ಬಿ.ಎಲ್.ಡಿ.ಇ ದಲ್ಲಿ “ಆಯುರ್ವೇದದಲ್ಲಿ ಸಂಶೋಧನೆ ಅವಕಾಶಗಳು” ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕೀರಣ

BI ಬಿಜಾಪುರ : ಬಿ.ಎಲ್.ಡಿ.ಇ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ “ಆಯುರ್ವೇದದಲ್ಲಿ ಸಂಶೋಧನೆ ಅವಕಾಶಗಳು” ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕೀರಣ ಶನಿವಾರ ಜರುಗಿತು.
ಬಿ.ಎಲ್.ಡಿ.ಇ ಸಂಗನಬಸವ ಸ್ವಾಮೀಜಿ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಬಿ.ಕೊಟ್ನಾಳ ವಿಚಾರ ಸಂಕೀರಣ ಉದ್ಘಾಟಿಸಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿಯೂ ಸಂಶೋಧನೆ ಇಂದು ಮಹತ್ವವನ್ನು ಪಡೆದುಕೊಂಡಿದೆ. ಪ್ರಾಚೀನ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಆಯುರ್ವೇದ ಶಾಸ್ತ್ರವನ್ನು ನಾವು ಸಂಶೋಧನಾತ್ಮಕ ದೃಷ್ಠಿಯಿಂದ ನೋಡುವ ಅಗತ್ಯ ಇದೆ. ಮತ್ತು ಸಂಶೋಧನೆಗೆ ಇಲ್ಲಿ ಹೆಚ್ಚಿನ ಅವಕಾಶಗಳು ಇವೆ. ವಿದ್ಯಾರ್ಥಿಗಳು ಹೆಚ್ಚು-ಹೆಚ್ಚು ತಮ್ಮ ನಿತ್ಯದ ಅಭ್ಯಾಸದ ಜೊತೆಗೆ ಸಂಶೋಧನಾ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.
ಡಾ.ಮಹಾಂತೇಶ ಬಿರಾದಾರ ಮುಖ್ಯ ಅತಿಥಿಯಾಗಿದ್ದರು. ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ಸುಹಾಸ ಕುಮಾರ ಶೆಟ್ಟಿ ಹೊಸ ಅನ್ವೇಷಣೆಯಲ್ಲಿ ಸಂಖ್ಯಾಶಾಸ್ತ್ರದ ಮಹತ್ವ, ಡಾ.ಪ್ರಮೋದ ಬರಗಿ ಹೊಸ ಅನ್ವೇಷಣೆಯಲ್ಲಿ ಮೂಲಭೂತ ಸಿದ್ದಾಂತಗಳು, ಡಾ.ಆನಂದ ಕಟ್ಟಿ ಹೊಸ ಅನ್ವೇಷಣೆಯಲ್ಲಿ ಆಯುರ್ವೇದ ಮಹತ್ವ ಕುರಿತ ವಿಚಾರ ಮಂಡಿಸಿದರು.
ಸಂಹಿತಾ, ಸಿದ್ದಾಂತ ವಿಭಾಗ ಮುಖ್ಯಸ್ಥೆ ಡಾ.ರೇಣುಕಾ ತೆನಹಳ್ಳಿ, ಡಾ.ಶೀಕರ ಹಿರೇಮಠ, ಡಾಆರ್.ಎ.ದೇಶಮುಖ, ಡಾ.ಸಚಿನ ಬಗಲಿ, ಡಾ.ಜೋತ್ನಾ ಬರಗಿ, ಡಾ.ರಾಕೇಶಕುಮಾರ ಗುಜ್ಜರ ಮತ್ತಿತರರು ಮಾತನಾಡಿದರು.
ರಾಜ್ಯದ ವಿವಿಧ ಆಯುರ್ವೇದ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಚಾರ ಸಂಕೀರಣದಲ್ಲಿ ಭಾಗವಹಿಸಿದ್ದರು.

error: Content is protected !!