ಪೌರತ್ವ ಕಾಯಿದೆ ಕುರಿತು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಸೋಮನಗೌಡ ಪಾಟೀಲ ಸಾಸನೂರ

BI : ಪೌರತ್ವ ಕಾಯಿದೆಯಿಂದ ದೇಶದಲ್ಲಿನ ಯಾವೊಬ್ಬ ಭಾರತೀಯರಿಗೂ ತೊಂದರೆಯಾಗದು ವಿನಾಕಾರಣ ಕಾಂಗ್ರೆಸ್‌ನವರು ದೇಶದಲ್ಲಿ ಅರಾಜಕತೆ ಉಂಟು ಮಾಡಿದ್ದಾರೆ ಎಂದು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಪೌರತ್ವ ಕಾಯಿದೆ ಕುರಿತು ಜಾಗೃತಿ ಮೂಡಿಸುತ್ತ, ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯಿದೆಯಿಂದ ಯಾವುದೇ ರೀತಿಯ ತೊಂದರೆಯಿರದಿದ್ದರೂ ಕಾಂಗ್ರೆಸ್ ತನ್ನ ಬೇಳೆ ಬೇಯಿಸಿಕೊಳ್ಳಲು ಒಂದು ಸಮೂದಾಯವನ್ನು ಎತ್ತಿ ಕಟ್ಟುತ್ತಿದೆ. ಪ್ರಧಾನಿಗಳು ರಾಜ್ಯದ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಆದರೂ ಸ್ವಾರ್ಥ ರಾಜಕೀಯಕ್ಕಾಗಿ ಅಮಾಯಕರನ್ನು ಬೀದಿಗಿಳಿಸುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ ಅಲ್ಲಾಪುರ ಮಾತನಾಡಿ, ಪೌರತ್ವ ಕಾಯಿದೆ ಯಾರ ವಿರೋಧವೂ ಅಲ್ಲ ಪರವೂ ಅಲ್ಲ ದೇಶದ ಒಳತಿಗಾಗಿ ಜಾರಿಗೆ ತರಲಾಗುತ್ತಿದೆ. ಇದು 2014 ರ ಚುನಾವಣಾ ಪ್ರಣಾಳಿಕೆಯಲ್ಲಿಯೇ ಘೋಷಿಸಲಾಗಿತ್ತು. ಆದರೂ ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಕೆಲಸವಿಲ್ಲದೆ ಪೌರತ್ವ ವಿರೋಧಿಸುತ್ತಿವೆ. ಅದಕ್ಕಾಗಿ ಬಿಜೆಪಿ ಪಕ್ಷದ ವತಿಯಿಂದ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಮಹಾಸಂಪರ್ಕ ಅಭಿಯಾನ ಪ್ರಾರಂಭಿಸಲಾಗಿದೆ. ಕ್ಷೇತ್ರದ 6 ಮಹಾಶಕ್ತಿ ಕೇಂದ್ರಗಳ ಮೂಲಕ 353 ಭೂತಗಳಿಗೂ ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿತ್ತಿ ಪತ್ರ ಹಂಚುವುದರ ಜೊತೆಗೆ ಪೌರತ್ವ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಅದಕ್ಕಾಗಿ ಎಲ್ಲರು ಸಹಕಾರ ನೀಡಬೇಕು. ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಈ ಕುರಿತು ಸಂದೇಶ ತಲುಪಿಸಬೇಕು ಎಂದು ಕೋರಿದರು.
ಮಂಡಲ ಅಧ್ಯಕ್ಷ ಭೀಮನಗೌಡ ಸಿದರೆಡ್ಡಿ, ರಮೇಶ ಮಸಬಿನಾಳ, ರಾಜು ಮೆಟಗಾರ, ಮಡುಗೌಡ ಬಿರಾದಾರ, ಸಂಗಮೇಶ ಮಸಬಿನಾಳ, ಶಂಖರಗೌಡ ಕೋಟಿಖಾನಿ, ಸೋಮು ಹಿರೇಮಠ,ರಾಘವೇಂದ್ರ ಗುಡಿಮನಿ, ಕಾಶೀನಾಥ ಚವ್ಹಾಣ, ಭೀಮನಗೌಡ ಲಚ್ಯಾಣ,ರಾವುತ್ ಅಗಸರ, ಶ್ರೀಕಾಂತ ಬಜಂತ್ರಿ,ದಿನೇಶ ಪಾಟೀಲ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಸಾರ್ವಜನಿಕರು ಪಾಲ್ಗೊಂಡಿದ್ದರು.

error: Content is protected !!