ವಿಮಾನ ನಿಲ್ದಾಣ ಸಿದ್ಧತೆಗೆ ಸಂಸದ ಜಿಗಜಿಣಗಿ ಆಗ್ರಹ

BI ಬಿಜಾಪುರ : ವಿಜಯಪುರ ವಿಮಾನ ನಿಲ್ದಾಣ ಸ್ಥಾಪನೆ ಪ್ರಗತಿ ಕುರಿತು ಸಂಸದ ರಮೇಶ ಜಿಗಜಿಣಗಿ ಇಂದು ದೇಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಹರದೀಪಸಿಂಗ್ ಪುರಿ ಅವರೊಂದಿಗೆ ವಿವರವಾಗಿ ಚರ್ಚಿಸಿದರು. ಯಾವದೆ ಪರಿಸ್ಥಿತಿಯಲ್ಲಿ ಸಿದ್ಧತೆಯಲ್ಲಿ ಹಿನ್ನೆಡೆಯಾಗಬಾರದೆಂದು ಸಚಿವರಿಗೆ ಸೂಚಿಸಿದ ರಮೇಶ ಜಿಗಜಿಣಗಿ ಮುಂದಿನ ಸಭೆಯಲ್ಲಿ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಅನುಮತಿ ಕೊಡುವಂತೆ ಒತ್ತಾಯಿಸಿದರು. ಈ ಕುರಿತು ಕರ್ನಾಟಕ ಮುಖ್ಯಮಂತ್ರಿ ಯಡಿಯುರಪ್ಪ ಅವರೊಂದಿಗೂ ಮಾತನಾಡಿ ವಿಜಯಪುರ ವಿಮಾನ ನಿಲ್ದಾಣಕ್ಕೆ ಅಗತ್ಯ ಕಾಗದ ಪತ್ರ ಸಮೇತ ಶೀಘ್ರದಲ್ಲಿ ಕೇಂದ್ರ ವಿಮಾನಯಾನ ಇಲಾಖೆಗೆ ಶಿಫಾರಸು ಪತ್ರ ಸಲ್ಲಿಸುವಂತೆ ಹೇಳುವದಾಗಿ ತಿಳಿಸಿದ ರಮೇಶ ಜಿಗಜಿಣಗಿ ಆದಷ್ಟು ಬೇಗ ವಿಮಾನ ನಿಲ್ದಾಣಕ್ಕೆ ಅನುಮತಿ ನೀಡಿ ಕಾಮಗಾರಿ ಪ್ರಾರಂಭಕ್ಕೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
ಸಂಸದ ರಮೇಶ ಜಿಗಜಿಣಗಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಚಿವ ಹರದೀಪಸಿಂಗ್ ವಿಜಯಪುರ ವಿಮಾನ ನಿಲ್ದಾಣ ವಿಷಯ ನಮ್ಮ ತುರ್ತು ಪರಿಶೀಲನೆಯಲ್ಲಿದೆ ಎಂದರು. ರಾಜ್ಯ ಸರಕಾರದ ಜೊತೆ ನಮ್ಮ ಅಧಿಕಾರಿಗಳು ಸಂಪರ್ಕಲ್ಲಿದ್ದು ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಕೆಲಸ ನಡೆಸಿದ್ದಾರೆ. ಎರಡೂ ಸರಕಾರಗಳು ಈ ವಿಷಯದಲ್ಲಿ ಆಸಕ್ತಿ ತೊರಿಸುತ್ತಿವೆ ಎಂದ ಅವರು ಶೀಘ್ರವಾಗಿ ಅನುಮತಿ ಕೊಡಲು ಉತ್ಸುಕರಾಗಿರುವದಾಗಿ ತಿಳಿಸಿದರು ಎಂದು ಪ್ರಕಟಣೆಯಲ್ಲಿ ರಮೇಶ ಜಿಗಜಿಣಗಿ ತಿಳಿಸಿದರು.

error: Content is protected !!