ಮೃತ ಕುಟುಂಬಗಳಿಗೆ ಪರಿಹಾರ ಬೇಡ, ಜೀವ ವಾಪಸ್ ಕೊಡಲಿ: ಎಂ.ಬಿ.ಪಾಟೀಲ


BI ಬಿಜಾಪುರ : ಸರ್ಕಾರ ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ 10 ಲಕ್ಷ ರೂ. ಪರಿಹಾರ ಕೊಡೋದು ಬೇಡ. ಸತ್ತವರಿಬ್ಬರ ಜೀವವನ್ನು ವಾಪಸ್ ಕೊಡಲಿ ಎಂದು ಮಾಜಿ ಗೃಹ ಸಚಿವ ಶಾಸಕ ಎಂ.ಬಿ.ಪಾಟೀಲ ಕಿಡಿಕಾರಿದ್ದಾರೆ.
ಮಂಗಳೂರು ಗೋಲಿಬಾರ್‌ನಲ್ಲಿ ಸತ್ತವರ ಕುಟುಂಬಗಳಿಗೆ ಒಂದು ರೂಪಾಯಿ ಕೂಡ ಪರಿಹಾರ ಕೊಡುವುದಿಲ್ಲ ಎಂಬ
ಸಿಎಂ ಬಿ.ಎಸ್.ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ ಅತ್ಯಂತ ಕೆಟ್ಟ ಸಂಪ್ರದಾಯವನ್ನು ಅನುಸರಿಸುತ್ತಿದೆ. ಅವರ ದುಃಖದ
ಮನಸಿನ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಸತ್ತವರ ಮೇಲೆ ಎಫ್‌ಐಆರ್ ಹಾಕಿದ್ದಾರೆ. ಇವರ ಮನಸ್ಥಿತಿ ಏನು ಅಂತ ಗೊತ್ತಾಗುತ್ತದೆ. ಪಿಹೆಚ್‌ಡಿ ಮಾಡುವ ವಿದ್ಯಾರ್ಥಿಗೆ ಗುಂಡು ಹಾರಿಸಿದ್ದಾರೆ. ದುಡ್ಡು ಮುಖ್ಯವಲ್ಲ, ಮೊದಲು ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಿ. ಜಾತಿ
ಮುಖ್ಯ ಅಲ್ಲ, ಮಾನವೀಯತೆ ಮುಖ್ಯ. ಮಂಗಳೂರು ಗೋಲಿಬಾರ್‌ನಲ್ಲಿ ಸತ್ತವರ ಕುಟುಂಬಸ್ಥರಿಗೆ ನಾವೇ 10 ಕೋಟಿ ಒಟ್ಟು ಮಾಡಿ ಕೊಡುತ್ತೇವೆ ಎಂದರು.
ಮೃತರ ಕುಟುಂಬಸ್ಥರು ಅಳುತ್ತಾ, ನನಗೆ ಆಗಿರುವುದು ಮತ್ತೆ ಯಾರಿಗೂ ಆಗಬಾರದು ಎಂದು ಹೇಳುತ್ತಾರೆ. ಮೃತರ ಕುಟುಂಬಕ್ಕೆ ಪರಿಹಾರ ಕೊಡುವುದಿಲ್ಲ ಎನ್ನುವುದು ತಪ್ಪು ಯತ್ನಾಳ್ ಅವರಿಗೆ ಏನು ಗೊತ್ತು, ಅವರ ನೋವನ್ನು ನಾವು ಹೋಗಿ ನೋಡಿದ್ದೇವೆ. 10 ಲಕ್ಷ ದೊಡ್ಡದಲ್ಲ, ಜೀವ ವಾಪಸ್ ಕೊಡಿಸಿ. 10 ಕೋಟಿ ನಾವೇ ಬೇಕಾದರೆ ಕೊಡುತ್ತೇವೆ ಎಂದು
ಪುನರುಚ್ಚರಿಸಿದರು. ಪೋಲಿಸ್ ಇಲಾಖೆ ವಿಡಿಯೋ ರಿಲಿಸ್ ಮಾಡಿದೆ. ನಾನು ಸಿದ್ದರಾಮಯ್ಯ ಅವರ ಜೊತೆಗೆ ಮಂಗಳೂರಿಗೆ ಹೋಗಿದ್ದೆ. ನಾವು ಪ್ರತ್ಯಕ್ಷವಾಗಿ ನೋಡಿದಾಗ, ನಮಗೆ ಅನಿಸಿದ್ದು ಗೋಲಿಬಾರ್ ಅನಾವಶ್ಯಕವಾಗಿತ್ತು.
ಹೆಚ್ಚು ಜನರೇನೂ ಇರಲಿಲ್ಲ, ಅವರಿಗೆ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದರೆ ಆಗುತ್ತಿತ್ತು. 100-150 ಜನ ಸೇರುತ್ತಿದ್ದರು. ಇವರು ಅವಕಾಶ ಕೊಟ್ಟು, ಪ್ರತಿಭಟನೆಗೆ ಪರವಾನಿಗೆ ಕೊಟ್ಟಿದ್ದರೆ ಆಗುತ್ತಿತ್ತು. ಗೋಲಿಬಾರ್ ಪೊಲೀಸ್ ಠಾಣೆ ಪಕ್ಕ ಆಗಿರುವುದಲ್ಲ. ಅದು 2 ಕಿಲೋಮೀಟರ್ ದೂರ ಮಾಡಿದ್ದಾರೆ. ಪಾಪ ಅವರುಗಳು ಕೂಲಿ ಕಾರ್ಮಿಕರು, ಕೆಲವರನ್ನು ಅವರೇ ಕರೆಸಿ ಗುಂಡು ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.ಇದು ನ್ಯಾಯಾಂಗ ತನಿಖೆ ಆಗಬೇಕು, ಹೈಕೋರ್ಟ್ ಸಿಟಿಂಗ್ ಜಡ್ಜ್ ಇವರ ನೇತೃತ್ವದಲ್ಲಿ ತನಿಖೆ ಆಗಬೇಕು. ಪಾಪ ಒಬ್ಬ ಪೊಲೀಸ್‌ಗೂ ಗಾಯ ಆಗಿದೆ.ಅದಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ಆಸ್ಪತ್ರೆಯಲ್ಲಿ ನುಗ್ಗಿ ಹೊಡೆಯಲು ಪ್ರಯತ್ನ ಮಾಡಿದ್ದೀರಿ. 100-150 ಜನರನ್ನು ನೀವು ಕಂಟ್ರೋಲ್ ಮಾಡಲು ಆಗಲಿಲ್ವಾ? ಇವರುಗಳು ಎಲ್ಲೋ ಎಡವಿದ್ದಾರೆ, ಈ ಗೋಲಿಬಾರ್ ಅವಶ್ಯಕತೆ ಇರಲಿಲ್ಲ. ಸತ್ಯವನ್ನು ಮರೆ ಮಾಚಿ ಇವರಿಗೆ ಬೇಕಾದ ವಿಡಿಯೋ ರಿಲೀಸ್ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

error: Content is protected !!