ಮುಳವಾಡ ಏತನೀರಾವರಿ ಯೋಜನೆ, ಇಂದಿನಿಂದ ನೀರು ಹರಿಸಲಾಗುತ್ತಿದೆ : ಶಾಸಕ ಎಂ.ಬಿ.ಪಾಟೀಲ್

BI ಬಿಜಾಪುರ : ಮುಳವಾಡ ಏತನೀರಾವರಿ ಯೋಜನೆಯ ಮೂರನೇಯ ಹಂತದ ಮಸೂತಿ ಜಾಕವೆಲ್‍ನಿಂದ ಕೂಡಗಿ ರೈಲ್ವೆ ಪಾಸಿಂಗ್ ಕಾಮಗಾರಿ ನಡೆದಾಗಲೂ ಕಳೆದ ವರ್ಷದಂತೆ ಈ ಬಾರಿಯೂ ಪರ್ಯಾಯ ಮಾರ್ಗಬಳಸಿ, ಇಂದಿನಿಂದ ನೀರು ಹರಿಸಲಾಗುತ್ತಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ, ಶಾಸಕ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಕೂಡಗಿ ಹತ್ತಿರ ರೈಲ್ವೆ ಮಾರ್ಗದ ಕೆಳಗೆ ಸುರಂಗ ನಿರ್ಮಿಸಿ, ವಿಜಯಪುರ ಮುಖ್ಯ ಕಾಲುವೆ ಸಾಗುವ ಕಾಮಗಾರಿ ಕಳೆದ ಎರಡು ವರ್ಷಗಳಿಂದ ತಾಂತ್ರಿಕ ತೊಂದರೆಯಿಂದ ಕುಂಟುತ್ತ ಸಾಗಿದ್ದು, ಮೂರು ಬಾಕ್ಸ್‍ಗಳ ಪೈಕಿ ಇದೀಗ ಒಂದು ಬಾಕ್ಸ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 28ದಿನಗಳ ಕ್ಯುರಿಂಗ್ ಅವಧಿಯ ನಂತರ ಬಾಕ್ಸ್ ಪುಸ್ಸಿಂಗ್ ಆರಂಭಿಸಲಾಗುವದು. ಹೆಚ್ಚಿನ ನೀರಿನ ಲಭ್ಯತೆ ಇರುವ ಈ ಸಮಯದಲ್ಲಿ ಹಾಗೂ ರೈತರಿಗೆ ಮಳೆಯ ಅಭಾವದಿಂದ ನೀರಿನ ಅಗತ್ಯತೆ ಇರುವ ಕಾರಣ ಕಳೆದ ಬಾರಿಯಂತೆ ಪರ್ಯಾಯವಾಗಿ 2.7ಮೀ ವ್ಯಾಸದ ಪೈಪ್ ಬಳಸಿ, ಇಂದಿನಿಂದ ನೀರು ಹರಿಸಲು ಆರಂಭಿಸಲಾಗಿದೆ ಎಂದು ಶಾಸಕ ಎಂ.ಬಿ.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!