ಶತಾಯುಷಿ ಕನ್ನೋಳ್ಳಿ ಹಿರೇಮಠ ಸ್ವಾಮೀಜಿಗಳು ಲಿಂಗೈಕ್ಯ

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕನ್ನೋಳ್ಳಿ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳು ತೀವ್ರ ಅನಾರೋಗ್ಯ ಹಿನ್ನೆಲೆ ಇಂದು ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ.

ಶ್ರೀಗಳಿಗೆ 105 ವರ್ಷ ವಯಸ್ಸಾಗಿತ್ತು.

ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಶ್ರೀಗಳು.

ಶ್ರೀಗಳು ನಡೆದಾಡುವ ದೇವರು, ಧನ್ವಂತರಿ ಎಂದು ಈ ಭಾಗದಲ್ಲಿ ಪ್ರಸಿದ್ಧಿಯಾಗಿದ್ದರು.

ಬೆಳಗಿನ ಜಾವ ಲಿಂಗಪೂಜೆ ವೇಳೆ ದೇಹ ತ್ಯಾಗ ಮಾಡಿದ ಸ್ವಾಮೀಜಿಗಳು.

1915 ಜನಿಸಿದ್ದ ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳು, ಆಯುರ್ವೇದ ಪಂಡಿತರಾಗಿದರು.

1933 ರಲ್ಲಿ ಕನ್ನೋಳ್ಳಿ ಹಿರೇಮಠದ ಪಟ್ಟಾಧಿಕಾರತ್ವ ಸ್ವೀಕರಿಸಿದ ಇವರು,
ಹಲವು ಪವಾಡಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು.

ನಾಳೆ ಮದ್ಯಾನ್ಹ 12 ಗಂ ಕನ್ನೋಳ್ಳಿಯ ಶ್ರೀ ಮಠದಲ್ಲಿ ಸಮಾಧಿಕ್ರಿಯೆ ನೇರೆವೇರಿಸಲಾಗುವುದು ಎಂದು ಶ್ರೀಮಠದ ಷ.ಬ್ರ ಸಿದ್ದಲಿಂಗ ಶಿವಾಚಾಯ೯ರು ತಿಳಿಸಿದ್ದಾರೆ.

error: Content is protected !!