ಪೋಲಿಯೋ ಮುಕ್ತ ಜಿಲ್ಲೆಗೆ ಪಣ ತೊಡಲು ಕರೆ

BI NEWS, ಬಿಜಾಪುರ : Mar,10- ಜಿಲ್ಲೆಯನ್ನು ಪೋಲಿಯೋ ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳೊಂದಿಗೆ ಎಲ್ಲರೂ ಪಣತೊಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.

ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ನಗರದ ನಗರದ ಮರಾಠ ಸಮಾಜ ಭವನದಲ್ಲಿಂದು ಪೋಲಿಯೋ ಮೇಲಿನ ನಮ್ಮ ಗೆಲುವಿಗೆ ಕೇವಲ 2 ಹನಿಗಳು ಸಾಕು ಪೋಲಿಯೋ ಮೇಲಿನ ಗೆಲುವನ್ನು ಮುಂದುವರೆಸೋಣ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಮಕ್ಕಳಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಪೋಲಿಯೋ ಮುಕ್ತ ದೇಶವನ್ನಾಗಿಸುವ ಗುರಿಯು ಪೂರ್ಣಹಂತದಲ್ಲಿದ್ದು, ಮಕ್ಕಳ ಉತ್ತಮ ಆರೋಗ್ಯಕ್ಕೆ ಪೋಷಕರು ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಆಯಾ ವಾರ್ಡಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಮುಂಜಾಗ್ರತ ಕ್ರಮಕೈಗೊಂದು ಕಾರ್ಯಕ್ರಮದ ಯಶಸ್ವಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ 0-5 ವರ್ಷದ ಒಟ್ಟು 277379 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನಗರ ನರ್ಸಿಂಗ್ ಹಾಗೂ ಪ್ಯಾರಾ ಮೇಡಿಕಲ್ ವಿದ್ಯಾರ್ಥಿಗಳ ಒಳಗೊಂಡು ಒಟ್ಟು-1313 ತಂಡಗಳನ್ನು ರಚಿಸಲಾಗಿದ್ದು, ಮೇಲ್ವಿಚಾರಣೆಗಾಗಿ 257 ಸಿಬ್ಬಂದಿ ನೇಮಿಸಿದೆ ಮತ್ತು ತಾಲೂಕಾ ನೋಡಲ ಅಧಿಕಾರಿಗಳನ್ನು ಆಯಾ ತಾಲೂಕಿಗಳಿಗೆ ಮೇಲ್ವಿಚಾರಣೆ ಮಾಡಲು ಅದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಆಯಾ ಭಾಗದ ಉಸ್ತುವಾರಿಯನ್ನು ಹೊಂದಿರುತ್ತಾರೆ. ವಿಶೇಷವಾಗಿ ತೋಟದ ಮನೆ, ಇಟ್ಟಂಗಿ ಬಟ್ಟಿ, ಅಲೇಮಾರಿ ಜನಾಂಗ, ಕಟ್ಟಡ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಲಸಿಕೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮಹೇಂದ್ರ ಕಾಪ್ಸೆ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಮಗಿಮಠ, ಸದಸ್ಯರಾದ ರಾಹುಲ ಜಾಧವ, ಉಮೇಶ ವಂದಾಲ, ನೋಡಲ್ ಅಧಿಕಾರಿ ಡಾ.ಜಯರಾಜ ಡಾ.ಮುಕುಂದ ಗಲಗಲಿ,ಡಾ.ಸುರೇಶ ಚವ್ಹಾಣ, ಡಾ.ಕೆ.ಡಿ.ಗುಂಡಬಾವಡಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಸುರೇಶ ಹೊಸಮನಿ ಸ್ವಾಗತಿಸಿದರು.

error: Content is protected !!