ವಿಜಯಪುರ ಜಿಲ್ಲಾ ಕಾನಿಪ ಸಂಘದ ನೂತನ ಅಧ್ಯಕ್ಷರಾಗಿ ಸಚೇಂದ್ರ ಲಂಬು ಅಧಿಕಾರ ಸ್ವೀಕಾರ

BI ಬಿಜಾಪುರ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸಚೇಂದ್ರ ಲಂಬು ಅವರು ಶನಿವಾರ ಅಧಿಕಾರ ವಹಿಸಿಕೊಂಡರು.

ಜಿಲ್ಲಾ ಕಾನಿಪ ಸಂಘಕ್ಕೆ 2018 ರಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಆದ ಅಧಿಕಾರ ಹಂಚಿಕೆಯ ಒಪ್ಪಂದದಂತೆ ಅಧ್ಯಕ್ಷ ಸ್ಥಾನದ ಮೂರು ವರ್ಷಗಳ ಅವಧಿಯಲ್ಲಿ ಮೊದಲನೇ ಒಂದೂವರೆ ವರ್ಷದ ಅವಧಿಗೆ ಶರಣಬಸಪ್ಪ ಮಸಳಿ ಅವರು ಅಧ್ಯಕ್ಷರಾಗಿದ್ದರು. ಈಗ ಅವರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹಿಂದಿನ ಒಪ್ಪಂದದಂತೆ ಮುಂದಿನ ಒಂದೂವರೆ ವರ್ಷದ ಅವಧಿಗೆ ಸಚೇಂದ್ರ ಲಂಬು ಅವರು ಅಧ್ಯಕ್ಷರಾಗಿದ್ದಾರೆ.

ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಕಾನಿಪ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶರಣಬಸಪ್ಪ ಮಸಳಿ ಅವರು ಸಂಘದ ಠರಾವು ಪುಸ್ತಕ ನೀಡುವ ಮೂಲಕ ನೂತನ ಅಧ್ಯಕ್ಷ ಸಚೇಂದ್ರ ಲಂಬು ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ನಂತರ ಮಾತನಾಡಿದ ಅವರು, “ನನ್ನ ಅವಧಿಯಲ್ಲಿ ಪತ್ರಿಕಾ ಭವನ ಸಂಘಕ್ಕೆ ಹಸ್ತಾಂತರಿಸಿಕೊಳ್ಳುವುದು ಸೇರಿದಂತೆ ಸಾಕಷ್ಟು ಒಳ್ಳೆಯ ಕೆಲಸಗಳಾಗಿವೆ. ಇನ್ನೂ ಬಹಳಷ್ಟು ಕೆಲಸಗಳಾಗಬೇಕಿದೆ. ಸಂಘದ ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡಿದ ಎಲ್ಲ ಹಿರಿಯರಿಗೆ, ಸಂಘದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೂತನ ಅಧ್ಯಕ್ಷರಿಗೂ ಇದೇ ರೀತಿಯ ಸಹಕಾರ ನೀಡಬೇಕು”. ಎಂದು ಕೋರಿದರು.

ಇದೇ ಸಂದರ್ಬದಲ್ಲಿ ಸಂಘದ ನೂತನ ಅಧ್ಯಕ್ಷ ಸಚೇಂದ್ರ ಲಂಬು, ಹಿಂದಿನ ಅಧ್ಯಕ್ಷ ಶರಣಬಸಪ್ಪ ಮಸಳಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (ಐಎಫ್‌ಡಬ್ಲೂಜೆ) ರಾಷ್ಟ್ರೀಯ ಮಂಡಳಿ ಸದಸ್ಯ ರಾಜು ಕೊಂಡಗೂಳಿ, ಶ್ರೀ ಸಿದ್ಧೇಶ್ವರ ಸಂಸ್ಥೆಯ ಪ್ರತಿಷ್ಠಿತ ‘ಶ್ರೀ ಸಿದ್ಧೇಶ್ವರ ರತ್ನ’ ಪ್ರಶಸ್ತಿ ಪುರಸ್ಕೃತರಾದ ಕಾನಿಪ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ ಯಡಳ್ಳಿ(ಟಿವಿ9 ಜಿಲ್ಲಾ ವರದಿಗಾರರು), ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವೇಂದ್ರ ಹೆಳವರ(ಲೋಕದರ್ಶನ ಪತ್ರಿಕೆ ಜಿಲ್ಲಾ ವರದಿಗಾರರು), ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಶಿಕಾಂತ ಮೆಂಡೇಗಾರ(ದಿಗ್ವಿಜಯ ನ್ಯೂಜ್ ಜಿಲ್ಲಾ ವರದಿಗಾರರು) ಅವರನ್ನು ಸಂಘದ ವತಿಯಿಂದ ಹೃದಯಸ್ಪರ್ಷಿಯಾಗಿ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಫಿರೋಜ್ ರೋಜಿನದಾರ, ಗ್ರಾಮೀಣ ಉಪಾಧ್ಯಕ್ಷ ದೌಲತ್ರಾಯ ವಡವಡಗಿ, ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡೂರ, ಕಾರ್ಯದರ್ಶಿ ಶಮಸುದ್ದೀನ್ ಸೈಯ್ಯದ್, ಖಜಾಂಚಿ ದೀಪಕ ಶಿಂತ್ರೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಕೌಶಲ್ಯ ಪನ್ನಾಳಕರ, ಸರದಾರ ಪತ್ತಾರ, ನಿಂಬಣ್ಣ ಕಾಂಬಳೆ, ಪುರುಷೋತ್ತಮ ಕುಲಕರ್ಣಿ, ಶಕೀಲಅಹ್ಮದ ಬಾಗಮಾರೆ, ಸಂಜೀವ ಕುಲಕರ್ಣಿ, ಸುನೀಲ ಕಾಂಬಳೆ, ಮಲ್ಲಿಕಾರ್ಜುನ ಕೆಂಭಾವಿ, ನಾಮನಿರ್ದೇಶಿತ ಸದಸ್ಯ ಗುರುರಾಜ ಗದ್ದನಕೇರಿ, ಸಿಂದಗಿ ತಾಲೂಕು ಘಟಕದ ಅಧ್ಯಕ್ಷ ಆನಂದ ಶಾಬಾದಿ, ಅಬುಶಾಮಾ ಹವಾಲದಾರ(ಇಂಡಿ), ಸಿದ್ದು ಚಲವಾದಿ(ಮುದ್ದೇಬಿಹಾಳ) ಹಾಗೂ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!