ಶ್ರೀ ಶಿವಚಿದಂಬರ ಜಯಂತಿ ನಿಮಿತ್ಯ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು

BI ಬಿಜಾಪುರ : ಪ್ರತಿ ವರ್ಷದಂತೆ ಈ ವರ್ಷವು ಕೂಡಾ ವಿಜಯಪುರ ನಗರದ ಮನಗೂಳಿ ರಸ್ತೆಯ ರಿಂಗ ರೋಡನಲ್ಲಿರುವ ಶ್ರೀ ಚಿದಂಬರ ದೇವಸ್ಥಾನದಲ್ಲಿ ಚಿದಂಬರ ಜಯಂತಿಯ ನಿಮಿತ್ಯ ದಿನಾಂಕ:18/11/2019 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 6-00ಘಂಟೆಗೆ ಕಾಕಡಾರತಿ,10-00ಘಂಟೆಗೆ ಶ್ರೀ ಚಿದಂಬರ ಮಹಾಸ್ವಾಮಿಯ ಅಭಿಷೇಕ ಹಾಗೂ ಪೂಜೆ, ಮಧ್ಯಾಹ್ನ 12-00ಘಂಟೆಗೆ ಶ್ರೀ ಚಿದಂಬರ ಮಹಾಸ್ವಾಮಿಯ ತೊಟ್ಟಿಲೋತ್ಸವ 12-30ಘಂಟೆಗೆ ಶ್ರೀ.ರಮೇಶ ದೇಶಪಾಂಡೆ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ, 1:00ಘಂಟೆಗೆ ಸಭಾ ಕಾರ್ಯಕ್ರಮ ಹಾಗೂ ಶ್ರೀ.ಸಿ.ಕೆ.ಪಾಟೀಲ, ವಿಜಯಪುರ ಇವರಿಂದ ಮಹಾಸ್ವಾಮಿಯ ಬಗ್ಗೆ ಹಿತನುಡಿಗಳು, 2-00ಘಂಟೆಗೆ ಮಂಗಳಾರತಿ ಹಾಗೂ ಮಹಾಪ್ರಸಾದ ಹಾಗೂ ಸಾಯಂಕಾಲ 6-00ಘಂಟೆಗೆ ಶ್ರೀ ಚಿದಂಬರ ಮಹಾಸ್ವಾಮಿಯ ಭಜನೆ ಇತ್ಯಾದಿ ಕಾರ್ಯಕ್ರಮಗಳು ಜರುಗಲಿದ್ದು, ಕಾರಣ ಭಕ್ತಾಧಿಗಳು ಆಗಮಿಸಿ ಮಹಾಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಚಿದಂಬರ ಸೇವಾ ಸಮಿತೀಯ ಅಧ್ಯಕ್ಷ ಪಿ.ಬಿ.ಹಂಗರಗಿ ವಿನಂತಿಸಿದರು.

error: Content is protected !!