ವಿಜಯಪುರ ನಗರದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಗೃಹ ಸಚಿವರ ಸಭೆ

BI NEWS, ಬಿಜಾಪುರ : ವಿಜಯಪುರ ನಗರದಲ್ಲಿ ಆದಿಲ್‍ಶಾಹಿ ಕಾಲದ ನೀರಿನ ವ್ಯವಸ್ಥೆ, ಸುರಂಗ ಮಾರ್ಗ(ಕರೇಜ್) ವ್ಯವಸ್ಥೆ ಇಡೀ ವಿಶ್ವದಲ್ಲಿಯೇ ಗಮನ ಸೆಳೆಯಬಹುದಾದ ಸ್ಮಾರಕವಾಗಿದ್ದು, ಇದನ್ನು ಸಂರಕ್ಷಿಸಿ, ಪ್ರವಾಸಿಗರಿಗೆ ವೀಕ್ಷಿಸಲು ಅನುಕೂಲವಾಗುವಂತೆ ವಿಜಯಪುರ ನಗರದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ರೂಪರೇಷೆ ಸಿದ್ದಪಡಿಸಲು ಗೃಹ ಸಚಿವ ಎಂ.ಬಿ.ಪಾಟೀಲ್‍ರವರು ಬೆಂಗಳೂರಿನ ವಿಧಾನಸೌಧದ ತಮ್ಮ ಕಛೇರಿಯಲ್ಲಿ ಇಂದು ಸಭೆಯನ್ನು ನಡೆಸಿದರು.

ಪ್ರವಾಸೋದ್ಯಮ ಇಲಾಖೆ ಹಿರಿಯ ಉನ್ನತ ಅಧಿಕಾರಿಗಳು, ವಿಜಯಪುರ ಪಾಲಿಕೆ ಆಯುಕ್ತ ಡಾ.ಔದ್ರಾಮ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಹೇಶ ಖ್ಯಾತನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!