ಬಾಯಿಗೆ ಬಂದಹಾಗೆ ಹೇಳಿಕೆ ನೀಡುವದು ಸರಿಯಲ್ಲ : ಸರ್ತಾಜ್ ಬಿಳಗಿ

BI NEWS, ಬಿಜಾಪುರ : ಒಂದು ಜನ ಪ್ರತಿನಿಧಿಯಾಗಿ ,ಮಹಿಳಾ ಹಿರಿಯ ನಾಯಕಿಯಾಗಿ ರಾಜ್ಯದ ಗ್ರಹ ಸಚಿವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದು ಸಮಂಜಸವಲ್ಲ. ಶೋಭಾ ಕರಂದ್ಲಾಜೆಯವರು ಪತ್ರಿಕಾ ರಂಗದಲ್ಲಿ ಪ್ರಚಾರಕ್ಕಾಗಿ ಮೇಲಿಂದ ಮೇಲೆ ಸಜ್ಜನಿಯ ರಾಜಕಾರಣಿಗಳನ್ನ ಬಾಯಿಗೆ ಬಂದಹಾಗೆ ಹೇಳಿಕೆ ನೀಡುವದು ಸರಿಯಲ್ಲ, ಗ್ರಹ ಸಚಿವರಾದ್ ಸನ್ಮಾನ್ಯ ಡಾ .ಎಂ . ಬಿ .ಪಾಟೀಲ್ ರವರನ್ನು ಟೀಕಿಸುವ ಭರದಲ್ಲಿ ತಾನು ಒಂದು  ಹೆಣ್ಣು ಅನ್ನೋದನ್ನೇ ಮರೆತು ಕೀಳಮಟ್ಟದ ರಾಜಿಕೀಯ ಮಾಡೋದು ಕರಂದ್ಲಾಜೆ ವ್ಯಕ್ತಿತ್ವ ಹೆಂತದ್ದು ಅನ್ನೋದು ಅವರೇ ತೋರ್ಸಿ ಕೊಟ್ಟಿದ್ದಾರೆ .ಈ ಹಿಂದೆ  ಸುಳ್ಳು ಪ್ರಚಾರಗಿಟ್ಟಿಸಲು ಜೀವಂತವಿರುವ ವ್ಯಕ್ತಿಗಳಿಗೆ ಸತ್ತವರ ಪಟ್ಟಿಯಲ್ಲಿ  ಸೇರಿಸಿ ಕೇಂದ್ರ ಗ್ರಹ ಸಚಿವರಿಗೆ ಸುಳ್ಳು ಪತ್ರ ಕಳಿಸಿ ರಾಜ್ಯದ ಜನರ ಮುಂದೆ ನಗೆ ಪಾತ್ರಕ್ಕಿಡಾಗಿದ್ದು ಈದೇ ಮೂರ್ಖ ಶೋಭಾ ಕರಂದ್ಲಾಜೆ. ಶೋಭಾ ಕರಂದ್ಲಾಜೆ ಮೋದಿ ಹೆಸರಲ್ಲಿ ಚುನಾವಣೆ ಗೆದಿದ್ದು ವಿನಃ ತನ್ನ ಸ್ವಂತ ಬಲದಿಂದಲ್ಲ. ಆದರೆ ಡಾ . ಎಂ . ಬಿ ಪಾಟೀಲ್ ರವರು ಕರ್ನಾಟಕ ರಾಜ್ಯದಲ್ಲಿ ಆಧುನಿಕ ವೈಧ್ಯನಾನಿಕ ನೀರಾವರಿ ಯೋಜನೆಗಳ ಮೂಲಕ ಈಡಿ ರಾಜ್ಯವನ್ನ ಅಭಿವೃದ್ಧಿಗೊಳಿಸಿದ್ದಾರೆ,ಆದರಿಂದ ರೈತರು, ಬಡ ಜನರು ಕೂಡಿ ಎಂ .ಬಿ .ಪಾಟೀಲ್ ರವರಿಗೆ ಆಧುನಿಕ ಭಗೀರಥ  ಎಂದು ಬಿರುದನ್ನ ನೀಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ಲಕ್ಷ ಮತಂದಿದ ಗೆಲ್ಲಿಸಿದ್ದಾರೆ . ಇನ್ನಾದರೂ ಶೋಭಾ ಕರಂದ್ಲಾಜೆ ತನ್ನ ಹದ್ದುಬಸ್ತಿನಲ್ಲಿ ಎದ್ದೂ ತಮ್ಮ ಮತಕ್ಷೇತ್ರದ ಜನರ ಸಮಸ್ಸೆಗಳನ್ನ ಬಗೆಹರಿಸುವದಲ್ಲಿ ಗಮನ ಹರಿಸಬೇಕು ಎಂದು ಕೆಪಿಸಿಸಿ ಬೆಳಗಾವಿ ವಲಯದ ಅಲ್ಪಸಂಖ್ಯಾತರ ಉಪಾಧ್ಯಕ್ಷ ಸರ್ತಾಜ್ ಬಿಳಗಿ ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ನೀಡಿದ್ದಾರೆ.

error: Content is protected !!