ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ / ಆಸ್ಪತ್ರೆಯಲ್ಲಿ ಅಭ್ಯಸಿಸಿದ ಹಿಂದಿನ ವಿದ್ಯಾರ್ಥಿಗಳ ಸಮಾವೇಶ

BI ಬಿಜಾಪುರ : ಬಿ.ಎಲ್.ಡಿ.ಇ ಸಂಸ್ಥೆ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆಯಲ್ಲಿ ಅಭ್ಯಸಿಸಿದ ಹಿಂದಿನ ವಿದ್ಯಾರ್ಥಿಗಳ ಸಮಾವೇಶ ದಿ.29ರಂದು ರವಿವಾರ ಬೆ.10ಗಂ. ಜರುಗಲಿದೆ.
ಜಪಾನ್ ದೇಶದ ಟೋಕಿಯೊ ನಗರದಲ್ಲಿರುವ ನಿಪ್ಪೋನ್ ಆಯುರ್ವೇದ ಸ್ಕೂಲ್ ನಿರ್ದೇಶಕ ಡಾ.ಯು.ಕೆ.ಕೃಷ್ಣ ಮುಖ್ಯಅತಿಥಿಗಳಾಗಿ ಪಾಲ್ಗೊಂಡು, ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಆಯುರ್ವೇದ ಬಳಕೆ ಕುರಿತು ಮಾತನಾಡುವರು.
ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ್, ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಈ ಕಾಲೇಜಿನಲ್ಲಿ ಅಭ್ಯಸಿಸಿ, ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಆಯುಷ್ ಇಲಾಖೆ ನಿವೃತ್ತ ನಿರ್ದೇಶಕ ಡಾ.ಎಸ್.ಎಂ.ಅಂಗಡಿ, ಆಯುಷ್ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಎಸ್.ಜಿ.ಮಂಗಳಗಿ, ಭಾರತೀಯ ಆಯುರ್ವೇದ ವೈದ್ಯ ಪರಿಷತ್ (ಸಿಸಿಐಎಂ) ಮಾಜಿ ಸದಸ್ಯರಾದ ಡಾ. ಜಿ.ಬಿ.ಪಾಟೀಲ್, ಡಾ.ಎ.ಎಂ.ಗೌಡರ ಅಲ್ಲದೇ ಡಾ.ಎ.ವಿ.ಡಾಣಕಸಿರೂರ, ಡಾ.ಕೆ.ಬಿ.ನಾಗೂರ, ಡಾ.ಆರ್.ಎಸ್.ಸರಶೆಟ್ಟಿ, ಡಾ.ಎಂ.ಎಸ್.ಕರ್ಪೂರಮಠ, ಡಾ.ಅಶೋಕ ಎಂ.ವಾಲಿ, ಡಾ.ಅನುರಾಧ ಚಂಚಲಕರ ಹಾಗೂ ಡಾ.ಸಿ.ಪಿ.ಕುಪ್ಪಿ ಅವರನ್ನು ಸನ್ಮಾನಿಸಲಾಗುವದು ಎಂದು ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ತಿಳಿಸಿದ್ದಾರೆ.

error: Content is protected !!