ಬಿ.ಎಂ.ಪಾಟೀಲ್ ಪಬ್ಲಿಕ್ ಸ್ಕೂಲ್ 10ನೇ ತರಗತಿ ಸಿಬಿಎಸ್‍ಸಿ ಫಲಿತಾಂಶದಲ್ಲಿ ಶೇ.100ರಷ್ಟು ಸಾಧನೆ

BI NEWS, ಬಿಜಾಪುರ : ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ್ ಪಬ್ಲಿಕ್ ಸ್ಕೂಲ್ 10ನೇ ತರಗತಿ ಸಿಬಿಎಸ್‍ಸಿ ಫಲಿತಾಂಶದಲ್ಲಿ ಶೇ.100ರಷ್ಟು ಸಾಧನೆ ಮಾಡಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ. ಪ್ರಥಮ ಸ್ಥಾನದಲ್ಲಿ ನಿರೀಕ್ಷಿತ ಹೂಗಾರ ಶೇ.97, ದ್ವಿತೀಯವಾಗಿ ದಿಶಾ ದೇಸಾಯಿ, ಪ್ರಿಯಂಕಾ ಹಟ್ಟಿ ಮತ್ತು ಮೇಘಾ ಬಿರಾದಾರ ತಲಾ ಶೇ.94.60 ಅಂಕ ಪಡೆದಿದ್ದು, ತೃತೀಯ ಸ್ಥಾನದಲ್ಲಿ ಚೈತನ್ಯ ಸಾಖರೆ ಶೇ.94, ಚಚುರ್ತ ಅಪೂರ್ವ ಶೇಗುಣಶಿ ಶೇ.93 ಅಂಕಗಳನ್ನು ಪಡೆದಿದ್ದಾರೆ. 8 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು, 32ವಿದ್ಯಾರ್ಥಿಗಳು ಶೇ.90-75, 27ವಿದ್ಯಾರ್ಥಿಗಳು ಶೇ.60-75, 10ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ ಸಿ.ಬಿ.ಎಸ್.ಸಿ ಬೋರ್ಡ್ ಪರೀಕ್ಷೆಯಲ್ಲಿ ಹಾಜರಾಗಿದ್ದ 77ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆ ಹೊಂದುವ ಮೂಲಕ ಶೇ.100ಕ್ಕೆ 100ರಷ್ಟು ಫಲಿತಾಂಶಕ್ಕೆ ಕಾರಣರಾಗಿದ್ದಾರೆ ಎಂದು ಸಂಸ್ಥೆ ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ ತಿಳಿಸಿದ್ದಾರೆ.

error: Content is protected !!