ಬಿ.ಎಲ್.ಡಿ.ಇ ಸಂಸ್ಥೆಯ ಡಾ.ರಾಘವೇಂದ್ರ ವಿ.ಕುಲಕರ್ಣಿ ಅವರಿಗೆ ಪ್ರೊ. ಕೆ.ರಘೊತ್ತಮ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ

BI ಬಿಜಾಪುರ : ಬಿ.ಎಲ್.ಡಿ.ಇ ಸಂಸ್ಥೆ ಆಡಳಿತಾಧಿಕಾರಿ ಡಾ.ರಾಘವೇಂದ್ರ ವಿ.ಕುಲಕರ್ಣಿ ಅವರಿಗೆ 2019ನೇ ಸಾಲಿನ ಪ್ರಸಿದ್ಧ ಪ್ರೊ. ಕೆ.ರಘೊತ್ತಮ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ಭಾರತೀಯ ಶಾರೀರ ಕ್ರಿಯಾ ಶಾಸ್ತç ಸಂಸ್ಥೆ ನೀಡುವ ಈ ಮಹತ್ವದ ಪ್ರಶಸ್ತಿಯನ್ನು ನೀಡಲಾಗಿದೆ.
ಡಾ.ರಾಘವೇಂದ್ರ ಕುಲಕರ್ಣಿ ಔಷಧಶಾಸ್ತç ಪ್ರಾಧ್ಯಾಪಕರಾಗಿದ್ದು, 102ಸಂಶೋಧನಾ ಪ್ರಬಂಧಗಳನ್ನು ದೇಶ-ವಿದೇಶಗಳಲ್ಲಿ ಮಂಡಿಸಿದ್ದು, ಅವರ 5ಸಂಶೋಧನೆಗಳಿಗೆ ಪೇಟೆಂಟ್ ಲಭ್ಯವಾಗಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ, ಕರ್ನಾಟಕ ಸರ್ಕಾರ ಮತ್ತು ರಾಜೀವಗಾಂಧಿ ವಿಶ್ವವಿದ್ಯಾಲಯಗಳಿಂದ ಔಷಧ ಅಭಿವೃದ್ಧಿ ಕುರಿತ ಸಂಶೋಧನೆಗೆ ಒಟ್ಟು 51ಲಕ್ಷಗಳ ಅನುದಾನವನ್ನು ಸಹ ಇವರು ಪಡೆದುಕೊಂಡಿದ್ದಾರೆ.
ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ್ ಹಾಗೂ ಆಡಳಿತ ಮಂಡಳಿ ಡಾ.ರಾಘವೇಂದ್ರ ಕುಲಕರ್ಣಿ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

error: Content is protected !!