ಬಿ.ಎಲ್.ಡಿ.ಇ.ಯ ಚಿಕ್ಕಮಕ್ಕಳ ವಿಭಾಗದ ಸೆಮಿನಾರ ಕೊಠಡಿಗೆ “ಡಾ.ಸಿ.ಆರ್.ಬಿದರಿ ಸೆಮಿನಾರ ಹಾಲ್” ಎಂದು ನಾಮಕರಣ

BI ಬಿಜಾಪುರ : ಬಿ.ಎಲ್.ಡಿ.ಇ. ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಖ್ಯಾತ ವೈದ್ಯರಾಗಿದ್ದ ಡಾ.ಸಿ.ಆರ್.ಬಿದರಿ ಅವರ ನೆನಪಿನಲ್ಲಿ ಚಿಕ್ಕಮಕ್ಕಳ ವಿಭಾಗದ ಸೆಮಿನಾರ ಕೊಠಡಿಗೆ “ಡಾ.ಸಿ.ಆರ್.ಬಿದರಿ ಸೆಮಿನಾರ ಹಾಲ್” ಎಂದು ನಾಮಕರಣ ಮಾಡಲಾಯಿತು.
ಮುಂಬಯಿನ ಖ್ಯಾತ ಎಂಡೊಕ್ರೊನಾಲಜಿಸ್ಟ್ ಡಾ.ಎಚ್.ಬಿ.ಚಂಡಾಲಿಯಾ ಉದ್ಘಾಟಿಸಿದರು. ಬಿ.ಎಲ್.ಡಿ.ಇ ಕುಲಪತಿ ಡಾ.ಎಂ.ಬಿ. ಪಾಟೀಲ ಇವರು ಅಧ್ಯಕ್ಷತೆ ವಹಿಸಿದ್ದರು. ಡಾ.ಸಿ.ಆರ್.ಬಿದರಿಯವರ ಪತ್ನಿ ಸುಲೋಚನಾ ಬಿದರಿ, ಪುತ್ರಿ ಆಶಾ ಎಂ.ಪಾಟೀಲ್, ಪುತ್ರರಾದ ಡಾ.ಆರ್.ಸಿ.ಬಿದರಿ, ವಿಜಯೇಂದ್ರ ಬಿದರಿ ಮತ್ತು ರವಿ ಬಿದರಿ ಹಾಗೂ ಕುಟುಂಬದ ಸದಸ್ಯರು, ಪ್ರಾಚಾರ್ಯ ಡಾ.ಅರವಿಂದ ಪಾಟೀಲ್ ಚಿಕ್ಕಮಕ್ಕಳ ವಿಭಾಗದ ಡಾ.ಎಸ್.ವಿ.ಪಾಟೀಲ್, ಡಾ.ಎಂ.ಎಂ.ಪಾಟೀಲ ಉಪಸ್ಥಿತರಿದ್ದರು.

error: Content is protected !!