ಬಿ.ಎಲ್.ಡಿ.ಈ ಆಸ್ಪತ್ರೆಯಲ್ಲಿ ತುರ್ತು ಸೇವೆ ಮಾತ್ರ ಲಭ್ಯ

BI ಬಿಜಾಪುರ : ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಮುನ್ನಚ್ಚರಿಕೆ ಹಿನ್ನಲೆಯಲ್ಲಿ ಅಗತ್ಯ ಆರೋಗ್ಯ ಸೇವೆ ತುರ್ತು ಸೇವೆ ಅವಶ್ಯಕತೆ ಇರುವವರು ಮಾತ್ರ ಆಸ್ಪತ್ರೆಗೆ ಭೇಟಿ ನೀಡಲು ವಿನಂತಿಸಲಾಗಿದೆ.
ಕರೋನಾ ಸೋಂಕು ರೋಗದ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟಲು, ಜನಸಂದಣಿ ತಪ್ಪಿಸಲು ಅಗತ್ಯವಿರುವವರು ಮಾತ್ರ ಆಸ್ಪತ್ರೆಗೆ ಭೇಟಿ ನೀಡಬೇಕು. ಒಳರೋಗಿಗಳಾಗಿ ದಾಖಲಾದವರನ್ನು ನೋಡಿಕೊಳ್ಳಲು ಒಬ್ಬರಿಗೆ ಮಾತ್ರ ಅವಕಾಶವಿದೆ. ತುರ್ತು ಚಿಕಿತ್ಸಾ ಘಟಕ, ಐಸಿಯುಗಳಲ್ಲಿ ರೋಗಿಯ ಸಂಬಂಧಿಕರಿಗೆ ಪ್ರವೇಶವಿಲ್ಲ ಎಂದು ಆಸ್ಪತ್ರೆ ಪ್ರಕಟಣೆ ಸ್ಪಷ್ಟ ಪಡಿಸಿದೆ.
ತುರ್ತು ಚಿಕಿತ್ಸೆಗಳು, ಕೊರೋನಾ ರೋಗ ಲಕ್ಷಣ ಹೊಂದಿದ ಎಲ್ಲರಿಗೂ ದಿನದ 24ಗಂಟೆಯೂ ಇಲ್ಲಿ ಚಿಕಿತ್ಸೆ ಲಭ್ಯವಿದ್ದು, ಈ ಸೇವೆಯನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ.

ಹೊರ ರೋಗಿಗಳ ವಿಭಾಗಗಳು (ಓಪಿಡಿ) ಬೆ.9 ಗಂಟೆಯಿಂದ ಮ.1 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತವೆ. ಉಳಿದ ಸೇವೆಗಳು ಎಂದಿನಂತೆ ಇರುತ್ತವೆ. ಸಾರ್ವಜನಿಕರು ಆಸ್ಪತ್ರೆಯ ಪ್ರಯೋಜನ ಪಡೆದುಕೊಳ್ಳಲು ಕೋರಿದೆ.

error: Content is protected !!