ಪೊಲೆಂಡ್ ಲುಬ್ಲಿನ್ ತಾಂತ್ರಿಕ ವಿವಿ, ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯೊಂದಿಗೆ ಶೈಕ್ಷಣಿಕ ಒಪ್ಪಂದ

BI ಬಿಜಾಪುರ : ಪೊಲೆಂಡ್ ದೇಶದ ಲುಬ್ಲಿನ್ ತಾಂತ್ರಿಕ ವಿಶ್ವವಿದ್ಯಾಲಯದ ತಂಡ ಇಂದು ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್‌ರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ಪೊಲೆಂಡ್ ಲುಬ್ಲಿನ್ ತಾಂತ್ರಿಕ ವಿವಿ ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯೊಂದಿಗೆ ಶೈಕ್ಷಣಿಕ ಒಪ್ಪಂದ ನಿಮಿತ್ತ ವಿಜಯಪುರಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಇಂದು ವಿಜಯಪುರದಲ್ಲಿ ಮಾಜಿ ಗೃಹ ಮತ್ತು ನೀರಾವರಿ ಸಚಿವರಾಗಿರುವ ಎಂ.ಬಿ.ಪಾಟೀಲ್‌ರವರನ್ನು ಭೇಟಿ ಮಾಡಿದ ವಿವಿಯ ಆಟೊಮೇಶನ್ ವಿಭಾಗ ಮುಖ್ಯಸ್ಥ ಪ್ರೊ. ಜಿ.ಲಿಟಕ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪಿಯೊಟರ್, ಪೊಲೆಂಡ್ ವಿವಿಯ ಅಂತರ್ ರಾಷ್ಟ್ರೀಯ ವ್ಯವಹಾರಗಳ ಕಾರ್ಯದರ್ಶಿ ಬೀಟಾ ಮಿಟುರಾರವರನ್ನು ಒಳಗೊಂಡ ತಂಡ ವಿಜಯಪುರ ಜಿಲ್ಲೆಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆಯಿತು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆ ಇತಿಹಾಸವನ್ನು ಸಹವಿವರವಾಗಿ ಬಿಚ್ಚಿಟ್ಟ ಎಂ.ಬಿ.ಪಾಟೀಲ್ ಸಮಾನತೆ ಎನ್ನುವ ಆಚರಣೆಯನ್ನು ಕಲ್ಪಿಸಿಕೊಳ್ಳಲು ಅಸಾಧ್ಯವಾಗಿದ್ದ ಕಾಲದಲ್ಲಿ ಇದೇ ನೆಲದಿಂದ ಹುಟ್ಟಿ ಬಂದ ಬಸವಣ್ಣ ಬಹುದೊಡ್ಡ ಸಮಾಜಿಕ ಆಂಧೋಲನವನ್ನು ಆರಂಭಿಸುವ ಮೂಲಕ ಶರಣ ಕ್ರಾಂತಿಗೆ ಕಾರಣರಾದರು. ಅವರ ಜನಿಸಿದ ಜಿಲ್ಲೆ ವಿಜಯಪುರ 16ನೇ ಶತಮಾನದಲ್ಲಿ ಇಡೀ ಭಾರತಕ್ಕೆ ಮಾದರಿಯಾಗಿದ್ದ ರಾಜ್ಯಭಾರವನ್ನು ಮಾಡಿದ್ದ ಆದಿಲ್ ಶಾಹಿ ಅರಸರ ಕೇಂದ್ರ ಸ್ಥಾನ ವಿಜಯಪುರ. ಇಲ್ಲಿ ಪ್ರವಾಸೊದ್ಯಮ, ಕೃಷಿ, ಕೈಗಾರಿಕೆಗೆ ಅತೀ ಹೆಚ್ಚಿನ ಅವಕಾಶಗಳಿದ್ದು, ಅದಕ್ಕೆ ಪೂರಕ ಎಲ್ಲ ವಾತಾರಣವು ಇಲ್ಲಿ ಸೃಷ್ಠಿಯಾಗಿದೆ ಎಂದು ವಿವರಿಸಿದರು.

ಲುಬ್ಲಿನ್ ತಾಂತ್ರಿಕ ವಿವಿ ಬಿ.ಎಲ್.ಡಿ.ಇ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಕಾಲೇಜಿನೊಂದಿಗೆ ಸಂಶೋಧನೆ ಹಾಗೂ ಪ್ರಾಧ್ಯಾಪಕರ ವಿನಿಮಯಕ್ಕೆ, ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜಿನೊಂದಿಗೆ ಪರಸ್ಪರ ಔಷಧ ತಂತ್ರಜ್ಞಾನ ವರ್ಗಾವಣೆಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದೊಂದಿಗೆ ಸಹ ಮಾತುಕತೆಯಾಗಿದ್ದು, ಮುಂದಿನ ದಿನಗಳಲ್ಲಿ ಪರಸ್ಪರ ಒಪ್ಪಂದ ಆಗಲಿದೆ.
ನಂತರದಲ್ಲಿ ಎಂ.ಬಿ.ಪಾಟೀಲ್‌ರ ಸಚಿವರಾಗಿದ್ದ ಕಾಲದಲ್ಲಿ ವಿಜಯಪುರದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳಾದ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ಬೆಳೆಸಿದ ಸಸ್ಯೋದ್ಯಾನ, ಭೂತನಾಳ ಕೆರೆಗೆ ನೀರು ತುಂಬಿಸುವ ಯೋಜನೆ ಹಾಗೂ ತಿಡಗುಂದಿ ಅಕ್ವಾಡೆಕ್ಟ್ ವೀಕ್ಷಿಸಿದ ತಂಡ ಈ ಯೋಜನೆಗಳ ಕುರಿತು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿತು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ, ತಾಂತ್ರಿಕ ಕಾಲೇಜು ಪ್ರಾಚಾರ್ಯ ಡಾ.ಅತುಲ್ ಆಹಿರಿ, ನೀರಾವರಿ ತಜ್ಞ ಡಾ.ವಿ.ಪಿ.ಹುಗ್ಗಿ, ಡಾ.ಮಹಾಂತೇಶ ಬಿರಾದಾರ, ಪ್ರೊ.ಮುರುಗೇಶ ಪಟ್ಟಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ವಿಜಯಪುರ ಜಿಲ್ಲೆಯ ಕುರಿತು ಮಾಹಿತಿ ನೀಡಿದರು.

error: Content is protected !!