ಬಿಜಾಪುರ ನಗರದಲ್ಲಿ ಫೆ; 28 ಹಾಗೂ 29 ರಂದು ಉದ್ಯೋಗಮೇಳ ನಿರುದ್ಯೋಗ ಅಭ್ಯರ್ಥಿಗಳಿಗೆ ಸುವರ್ಣಾವಕಾಶ

BI ಬಿಜಾಪುರ : ಇದೇ ಫೆಬ್ರವರಿ 28 ಹಾಗೂ 29 ರಂದು ವಿಜಯಪುರ ನಗರದಲ್ಲಿ ಆಯೋಜಿಸಿರುವ ಉದ್ಯೋಗಮೇಳವು ನಿರುದ್ಯೋಗ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಕಲ್ಪಿಸಿದ್ದು, ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮನವಿ ಮಾಡಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಉದ್ಯೋಗಮೇಳ ಸಿದ್ದತೆಗಳ ಕುರಿತು ವಿವಿಧ ಉಪಸಮಿತಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಜಿಲ್ಲೆಯ ನಿರುದ್ಯೋಗ ವಿದ್ಯಾವಂತ ಅಭ್ಯರ್ಥಿಗಳಿಗೆ ಈ ಮೇಳದ ಮೂಲಕ ಸುವರ್ಣಾವಕಾಶ ಕಲ್ಪಿಸಿದ್ದು ಜಿಲ್ಲೆಯ ಜಾಲತಾಣ www.vijayapuraudyogmela.com ಅನ್‌ಲೈನ್ ಮೂಲಕ ಕಡ್ಡಾಯವಾಗಿ ನೊಂದಾಯಿಸಿಕೊಳ್ಳಲು ಸೂಚಿಸಿದೆ.
ಅದರಂತೆ ಉದ್ಯೋಗದಾತರು ಕೂಡಾ ಈ ಮೇಳದ ಸದೂಪಯೋಗ ಪಡೆಯಲು ಅವರು ತಿಳಿಸಿದ್ದಾರೆ.

ಉದ್ಯೋಗಮೇಳ ವ್ಯವಸ್ಥಿತವಾಗಿ ಆಯೋಜನೆ ಮತ್ತು ನಿರ್ವಹಣೆಗಾಗಿ ರಚಿಸಲಾದ ವ್ಯವಸ್ಥಾಪಕ ಸಮಿತಿ, ಮೂಲ ಸೌಕರ್ಯ, ಶಾಮಿಯಾನ ಹಾಗೂ ಕಾರ್ಯಕ್ರಮ ಸಮಿತಿ, ಪ್ರಚಾರ ಮತ್ತು ಪ್ರಕಟಣಾ ಸಮಿತಿ, ಆತಿಥ್ಯ ವ್ಯವಸ್ಥೆ ಸಮಿತಿ, ಉದ್ಯೋಗದಾತರ ಸಂಪರ್ಕ ಸಮಿತಿ, ನೋಂದಣಿ ಮತ್ತು ಮಾರ್ಗದರ್ಶನ ಸಮಿತಿ, ಆಮಂತ್ರಣ ಪತ್ರಿಕೆಗಳ ಸಿದ್ದತೆ ಮತ್ತು ವಿತರಣಾ ಸಮಿತಿ, ಸುರಕ್ಷತೆ ಸಮಿತಿ, ಸ್ಟಾಲ್‌ಗಳ ವಿತರಣೆ ಮತ್ತು ನಿರ್ವಹಣೆ ಸಮಿತಿ, ಉದ್ಯೋಗಾಕಾಂಕ್ಷಿಗಳ ಮತ್ತು ಗಣಕ ವಿಭಾಗ ಸಮಿತಿ, ಸಾರಿಗೆ ಸಂಪರ್ಕ ಸಮಿತಿ, ಸ್ವಚ್ಛತಾ ಸಮಿತಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಅಚ್ಚುಕಟ್ಟಾಗಿ ಉದ್ಯೋಗಮೇಳ ಹಮ್ಮಿಕೊಳ್ಳಲು ಸೂಚಿಸಿದರು.

ಈಗಾಗಲೇ ವಿಜಯಪುರ ನಗರದ ಐ.ಟಿ.ಐ ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾದ ಈ ಉದ್ಯೋಗಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಉದ್ಯೋಗದಾತರು/ ನಿಯೋಜಕರು(ಕಂಪನಿಗಳು) ತಮ್ಮಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳ ವಿವರಗಳೊಂದಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವಿಜಯಪುರ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, ತಾಲೂಕಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬ್ಯಾನರ್, ಆಟೋ ಮೂಲಕ ಪ್ರಚಾರ, ಆಕಾಶವಾಣಿ ಇನ್ನಿತರ ಮಾಧ್ಯಮಗಳ ಮೂಲಕ ಸೂಕ್ತ ಜಾಗೃತಿ ಮೂಡಿಸಬೇಕು. ಶಿಷ್ಠಾಚಾರದಂತೆ ಫೆಬ್ರವರಿ 28 ರಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಬೇಕು. ವಿವಿಧ ಬಸ್ ನಿಲ್ದಾಣಗಳಲ್ಲಿ ಜಿಂಗಲ್ಸ್ ಮೂಲಕ ಹಾಗೂ ಎನ್.ಐ.ಸಿ ವೆಬ್‌ಸೈಟ್ ಮೂಲಕವು ಅರಿವು ಮೂಡಿಸಬೇಕು. ಈ ಹಿಂದಿನ ಅನುಭವ ಆಧಾರದ ಮೇಲೆ ಅವಶ್ಯಕ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ರಮೇಶ ದೇಸಾಯಿ ಅವರು ಈ ಉದ್ಯೋಗಮೇಳದಲ್ಲಿ 5 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದ್ದು ಹೆಸರಾಂತ ಉದ್ಯೋಗದಾತರು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಇಲಾಖೆಯ ದೂ.ಸಂಖ್ಯೆ; 08352-250383, 297019 ಹಾಗೂ 260360 ಗೆ ಸಂಪರ್ಕಿಸಬಹುದಾಗಿದೆ. ಅದರಂತೆ ಇಮೇಲ್ ವಿಳಾಸ; dsdovijayapur2017@gmail.com ಇದ್ದು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಟಿ. ಸಿದ್ದಣ್ಣ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಸುನಂದಾ ಬಾಲಪ್ಪನವರ ವಂದಿಸಿದರು.

error: Content is protected !!