ಸದೃಢ ಭಾರತ ನಿರ್ಮಾಣ ನಮ್ಮ ಪ್ರಥಮಾಧ್ಯತೆಯಾಗಬೇಕು : ಶಾಸಕ ಸೋಮನಗೌಡ ಪಾಟೀಲ ಸಾಸನೂರ

BI : ಸದೃಢ ಭಾರತ ನಿರ್ಮಾಣ ನಮ್ಮ ಪ್ರಥಮಾಧ್ಯತೆಯಾಗಬೇಕು, ಯುವಜನತೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಶ್ರೇಷ್ಠ ಮೌಲ್ಯಗಳನ್ನು ಅರಿತು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಬಾನುವಾರ ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ 71ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತದ ಸ್ವಾತಂತ್ರ್ಯಕ್ಕಾಗಿ ಜರುಗಿದ ಅಸಂಖ್ಯಾತ ಹೋರಾಟಗಳು, ಮಹನೀಯರ ತ್ಯಾಗ, ಬಲಿದಾನಗಳನ್ನು ನೆನಪಿಸುವುದರ ಜೊತೆ ವಿಶ್ವದಲ್ಲಿಯೇ ವಿಶೇಷವಾದ ನಮ್ಮ ಸಂವಿಧಾನದ ಮಹತ್ವ, ಧ್ಯೆಯೋದ್ಧೇಶಗಳನ್ನು ನಾವುಗಳೆಲ್ಲಾ ಅರಿಯಬೇಕಾಗಿದೆ. ಜೊತೆಗೆ ಅಭಿವೃದ್ಧಿಯೆಡೆಗೆ ಸಾಗಬೇಕಾಗಿದೆ ಅದಕ್ಕಾಗಿ ಯುವಜನತೆಯನ್ನು ಸದೃಡಗೊಳಿಸೋಣ ಎಂದರು.
ತಹಶೀಲ್ದಾರ್ ವೈ.ಬಿ.ನಾಗಠಾಣ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದಲಿತಪರ ಸಂಘಟನೆಯ ಕಾಶೀನಾಥ ತಳಕೇರಿ ಸಂವಿಧಾನದ ರಚನೆ, ಡಾ: ಅಂಬೇಡ್ಕರ್ ಕುರಿತು ಮಾತನಾಡಿದರು. ನಂತರ ವಿವಿಧ ಶಾಲೆಗಳ ಮಕ್ಕಳು ದೇಶಭಕ್ತಿಗೀತೆಗಳಿಗೆ ನೃತ್ಯ ಗೈದು ಗಮನ ಸೆಳೆದರು. ಈ ಬಾರಿ ಪಟ್ಟಣ ಪಂಚಾಯಿತಿ ಎಲ್ಲ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಪಿಎಸೈ ರವಿ ಯಡಣ್ಣವರ, ತಾಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಕಬ್ಬಿನ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಸ್.ಕೆ ಬಾಗಿ, ಅಶೋಕ ಅಲ್ಲಾಪೂರ, ಎ.ಬಿ.ಸಾಲಕ್ಕಿ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ಕರಕಲಮನಿ, ಐಟಿಐ ಕಾಲೇಜು ಪ್ರಾಂಶುಪಾಲ ಜಗದೀಶ ಧನಗೊಂಡ, ಪಟ್ಟಣ ಪಂಚಾಯಿತಿ ಸದಸ್ಯರಾದ ರಿಯಾಜ್ ಯಲಗಾರ, ಶರಣು ಕಕ್ಕಸಗೇರಿ, ಭಾಸ್ಕರ್ ಗುಡಿಮನಿ, ರಿಯಾಜ್ ನಾಯ್ಕೋಡಿ, ಮಹಾದೇವ ನಾಯ್ಕೋಡಿ, ಭಾಷಾಸಾಬ್ ಹಳ್ಳಿ ಸೇರಿದಂತೆ ಮುನ್ನಾ ಮಳಖೇಡ, ಮಲ್ಲು ಜಮಾದಾರ ಸರಕಾರಿ ಕಾಲೇಜು ಅಧಿಕ್ಷಕ ಜಗನ್ನಾಥ ಸಜ್ಜನ, ಕೆ.ವ್ಹಿ.ಒಡೆಯರ್ ಸೇರಿದಂತೆ 12 ಕ್ಕೂ ಹೆಚ್ಚು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಯುವಕ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

error: Content is protected !!