ಲಾಕಡೌನ್ ಸಡಿಲಿಕೆ, ನಿರ್ಲಕ್ಷ್ಯ ಬೇಡ : ಶಾಸಕ ಸೋಮನಗೌಡ ಪಾಟೀಲ ಸಾಸನೂರ

BI : ಲಾಕಡೌನ್ ಸಡಿಲಿಕೆಯಾಗಿದೆ ಎಂದು ಯಾರು ನಿರ್ಲಕ್ಷ್ಯ ಮಾಡಬಾರದು ಪ್ರತಿಯೊಬ್ಬರು ಮಾಸ್ಕ ಧರಿಸಿಯೇ ಹೊರಗಡೆ ಸಂಚರಿಸಬೇಕು. ಕೊರೊನಾ ವೈರಸ್ ಕುರಿತು ಎಚ್ಚರ ವಹಿಸಬೇಕು ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ತಿಳಿಸಿದ್ದಾರೆ.

ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಲಾಕಡೌನ್ ಸಡಿಲಿಕೆ ಮಾಡಿದೆ. ಆದರೆ ಕೊರೊನಾ ಬಗ್ಗೆ ನಾವು ಎಚ್ಚರಿಕೆ ವಹಿಸಲೇಬೇಕು. ಪ್ರತಿಯೊಬ್ಬರು ಮಾಸ್ಕ ಧರಿಸಿಯೇ ಸಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅಗತ್ಯ ವಿಲ್ಲದಿದ್ದರೆ ಹೊರಗಡೆ ಬರಬಾರದು. ಸರ್ಕಾರ ಒಂದು ವರ್ಷದವರೆಗೆ ಮಾಸ್ಕ ಕಡ್ಡಾಯಗೊಳಿಸಿ ಕಾನೂನು ಮಾಡಿದೆ. ಮನೆಯಿಂದ ಹೊರಗಡೆ ಬರಬೇಕಾದರೆ ಮುಖಕ್ಕೆ ಮಾಸ್ಕ ಕಡ್ಡಾಯವಾಗಹಿರಲಿ ಎಂತಹ ಪರೀಸ್ಥಿತಿಯಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೊರೊನಾ ವೈರಸ್ ಕುರಿತು ಜಾಗೃತಿ ಇರಲಿ.

ಈಗಾಗಲೇ ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಆಗಮಿಸಲು ಸರ್ಕಾರ ಕೆಲವು ನಿಯಮಗಳನ್ನು ಸಡಲಿಕೆ ಮಾಡಿ ಅನುಕೂಲ ಮಾಡಿಕೊಟ್ಟಿದೆ. ಆದರೆ ಮಹಾರಾಷ್ಟ್ರದಿಂದ ನಮ್ಮ ರಾಜ್ಯಕ್ಕೆ ಬರಲು ಯಾವುದೇ ರೀತಿಯ ಅನುಮತಿ ನೀಡಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೂ ದೂರವಾಣಿಯ ಮುಖಾಂತರ ಚರ್ಚೆ ಮಾಡಿದ್ದೇನೆ. ಹೊರಗಿನಿಂದ ಬಂದವರನ್ನು ತಕ್ಷಣವೇ ವೈದ್ಯಕೀಯ ಪರೀಕ್ಷೆ ನಡೆಸಿ 15 ದಿನಗಳ ಕಾಲ ಕೊರಂಟೈನ್‌ದಲ್ಲಿ ಇಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ನಮ್ಮ ಮತಕ್ಷೇತ್ರದಲ್ಲಿ ಇಲ್ಲಿಯವರೆಗೆ ಯಾವುದೇ ಕೊರೊನಾ ಹಾವಳಿ ಕಂಡು ಬಂದಿಲ್ಲ. ಮುನ್ನೆಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯವರು ಕಟ್ಟುನಿಟ್ಟಿನ ಕ್ರಮ ವಹಿಸಿ ಒಳ ಬರುವವರನ್ನು ತಪಾಷಣೆಗೊಳಪಡಿಸಬೇಕು. ತಾಲೂಕು ಆಡಳಿತ ನಿರಂತರ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರ ಮೂಲಕ ಕ್ಷೇತ್ರದಲ್ಲಿ ಬರುವವರನ್ನು ಗಮನಿಸಬೇಕು ಎಂದು ಸೂಚಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಪ್ರತಿಯೊಂದಕ್ಕೂ ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

error: Content is protected !!