ವಿಜಯಪುರ ಬಿಜೆಪಿ ನಗರ ಮಂಡಲದ ಅಧ್ಯಕ್ಷರನ್ನಾಗಿ ಮಳುಗೌಡಾ ಪಾಟೀಲ (ತೊನಶ್ಯಾಳ) ನೇಮಕ

BI ಬಿಜಾಪುರ : ಮಳುಗೌಡಾ ಪಾಟೀಲ (ತೊನಶ್ಯಾಳ) ಇವರನ್ನು ವಿಜಯಪುರ ನಗರದ ಮಂಡಲದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ನಗರ ಚುನಾವಣೆ ಅಧಿಕಾರಿಯಾದ ಅನೀಲ ಜಮಾದಾರ ಇವರು ಮಾತನಾಡಿ ಬಿಜೆಪಿ ರಾಜ್ಯ ಘಟಕದ ಸೂಚನೆ ಮೇರೆಗೆ ಹಾಗೂ ಜಿಲ್ಲಾದ್ಯಕ್ಷರ ಸಲಹೆ ಮೇರೆಗೆ ಈ ಸಭೆಯಲ್ಲಿ ಮಳುಗೌಡಾ ಪಾಟೀಲ (ತೊನಶ್ಯಾಳ) ಇವರನ್ನು ವಿಜಯಪುರ ನಗರದ ಮಂಡಲದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ವಿಜಯಪುರ ನಗರ ಉಸ್ತುವಾರಿ ರವಿಕಾಂತ ಬಗಲಿ, ಭಿಮಾಶಂಕರ ಹದನೂರ, ಜಿಲ್ಲಾ ಚುನಾವಣಾ ಸಹ ಪ್ರಭಾರಿ ಸಿದ್ದಲಿಂಗ ಹಂಜಗಿ, ಮಾಜಿ ನಗರ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಸತೀಶ ಡೋಬಳೆ ಹಾಗೂ ವಿಜಯ ಜೋಶಿ ಉಪಸ್ಥಿತರಿದ್ದರು.

error: Content is protected !!