ಲಾಕ್ ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪೋಸ್ಟ ಆಫಿಸ್‌ಗಳು ಪ್ರಾರಂಭ

BI ಬಿಜಾಪುರ : ನೋವೆಲ್ ಕೊರೋನಾನ ವೈರಸ್‌ದಿಂದಾಗಿ ಸಾರ್ವಜನಿಕರಿಗೆ ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳಲ್ಲಿ ಆಗುತ್ತಿರುವ ಅನಾನುಕೂಲತೆಯನ್ನು ಮನಗಂಡು ಅಗತ್ಯ ವಸ್ತುಗಳನ್ನು ಸಾರ್ವಜನಿಕರಿಗೆ ತಲುಪಿಸಲು ವಿಜಯಪುರ ಜಿಲ್ಲಾ ಹೆಡ್ ಪೋಸ್ಟ ಆಫಿಸ್ ವತಿಯಿಂದ ಪ್ರಾರಂಭಿಸಲಾಗಿದೆ.

ಪಾರ್ಸಲ್‌ಗಳನ್ನು ಜಿಲ್ಲಾ ಕೇಂದ್ರ ಅಂಚೆ ಕಚೇರಿಗಳು ಹಾಗೂ ಉಪಅಂಚೆ ಕಚೇರಿಗಳ ಮೂಲಕ ಸಾರ್ವಜನಿಕರಿಗೆ ತಲುಪಿಸಲು ವಿಶೇಷ ಸಿದ್ದತೆ ಮಾಡಿಕೊಂಡಿದ್ದು. ಬುಕ್ಕಿಂಗ್ ಮತ್ತು ವೈದ್ಯಕೀಯ ಸಲಕರಣೆಗಳ ಪಾರ್ಸಲ್‌ಗಳನ್ನು ರವಾನಿಸಲಾಗುತ್ತಿದೆ. ಅಗತ್ಯ ವಸ್ತುಗಳಾದ ಸಾಮಾಜಿಕ ಭದ್ರತಾ ಯೋಜನೆಯಡಿಯ ವೇತನ, ಮನಿ ಆರ್ಡರ್‌ಗಳು, ಕಚೇರಿಯಲ್ಲಿ ಬಟವಡೆ (ವಿಂಡೊ ಡಿಲೇವರಿ) ಹಾಗೂ ಮನೆ ಬಾಗಿಲಿಗೆ ಡಿಲೆವರಿ ತಲುಪಿಸಲಾಗುವುದು.

ಹಣಕಾಸಿನ ಸೇವೆಗಳಾದ ಹಣ ಹಿಂತಗೆತ ಹಾಗೂ ಠೇವಣಿಗಳು (ವಿಡ್ರಾಲ್ ಹಾಗೂ ಡಿಪಾಸಿಟ್) ಗಳು ಚಾಲ್ತಿಯಲ್ಲಿರುತ್ತದೆ.


ಅಂಚೆಕಚೇರಿಯ ಎ.ಟಿ.ಎಂ ತೆರೆಯಲಾಗಿದ್ದು ಅವರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಮೈಕ್ರೋ ಎಟಿಎಂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಐಪಿಪಿಬಿ ಬ್ಯಾಂಕ್ ಮೂಲಕ ಹಣವನ್ನು ಹಿಂಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿಜಯಪುರ ಜಿಲ್ಲೆಯ ಅಂಚೆ ಅಧಿಕ್ಷಕ ರಘುನಾದ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!