ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ತೀವ್ರವಾಗಿ ಗಾಯ

ಮುದ್ದೇಬಿಹಾಳ: ತಾಲೂಕಿನ ಢವಳಗಿ ಗ್ರಾಮದ ಸರ್ಕಾರಿ ಹಾಸ್ಟೇಲ್ ಬಳಿ ಇಳಕಲ್ ಸಾರಿಗೆ ಘಟಕದ ಇಳಕಲ್ ಮುಂಬೈ ಬಸ್ಸು ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಬಡಿದು ಆತ ತೀವ್ರವಾಗಿ ಗಾಯಗೊಂಡು ಸಾವು ನೋವಿನ ನಡುವೆ ಹೋರಾಡುತ್ತಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಆತನನ್ನು ಢವಳಗಿ ಗ್ರಾಮದ ಬಸವನಗರ ನಿವಾಸಿ ಮಾಹಿನ್‍ಬಾಷಾ ತಾಂಬೋಲಿ (7) ಎಂದು ಗುರ್ತಿಸಲಾಗಿದೆ. ತೀವ್ರ ಗಾಯಗೊಂಡಿರುವ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮುದ್ದೇಬಿಹಾಳ ಠಾಣೆ ಪೆÇಲೀಸರು ಬಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಘಟನೆ ಕುರಿತು ಇದುವರೆಗೂ (ರಾತ್ರಿ 8) ಪ್ರಕರಣ ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮಾಹಿನ್‍ಬಾಷಾ ಮುದ್ದೇಬಿಹಾಳ ಪಟ್ಟಣದಲ್ಲಿರುವ ಬಸವಚೇತನ ಶಾಲೆಯಲ್ಲಿ ಎಲ್‍ಕೆಜಿ ಓದುತ್ತಿದ್ದ. ನಿತ್ಯ ಶಾಲಾ ಬಸ್‍ನಲ್ಲೇ ಹೋಗಿ ಬರುವುದು ಮಾಡುತ್ತಿದ್ದ. ಶುಕ್ರವಾರ ಸಂಜೆ ಶಾಲೆ ಬಿಟ್ಟ ಮೇಲೆ ಗ್ರಾಮಕ್ಕೆ ಬಂದು ರಸ್ತೆಪಕ್ಕದಲ್ಲೇ ಶಾಲಾ ಬಸ್‍ನಿಂದ ಇಳಿದಿದ್ದಾನೆ. ಈ ವೇಳೆ ಆತನ ಜೊತೆಗಿದ್ದ ಮಹಿಳೆಯೊಬ್ಬಳು ರಸ್ತೆ ದಾಟಲು ಕೈಹಿಡಿದು ಕರೆದೊಯ್ಯುತ್ತಿದ್ದಳು. ಬಸ್ಸು ವೇಗವಾಗಿ ಬರುವುದನ್ನು ಕಂಡು ತಾನು ರಸ್ತೆ ದಾಟಲು ಬಾಲಕನ ಕೈ ಬಿಟ್ಟಿದ್ದಾಳೆ. ಇದನ್ನರಿಯದ ಬಾಲಕ ರಸ್ತೆ ದಾಟಲು ಯತ್ನಿಸಿದಾಗ ಬಸ್ಸು ಈತನಿಗೆ ಅಪ್ಪಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

error: Content is protected !!