ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ

BI ಬಿಜಾಪುರ : : ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ್ ವೈದ್ಯಕೀಯ ಆಸ್ಪತ್ರೆಯಲ್ಲಿ ಲಯನ್ಸ್ ಸಂಸ್ಥೆ ಜಮಖಂಡಿ, ಬಾಗಲಕೋಟ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಕರಿಸಿದ್ದೇಶ್ವರ ಸೇವಾ ಸಂಘ ಕೊಣ್ಣುರ ಸಹಯೋಗದಲ್ಲಿ ಜಮಖಂಡಿ ತಾಲೂಕಿನ ಕೊಣ್ಣುರ ಗ್ರಾಮದಲ್ಲಿ ಇತ್ತೀಚೆಗೆ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ 190ಕ್ಕೂ ಹೆಚ್ಚು ರೋಗಿಗಳಿಗೆ ತಪಾಸಣೆ ಮಾಡಲಾಯಿತು. ಶಸ್ತ್ರಚಿಕಿತ್ಸೆಗೆ ಅಗತ್ಯವಿದ್ದ 40ರೋಗಿಗಳಿಗೆ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಲಾಯಿತು ಎಂದು ನೇತ್ರ ವಿಭಾಗ ಮುಖ್ಯಸ್ಥ ಡಾ.ಸುನೀಲ ಬಿರಾದಾರ ತಿಳಿಸಿದ್ದಾರೆ.
ನೇತ್ರ ತಜ್ಞರಾದ ಡಾ.ವಲ್ಲಭ.ಕೆ., ಡಾ.ರಾಘವೇಂದ್ರ ಇಜೇರಿ, ಡಾ.ರಮ್ಯಾ ಕಾರಜೋಳ, ಡಾ.ಜ್ಯೋತಿ ಇಜೇರಿ ಮತ್ತಿತರರು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡಿದ್ದರು.

error: Content is protected !!