ಮಧುಮೇಹಕ್ಕೆ ಸೈಕ್ಲಿಂಗ್ ಮದ್ದು ಎಂಬ ಸಂದೇಶ ಸಾರುತ್ತಾ ನಗರದಲ್ಲಿ ಇಂದು ಸೈಕ್ಲಿಂಗ್ ಜಾಗೃತಿ ಜಾಥಾ

BI ಬಿಜಾಪುರ : ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಆಸ್ಪತ್ರೆ ವತಿಯಿಂದ ಮಧುಮೇಹ ರೋಗದ ಕುರಿತ ಜಾಗೃತಿ ಅಭಿಯಾನ ಅಂಗವಾಗಿ ಮಧುಮೇಹಕ್ಕೆ ಸೈಕ್ಲಿಂಗ್ ಮದ್ದು ಎಂಬ ಸಂದೇಶ ಸಾರುತ್ತಾ ನಗರದಲ್ಲಿ ಇಂದು ಸೈಕ್ಲಿಂಗ್ ಜಾಗೃತಿ ಜಾಥಾ ನಡೆಸಲಾಯಿತು.
ಬೆ.7ಗಂ. ಗೋಲಗುಂಬಜ್ ಮುಂಭಾಗದಿಂದ ಆರಂಭಗೊಂಡ ಸೈಕ್ಲಿಂಗ್ ಜಾಥಾಕ್ಕೆ ಬಿ.ಎಲ್.ಡಿ.ಇ ಸ್ವಾಯತ್ತ ವಿವಿ ಉಪಕುಲಪತಿ ಡಾ.ಎಂ.ಎಸ್.ಬಿರಾದಾರ ಚಾಲನೆ ನೀಡಿದರು.
ಡಾ.ಎಂ.ಎಸ್.ಬಿರಾದಾರ, ಡಾ.ಅರವಿಂದ ಪಾಟೀಲ್, ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಗುಂಡಪ್ಪ, ಹಿರಿಯ ವೈದ್ಯರಾದ ಡಾ.ಅರುಣ ಇನಾಮದಾರ, ಡಾ.ಅಶೋಕ ನಾಯಕ, ಡಾ.ಎಲ್.ಎಸ್.ಪಾಟೀಲ್, ಡಾ.ಎಸ್.ಪಿ.ಚೌಕಿಮಠ ಸೇರಿದಂತೆ ನೂರಾರು ವೈದ್ಯರು ಸೈಕಲ್ ತುಳಿದು ಗಾಂಧಿವೃತ್ತ, ವಾಟರ್‍ಟ್ಯಾಂಕ್ ಮಾರ್ಗವಾಗಿ ಬಿ.ಎಲ್.ಡಿ.ಇ ಆಸ್ಸ್ಪತ್ರೆ ತಲುಪಿದರು.
ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು ಸೇರಿದಂತೆ ವೈದ್ಯಕೀಯ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಸೈಕ್ಲಿಂಗ್‍ನಲ್ಲಿ ಭಾಗವಹಿಸಿದ್ದರು.

error: Content is protected !!