ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಉತ್ಸವ ಪೂರ್ವಭಾವಿ ಸಭೆ

ವಿಜಯಪುರ: ಜನೇವರಿ 12 ರಿಂದ ಜರಗುವ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಉತ್ಸವ ಸಲುವಾಗಿ ಶ್ರೀ ಸಿದ್ಧೇಶ್ವರ ಸಂಸ್ಥೆ ಆಡಳಿತ ಮಂಡಳಿಯ ಪೂರ್ವಭಾವಿ ಸಭೆ ಇಂದು ಶ್ರೀ ಸಿದ್ಧೇಶ್ವರ ದೇವಸ್ಥಾನ ಆವರಣದ ಡಾ.ಫ.ಗು. ಹಳಕಟ್ಟಿ ಸಭಾ ಭವನದಲ್ಲಿ ನಗರ ಶಾಸಕರು ಹಾಗೂ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷರಾದ ಬಸನಗೌಡ ಪಾಟೀಲ ಯತ್ನಾಳರವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಮಾತನಾಡಿದ ಶಾಸಕರು, ಜನೇವರಿ 16 ನೇ ತಾರೀಕಿನಂದು ಮುಖ್ಯಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ನಗರಕ್ಕೆ ಆಗಮಿಸಲಿದ್ದು ಸುಮಾರು 500 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದರು.
ಜಿಲ್ಲಾಡಳಿತ ಭವನ ಕಾಮಗಾರಿಗೆ ಪ್ರಾಥಮಿಕ ಕಂತು 25 ಕೋಟಿ ಬಿಡುಗಡೆ ಮಾಡಲಾಗಿದ್ದು ಅದರ ಶಂಕು ಸ್ಥಾಪನೆ, ಸೆಟಲೈಟ ಬಸ್ ನಿಲ್ದಾಣ, 125 ಕೋಟಿ ಮೊತ್ತದದಲ್ಲಿ ಡ್ರೈನೇಜ್, ವಿದ್ಯುತ್, ನಗರದ ಎಲ್ಲ ಕಡೆ ಸಿಸಿ ಕ್ಯಾಮರಾ ಅಳವಡಿಕೆ ಕಾಮಗಾರಿ, 1500 ಮನೆ ನಿರ್ಮಾಣ ಕಾಮಗಾರಿ, ಹೀಗೆ ಇನ್ನು ನಗರದ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಜೋತೆಗೆ 4 ರಿಂದ 5 ಜನ ಮಂತ್ರಿಗಳು ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ಮಾಡಬೇಕಾಗಿದೆ ಎಂದು ಹೇಳಿದರು.
ಸದರಿ ಸಭೆಯಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆ ಶಿಕ್ಷಣ ಕ್ಷೆತ್ರ, ಆರೋಗ್ಯ ಕ್ಷೇತ್ರ, ಕೃಷಿ ಕ್ಷೇತ್ರ ಗೋಶಾಲೆ ಹೀಗೆ ಸಮಾಜಕ್ಕೆ ನೀಡುತ್ತಿರುವ ಸೇವೆಗಳು ದಿನದಿಂದ ದಿನಕ್ಕೆ ಇನ್ನೂ ಹೆಚ್ಚಾಗುತ್ತಾ ಸಾಗಬೇಕು ಎಂದರು ಮತ್ತು ಜಾತ್ರೆ ತಯಾರಿ ಹಾಗೂ ನಗರದ ಅಭಿವೃದ್ಧಿ ಕುರಿತಂತೆ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥೆ ಆಡಳಿತ ಮಂಳಿಯ ಬಸಯ್ಯ ಹಿರೇಮಠ, ಸಂಗು ಸಜ್ಜನ್, ಜಗದೀಶ ಕ್ಷತ್ರಿ, ಎಸ್.ಹೆಚ್.ನಾಡಗೌಡರ, ಸಿದ್ರಾಮಪ್ಪ ಉಪ್ಪಿನ್, ಸಾಯಿಬಣ್ಣ ಭೂವಿ, ವಿಜಯಕುಮಾರ ಡೋಣಿ, ಎಂ.ಎಂ.ಸಜ್ಜನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

error: Content is protected !!