ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ದೇವರಹಿಪ್ಪರಗಿ ಪಟ್ಟಣದಲ್ಲಿ ಬರಹತ್ ಪ್ರತಿಭಟನೆಯೊಂದಿಗೆ ಶಾಂತಿಯೂತ ಬಂದ್ ಆಚರಿಸಲಾಯಿತು

BI ದೇವರಹಿಪ್ಪರಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ದೇವರಹಿಪ್ಪರಗಿ ಪಟ್ಟಣದಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಬೃಹತ್ ಪಗತೀಭಟನೆ ಹಾಗೂ ಶಾಂತಿಯೂತ ಬಂದ್ ನಡೆದು ತಹಶೀಲ್ದಾರ ಅವರಿಗೆ ಮನವಿ ನಡೆಸಲಾಯಿತು.
ಮಂಗಳವಾರ ಪಟ್ಟಣದ ಟಿಪ್ಪುಸುಲ್ತಾನ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ದ ದಿಕ್ಕಾರ ಕೂಗುತ್ತ ರಾಷ್ಟ್ರೀಯ ಹೆದ್ದಾರಿ ಮೂಲಕ ಡಾ. ಅಂಬೇಡ್ಕರ ವೃತ್ತದಲ್ಲಿ ಸಭೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಬ್ದುಲಗನಿ ಮಕಾನದಾರ, ಜಮೀಲ್ ಮೌಲಾನಾ ಸಾದಿಕ್ ಸುಂಬಡ, ಮಹಿಬೂಬ ಗೋಗಿ ಸುರೇಶಗೌಡ ಪಾಟೀಲ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯಿದೆ ಕೇವಲ ಒಂದುಯ ಸಮೂದಾಯವನ್ನು ಗುರಿಯಾಗಿಟ್ಟುಕೊಂಡು ರಚಿಸಿದಂತಾಗಿದೆ. ಇದರಿಂದ ಬೇದ ಭಾವ ಮಾಡಿದಂತಾಗುತ್ತದೆ. ದೇಶದಲ್ಲಿ ನಾವೆಲ್ಲ ಪ್ರತಿಯೊಬ್ಬರು ಸಹೋಧರತ್ವ ಭಾವದಿಂದ ಬದುಕುತ್ತಿದ್ದೇವೆ. ಆದರೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮೀತಷಾ ಅವರು ದೇಶವನ್ನು ಧರ್ಮದ ಆಧಾರದ ಮೇಲೆ ಬೇರ್ಪಡಿಸುತ್ತಿದ್ದಾರೆ. ಇಡೀ ದೇಶದ ಬಹುಪಾಲು ಜನ ವಿರೋಧಿಸುತ್ತಿದ್ದರೂ ವ್ಹೋಟ್ ಬ್ಯಾಂಕ ರಾಜಕಾರಣಕಲ್ಕಾಗಿ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತಂದಿರುತ್ತಾರೆ. ತಕ್ಷಣವೇ ಒಂದು ಸಮೂದಾಯಕ್ಕೆ ಮಾರಕವಾಗುವ ಈ ಕಾಯಿದೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಡಾ. ದಸ್ತಗೀರ ಮುಲ್ಲಾ, ಎ ಡಿ ಮುಲ್ಲಾ, ಅನೀತಾ ಡಿಸೋಜಾ,ಪ್ರಕಾಶ ಗುಡಿಮನಿ, ಶಿವಾಜಿ ಮೆಟಗಾರ,ಶರಣು ಜಮಖಂಡಿ ಮಾತನಾಡಿ ಇಡೀ ದೇಶಾದ್ಯಂತ ಪ್ರತಿಭಟನೆಗೆ ದಾರಿ ಮಾಡಿಕೊಟ್ಟಿರುವ ಕಾಯಿದೆ ಯಾವ ಪುರುಷಾರ್ಥಕ್ಕಾಗಿ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿಯವರು ಸ್ಪಷ್ಟ ಪಡಿಸಬೇಕು. ಭಾರತದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಅಭಿವೃದ್ಧಿ ಕಡೆಗೆ ಗಮನ ಕೊಡದೆ ಸ್ವಾರ್ಥಕ್ಕಾಗಿ ಕಾಯಿದೆ ಜಾರಿಗೆ ತರುತ್ತಿರುವುದು ವಿಷಾಧನೀಯ ಎಂದರು.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಬಶೀರಶೇಠ ಬೇಪಾರಿ, ರಿಯಾಜ ಯಲಗಾರ, ಮುನ್ನಾ ಮಳಖೇಡ, ಮಹಮ್ಮದಗೌಸ್ ಹುಂಡೇಕಾರ, ಮುರ್ತುಜ ತಾಂಬೋಳಿ,ಮಹಮ್ಮದರಫೀಕ ಪಾನಪರೋಷ, ಇಕ್ಬಾಲ್ ಬಿಜಾಪುರ, ಹಸನ್ ನದಾಫ, ಲಕ್ಕಪ್ಪ ಬಡಿಗೇರ, ತೌಶೀಫ ನದಾಫ, ನಿಸ್ಸಾರ ಚೌಧರಿ, ಇಮ್ತಿಯಾಜ ಮುಲ್ಲಾ, ಬಂದಗೀಸಾಬ ವಠಾರ, ರಾಜು ಆಲಗೂರ, ಇಸ್ಮಾಯಿಲ ಬಾಗವಾನ, ಕಾಶೀಮ ನಾಯ್ಕೋಡಿ, ನಜೀರ ಬೀಳಗಿ, ದಾವಲಸಾ ಪಿಂಜಾರ,ಯಾಕೂಬ ತಾಂಬೋಳಿ, ಯಾಶೀನ ಚೌಧರಿ ಸೇರಿದಂತೆ ಮತ್ತೀತರರು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರು ಪಾಲ್ಗೊಂಡಿದ್ದರು.
ಈ ಮುಂಚೆ ಕರೆ ನೀಡಿದಂತೆ ಪ್ರತಿಭಟನೆ ಅಂಗವಾಗಿ ಕೆಲ ಕಾಲ ಅಂಗಡಿ ಮುಗಟ್ಟುಗಳು ಮುಚ್ಚಿದ್ದವು ಕೆಲವರು ಸ್ವಯಂಪ್ರೇರಿತರಾಗಿ ಮುಚ್ಚಿದ್ದು ಕಂಡು ಬಂತು. ಪ್ರತಿಭಟನೆಯಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ದೇವರಹಿಪ್ಪರಗಿ ಬಂದ್ ಕರೆಗೆ ಪಕ್ಷಾತೀತವಾಗಿ ಜೆಡಿಎಸ್ ಕಾಂಗ್ರೆಸ್, ದಲಿತಪರ ಸಂಘಟನೆಗಳು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ಪಡಿಸಿದ್ದು ವಿಶೇಷವಾಗಿತ್ತು.

error: Content is protected !!