ಬದುಕಿನ ಸಂಕಲ್ಪ ಶಕ್ತಿಯೇ – ಸಾಧನೆ : ಈಶ್ವರಚಂದ್ರ ಚಿಂತಾಮಣಿ

BI ಬಿಜಾಪುರ : ವ್ಯಕ್ತಿಯ ನೈಜ ಗೆಲವು ಇರುವುದು ಬಾಹ್ಯ ಪ್ರಪಂಚದಲ್ಲಲ್ಲ ಅವನ ಆಂತರ್ಯದಲ್ಲಿ ಯಾರು ಆಂತರಿಕ ಸ್ಥಿರತೆ ಹೊಂದಿರುತ್ತಾರೋ ಪ್ರತಿಕೂಲ ಸಂದರ್ಭದಲ್ಲಿ ವಿಚಲಿತರಾಗದೆ ಇರುತ್ತಾರೋ ಅಂತಹವರು ತಮ್ಮ ಜೀವನದಲ್ಲಿ ಸಫಲತೆಯೊಂದಿಗೆ ಸಮಾಜದಲ್ಲಿ ಉತ್ತಮವಾದ ಸ್ಥಾನಮಾನ ಸಂಪಾದಿಸುತ್ತಾರೆ. ಅಂತಹ ಗಟ್ಟಿ ಮನಸ್ಸಿನ ಸಾಧಕ ಈಶ್ವರಚಂದ್ರ ಚಿಂತಾಮಣಿ ಯವರು ಇಂದು ಜಿಲ್ಲಾ ಕಸಾಪ ಸಭಾ ಭವನದಲ್ಲಿ ವಯೋಶ್ರೇಷ್ಠ ಪ್ರಶಸ್ತಿ ಪಡೆದ ನಾಡಿನ ಹಿರಿಯ ಮಕ್ಕಳ ಸಾಹಿತಿ ಈಶ್ವರಚಂದ್ರ ಚಿಂತಾಮಣಿಯವರನ್ನು ಸನ್ಮಾನಿಸಿ ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರು ಮಾತನಾಡಿದರು.

ಚಿಂತಾಮಣಿಯವರು ವೃತ್ತಿಯಿಂದ ಶಿಕ್ಷಕರಾದ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಶ್ರೇಷ್ಠ ಸಾಧಕ ಸೇವೆಗಾಗಿ ತಮ್ಮ ಮುಡಿಗೇರಿಸಿಕೊಂಡವರು. ಸಮಾಜಮುಖಿಯಾದ ಅವರ ವ್ಯಕ್ತಿತ್ವದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ ಅನೇಕ ಉತ್ತಮ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅವರದು. ಅವರು ಒಬ್ಬ ಜಿಲ್ಲೆಯ ಬಹುಮುಖ ವ್ಯಕ್ತಿತ್ವದ ಪ್ರತಿಭಾವಂತರು ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಸುಭಾಸ ಯಾದವಾಡ ಮಾತನಾಡಿದರು. ಚಿಂತಾಮಣಿ ಎಂಬುವುದು ಸಾಮಾಜಿಕ ಚಿಂತನೆಗಳ ಮೊತ್ತ. ಬಿಜ್ಜರಗಿ ಶ್ರೇಷ್ಠವಾದ ಜನ್ಮಭೂಮಿ. ಭಾಸ್ಕರಾಚಾರ್ಯ, ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಶ್ರೀಗಳು, ಮಾನವ ಕಂಪ್ಯೂಟರ್ ಎನಿಸಿಕೊಂಡ ಅಶೋಕ ಬಿರಾದಾರ ಹಾಗೂ ಈಶ್ವರಚಂದ್ರ ಚಿಂತಾಮಣಿ ಜನಿಸಿದ್ದೆ ಅಲ್ಲಿ. ಕಾರಣ ಅವರು ಜನಿಸಿದ ಜಿಲ್ಲೆಯಲ್ಲಿಯೇ ನಾವು ಜನಿಸಿದ್ದು ನಮ್ಮ ಸೌಭಾಗ್ಯ ಎಂದರು.

ಸನ್ಮಾನ ಸ್ವೀಕರಿ ಈಶ್ವರಚಂದ್ರ ಚಿಂತಾಮಣಿ ಮಾತನಾಡಿ, ಮನುಷ್ಯ ತನ್ನ ಜೀವಿತ ಅವಧಿಯಲ್ಲಿ ಅನೇಕ ಭಾಂದವ್ಯಗಳ ಜೊತೆ ಬದುಕಿನ ಹಾದಿಯಲ್ಲಿ ಸ್ನೇಹ, ಪ್ರೀತಿಯೊಂದಿಗೆ ವಿದ್ಯೆ, ಪ್ರಶಸ್ತಿಗಳೆಲ್ಲ ದೈವಕೃಪೆಯಿಂದಲೇ ಒದಗಿರುತ್ತವೆ. ಅದರ ಹಿಂದೆ ಸಾಧನೆಯ ಪ್ರಾಮಾಣಿಕ ಪರಿಶ್ರಮ ಅಡಗಿರುತ್ತದೆ.
ನನಗೆ ದೊರೆತ ಈ ಪ್ರಶಸ್ತಿ ಈ ಜಿಲ್ಲೆಗೆ ದೊರೆತ ಗೌರವ. ಭಾಷೆ, ಸಂಸ್ಕøತಿ, ಜೀವನ ಶೈಲಿ ಎಲ್ಲದರ ಮೇಲೂ ಇಂದು ಅನ್ಯ ಸಂಸ್ಕøತಿಯ ಅಕ್ರಮವಾಗುತ್ತಿದೆ. ಆದರೆ ಯಾರಿಂದಲೂ ಭಾರತೀಯ ಸಂಸ್ಕøತಿ ಮೂಲ ಸೆಲೆಯನ್ನು ಬತ್ತಿಸಲಾಗುವುದಿಲ್ಲ. ಪ್ರತಿಯೊಬ್ಬರ ಬದುಕಿಗೆ ಗುರಿಯೊಂದೆ ಬೇಟೆ, ಅದರೊಂದಿಗೆ ಈ ಜೀವನ ಮೌಲ್ಯಗಳು ಬೇಕು, ಅದನ್ನು ಈಡೇರಿಸುವ ಸಂಕಲ್ಪಶಕ್ತಿ ಬೇಕೆ ಬೇಕು. ಎಂತಹ ಕಷ್ಟದ ಕ್ಷಣವಾದರೂ ಸಂದ್ಗಿದ್ದತೆ ಪರಿಸ್ಥಿತಿ ಇದ್ದರೂ ಸ್ಥಿತ ಪ್ರಜ್ಞೆಯಿಂದ ಆಚಾರ ವಿಚಾರದಲ್ಲಿ ವ್ಯತ್ಯಾಸವಿಲ್ಲದ ನಿರ್ಮಲ ಅಂತಃಕರಣ ನಮ್ಮದಾದಾಗ ಬದುಕು ಸಾರ್ಥಕಗೊಳ್ಳುತ್ತದೆ ಎಂದರು.

ಸಮಾರಂಭದಲ್ಲಿ ವಿದ್ಯಾರಾಣಿ ತುಂಗಳ, ಬಸವರಾಜ ಕುಂಬಾರ, ಜಿ.ಡಿ.ಕೊಟ್ನಾಳ, ಎಸ್.ಐ.ನಡುವಿನಕೇರಿ, ಲಕ್ಷ್ಮೀ ದೇಸಾಯಿ, ಬಿ.ಆರ್.ಬನಸೋಡೆ, ಸೋಮಶೇಖರ ಕುರ್ಲೆ, ಆರ್.ಎಂ.ಕಬಾಡೆ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

error: Content is protected !!