದಾಗುವಂತೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಕರೆ
ನೀಡಿದರು.

ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಪಾಕ್ಷಿಕ ಆಚರಣೆ ಅಂಗವಾಗಿ ಇಂದು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಬಡಜನರಿಗೆ ಉತ್ತಮ ಆರೋಗ್ಯ ಒದಗಿಸುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯು ಈಗಾಗಲೇ ಅನುಷ್ಠಾನಗೊಂಡಿದ್ದು, ದೇಶದ ಬಡಜನರಿಗೆ ಅತ್ಯಂತ ಸಹಕಾರಿಯಾಗಲಿದೆ. ಪ್ರಜ್ಞಾವಂತ
ನಾಗರಿಕಲರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ಇಂದು ದೇಹಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ತೊಂದರೆಯಾದರೂ ಲಕ್ಷಾಂತರ ರೂ.ಗಳುನ್ನು ವ್ಯಯಿಸಬೇಕಾಗುತ್ತದೆ. ಇದು
ಬಡ ಜನರಿಗಂತೂ ನುಂಗಲಾರದ ತುತ್ತು. ಒಪ್ಪತ್ತಿನ ತುತ್ತಿಗೂ ಪರಿತಪಿಸುವರಿಗೆ ಅಸಾಧ್ಯವಾದುದು. ಇದನ್ನು ಹೋಗಲಾಡಿಸಲೆಂದೆ ಬಡ ಜನರ ಆರೋಗ್ಯ ಸುಧಾರಣೆ ಮಾಡಲು ಅನುಷ್ಠಾನಗೊಂಡಿರುವ ಈ ಯೋಜನೆಯ ಅರ್ಹ ಫಲಾನುಭವಿಗಳಿಗೆ 5ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಪ್ರಧಾನಮಂತ್ರಿ ಜನೌಷಧ ಸೇರಿದಂತೆ ವಿವಿಧ ಯೋಜನೆಗಳು ಬಡವರ ಹಾಗೂ ಕಾರ್ಮಿಕರ
ವರ್ಗದವರಿಗೆ ನಾಗರಿಕರಿಗೂ ಅನುಕೂಲವಾಗಲಿದ್ದು, ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳು ಲಭ್ಯವಾಗಿ ಆರ್ಥಿಕ ಭದ್ರತೆಗೆ ಸಹಕಾರಿಯಾಗಿವೆ ಎಂದ ಅವರು, ಉತ್ತಮ ಆರೋಗ್ಯ ದೃಷ್ಟಿಯಲ್ಲಿ ಭವ್ಯವಾದ ಸ್ಟಂಟ್‍ಗಳನ್ನು ಜಾರಿಗೊಳಿಸಿದ ದಿವಂಗತ ಅನಂತ್‍ಕುಮಾರ ಹೆಗಡೆ ಅವರನ್ನು ಸ್ಮರಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಜನರು ವೈದ್ಯರ ಮೇಲೆ ವಿಶ್ವಾಸವಿಟ್ಟು ಬರುತ್ತಾರೆ. ಅವರನ್ನು ತುಚ್ಯವಾಗಿ ಕಾಣದೇ ಮಾತೃಪ್ರೇಮದಿಂದ ಕಂಡು ಜನರ ಸೇವೆಯೇ ಶ್ರೇಷ್ಠ ಸೇವೆ ಎಂಬ ಪರಿಕಲ್ಪನೆ ಸಾಕಾರಕ್ಕೆ ಎಲ್ಲಾ ವೈದ್ಯರು ಮುಂದಾಗುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಂದ್ರ ಕಾಪ್ಸೆ ಅವರು, ಜಿಲ್ಲೆಯಾದ್ಯಂತ ನಗರವಲಯವನ್ನು ಸೇರಿದಂತೆ 4 ತಾಲೂಕು
ಸರಕಾರಿ ಆಸ್ಪತ್ರೆ ಕೇಂದ್ರಗಳಲ್ಲೂ ಈ ಆರೋಗ್ಯ ಕಾರ್ಡಗಳನ್ನು ವಿತರಿಸಲಾಗುತ್ತಿದ್ದು, ಅರ್ಹ
ಫಲಾನುಭವಿಗಳು ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ ಹೊಂದಿದವರು ಆಧಾರ ಕಾರ್ಡ ಸೇರಿದಂತೆ ಮೂಲ ದಾಖಲೆಗಳೊಂದಿಗೆ ಹತ್ತಿರದ ಸೇವಾ ಕೇಂದ್ರಗಳಿಗೆ ತೆರಳಿ ಹೆಸರು ನೋಂದಾಯಿಸಿ ಕಾರ್ಡಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ ಅವರು, ಕಾರ್ಡಗಳನ್ನು ಪಡೆದುಕೊಳ್ಳಲು ಫಲಾನುಭವಿಗಳು ಸರ್ಕಾರಿ ಶುಲ್ಕವಾದ 10 ರೂ.ಗಳನ್ನು ಪಾವತಿಸಿ ಕಾರ್ಡ ಪಡೆದು ನಂತರ ಸ್ಮಾರ್ಟ್ ಕಾರ್ಡಗಾಗಿ ಸರ್ಕಾರಿ ಶುಲ್ಕ 35 ರೂ.ಗಳನ್ನು ಪಾವತಿಸಿ ಆರೋಗ್ಯ ಕಾರ್ಡಗಳನ್ನು ಪಡೆಯುವಂತೆ ಸಾರ್ವಜನಿಕರಿಗೆ ತಿಳಿಸಿದರು.

ಡಾ.ಲಕ್ಕನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಡಳಿತ ಹಾಗೂ ಇಲಾಖೆ ವತಿಯಿಂದ ಆರೋಗ್ಯ ಸುಧಾರಣೆಗೆ ಹಮ್ಮಿಕೊಂಡಿರುವ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಸಂಪತ್‍ಗುಣಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್.ಎ.ಕಟ್ಟಿ, ಪ್ರಾದೇಶಿಕ ಸಮಾಲೋಚಕ ಡಾ.ಗುಂಡಪ್ಪ, ಸ್ಥಳೀಯ ವೈದ್ಯ ಎಸ್.ಎ.ಲಕ್ಕನ್, ಡಾ.ಮಹೇಶ, ಡಾ.ಅಜಿತ್
ಕೋತನೀಸ್, ಡಾ:ಮಹೇಶ ಮೊರೆ, ಡಾ., ಧರ್ಮರಾಯ ಇಂಗಳೆ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಕೇತಿಕವಾಗಿ ಆಯುಷ್ಮಾನ ಭಾರತ ಆರೋಗ್ಯ ಕಾರ್ಡಗಳನ್ನು ವಿತರಿಸಲಾಯಿತು.

error: Content is protected !!