ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಎರಡ ಮತಕ್ಷೇತ್ರಗಳು ನನಗೆ ಕಣ್ಣುಗಳಿದ್ದಂತೆ : ಶಾಸಕ ಎ ಎಸ್ ಪಾಟೀಲ ನಡಹಳ್ಳಿ

BI ದೇವರಹಿಪ್ಪರಗಿ: ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಎರಡ ಮತಕ್ಷೇತ್ರಗಳು ನನಗೆ ಕಣ್ಣುಗಳಿದ್ದಂತೆ ಅದಕ್ಕಾಗಿ ಸಂಕಷ್ಟದಲ್ಲಿರುವವರೆಗೆ ಸಹಾಯ ಮಾಡುತ್ತಿರುವೆ ಎಂದು ಮುದ್ದೇಬಿಹಾಳ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಹೇಳಿದರು.

ಬುಧವಾರ ದೇವರಹಿಪ್ಪರಗಿ ಮತಕ್ಷೇತ್ರದ ಪಡಗಾನೂರ, ಇಂಗಳಗಿ, ಮುಳಸಾವಳಗಿ, ಕಡ್ಲೇವಾಡ, ಚಿಕ್ಕರೂಗಿ ಹಿಟ್ಟಿನಹಳ್ಳಿ ದೇವೂರ, ಮಣೂರ, ಜಾಲವಾದ ಗ್ರಾಮಗಳಲ್ಲಿ ವಲಸೆ ಬಂದು ಕೊರಂಟೈನದಲ್ಲಿರುವ ಜನರಿಗೆ ಹಾಲಿನ ಪಾಕಿಟು, ಬಿಸ್ಕಿಟು ದಿನಬಳಕೆ ವಸ್ತುಗಳನ್ನು ನೀಡಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವವರನ್ನು ಸಹಾಯ ಹಸ್ತ ನೀಡುವುದು ನನ್ನ ಪ್ರಥಮ ಆದ್ಯತೆಯಾಗಿದ್ದು, ಸುಮಾರು 15 ವರ್ಷಗಳಿಂದ ಬಡ ಜನರ ಸಹಾಯದಲ್ಲಿ ತೊಡಗಿರುವೆ. ಕೊರೊನಾ ಹಾವಳಿಯಿಂದ ತೊಂದರೆಯಾಗಿರುವ ಜನರನ್ನು ಸಂರಕ್ಷಿಸಬೇಕು ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ನನ್ನ ಪತ್ನಿ ಮಕ್ಕಳ ಆಶಯವಾಗಿದ್ದು, ಅವರ ಸಧಿಚ್ಛೆಯಂತೆ ಈ ಕಾರ್ಯ ಮಾಡುತ್ತಿದ್ದೇನೆ. ನನಗೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಎರಡು ಮತಕ್ಷೇತ್ರಗಳು ಒಂದೆ ಆಗಿವೆ. ಕೊರೊನಾ ಹಾವಳಿ ಮುಗಿಯುವವರೆಗೂ ತಮ್ಮ ಜೊತೆ ಇರುತ್ತೇನೆ ಯಾವುದೇ ರೀತಿಯ ಭಯ ಆತಂಕ ಬೇಡ. ನಿಮಗ್ಯಾರಿಗೂ ಕೊರೊನಾ ಭಯ ಬೇಡ ಸರಕಾರ ನಿಮ್ಮ ಬೆಂಬಲಕ್ಕೆ ನಿಂತಿದ್ದು, ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತಿದೆ. ನೀವು 14 ದಿನಗಳ ನಂತರ ಮನೆಗೆ ಹೋಗುವಾಗ ಪ್ರತಿಯೊಬ್ರಿಗೂ ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಹಾಲು ದಿನನಿತ್ಯ ವಸ್ತುಗಳನ್ನು ನೀಡಿದರು. ಡಾ. ಗುರುರಾಜ ಗಡೇದ, ಪ್ರವೀಣ ಹುಗ್ಗಿ, ಸಾಹೇಬಗೌಡ ಪಾಟೀಲ ವಣಕಿಹಾಳ, ಲಕ್ಷ್ಮಿಪುತ್ರ ಕುಂಬಾರ, ಮಹಾಂತೇಶ ದೊಡಮನಿ ಸೇರಿದಂತೆ ಹಿತೈಸಿಗಳು ಅಭಿಮಾನಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.

error: Content is protected !!