ರಸ್ತೆ ಅಗಲೀಕರಣಕ್ಕೊಳಪಡುವ ಆಸ್ತಿ-ಕಟ್ಟಡಗಳ ಮೌಲ್ಯ ವರದಿ ಸಲ್ಲಿಸಲು ಸೂಚನೆ

BI NEWS, ಬಿಜಾಪುರ : ನಗರದಲ್ಲಿ ಸಂಚಾರಿ ದಟ್ಟಣೆ ಹಾಗೂ ಸುಗಮ ಸಂಚಾರ ದೃಷ್ಠಿಯಿಂದ ಜಿಲ್ಲಾಡಳಿತದ ವತಿಯಿಂದ ಈ ಹಿಂದೆ ಯೋಜನೆ ರೂಪಿಸಿದ್ದ ಮಾಸ್ಟರ್ ಪ್ಲಾನ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಅತ್ಯಂತ ತುರ್ತಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ಸಂಭಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿಜಯಪುರ ಶಹರದ ಗಾಂಧಿ ವೃತ್ತದಿಂದ ಶಹಾಪೂರ ಅಗಸಿ, ಸೋಲಾಪುರ ರಸ್ತೆ ವರೆಗೆ ಮಹಾಯೋಜನೆಯಂತೆ ರಸ್ತೆ ಅಗಲೀಕರಣ ಮಾಡುವ ಪ್ರಸ್ತಾವನೆಯಲ್ಲಿನ ಆಸ್ತಿಗಳ ವ್ಯಾಲ್ಯುವೇಷನ್ ರಿಪೋಟನ್ನು ನಿಯಮಾನುಸಾರವಾಗಿ ಅನುಷ್ಠಾನಗೊಳಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನಗರದ ಆಜಾದ ರಸ್ತೆಯನ್ನು ಮಹಾಯೋಜನೆ ನಕ್ಷೆಯಂತೆ ರಸ್ತೆ ಅಗಲೀಕರಣಗೊಳಿಸಲು ಯೋಜನೆ ಹಮ್ಮಿಕೊಳ್ಳಲು ವಿವಿಧ ಇಲಾಖೆಗಳಿಗೆ ಸರ್ವೇ ಮಾಡಲು ಹಾಗೂ ಸರ್ವೇ ಇಲಾಖೆ ಗುರುತಿಸುವ ರಸ್ತೆ ಅಗಲೀಕರಣದ ಆಸ್ತಿಗಳ –ಕಟ್ಟಡಗಳ ಮೌಲ್ಯಮಾಪನ ಮಾಡಿ ನೀಡುವಂತೆ ತಿಳಿಸಲಾಗಿತ್ತು. ಅದರಂತೆ ಆಝಾದ ರಸ್ತೆಯ ಅಗಲೀಕರಣದ ಕುರಿತು 459 ಆಸ್ತಿಗಳಿದ್ದು, ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ ವರದಿ ಸಲ್ಲಿಸಲು ತಿಳಿಸಲಾಗಿತ್ತು. ಆದರೆ ಈವರೆಗೆ ವ್ಯಾಲುವೇಶನ ವರದಿ ಸಲ್ಲಿಸಿರುವುದಿಲ್ಲ ಕೂಡಲೇ ಜೂನ್.28ರೊಳಗೆ ರಸ್ತೆಯ ಅಗಲೀಕರಣಕ್ಕೆ ಒಳಪಡುವ ಆಸ್ತಿಗಳ-ಕಟ್ಟಡಗಳ ಮೌಲ್ಯ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಔದ್ರಾಮ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!